ಚಂಡೀಗಢ: ಪಂಜಾಬಿನ ಖ್ಯಾತ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲಿಗೆ ಬಂದಿದೆ.
ಮೂಸೆ ವಾಲಾ ಅವರನ್ನು ಎಕೆ 47 ಬಳಸಿ ಹತ್ಯೆ ಮಾಡಲಾಗಿತ್ತು ಎಂದು ಅಂದಾಜಿಸಲಾಗಿತ್ತು. ಆದರೆ ಪೊಲೀಸರು ತನಿಖೆ ಮಾಡುವ ವೇಳೆ ಖಾಲಿ ಗುಂಡು ಸಿಕ್ಕಿದೆ. ಇದನ್ನು ಪೊಲೀಸರು ಪರಿಶೀಲನೆ ಮಾಡಿದಾಗ ಅದು ರಷ್ಯಾದ ಎಎನ್-94 ರೈಫಲ್ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಮೂಸೆ ವಾಲಾ ಅವರನ್ನು ಹಂತಕರು ಪ್ಲಾನ್ ಮಾಡಿ, ಪ್ರತ್ಯೇಕವಾದಿಗಳನ್ನು ಸಂಪರ್ಕಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರಿಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಹೈ ಅಲರ್ಟ್ – ಜಾಮೀಯಾ ಮಸೀದಿ ಸುತ್ತ 144 ನಿಷೇಧಾಜ್ಞೆ ಜಾರಿ
Advertisement
Advertisement
ಈ ದುಷ್ಕರ್ಮಿಗಳಿಗೆ ರಷ್ಯಾದ ಎಎನ್-94 ರೈಫಲ್ ಹೇಗೆ ಸಿಕ್ಕಿತು. ಅದರಲ್ಲಿಯೂ ಪಂಜಾಬ್‍ಗೆ ರಷ್ಯಾ ರೈಫಲ್ ಹೇಗೆ ಬಂತು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾಕಂದ್ರೆ ಈ ರೈಫಲ್‍ಗಳನ್ನು ರಷ್ಯಾಸೇನಾ ಪಡೆ ಮಾತ್ರ ಬಳಸುತ್ತದೆ. ಐರಿಷ್ ರಿಪಬ್ಲಿಕ್ ಆರ್ಮಿ ಎಂಬ ಪ್ರತ್ಯೇಕವಾದಿ ಪಡೆಯ ಬಳಿಯೂ ಈ ರೈಫಲ್ ಇವೆ.
Advertisement
Advertisement
ಕೆನಡಾದಲ್ಲಿರುವ ಗೋಲ್ಡಿ ಬ್ರಾರ್ ಎನ್ನುವ ಗ್ಯಾಂಗ್‍ಸ್ಟರ್ ನೆರವಿನಿಂದ ಹಂತಕರು ಈ ರೈಫಲ್ ಸಂಪಾದಿಸಿರಬಹುದು ಎಂದು ತನಿಖಾ ಸಂಸ್ಥೆಗಳು ಭಾವಿಸುತ್ತಿವೆ. ಆದರೆ ಈ ಕುರಿತು ಖಚಿತ ಮಾಹಿತಿ ದೊರೆತಿಲ್ಲ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.