ನವದೆಹಲಿ: ಪಂಜಾಬಿ ಖ್ಯಾತ ಗಾಯಕ (Punjabi Singer) ಹಾಗೂ ರಾಜಕಾರಣಿ ಸಿಧು ಮೂಸೆವಾಲಾ (Sidhu Moose Wala) ಹತ್ಯೆಯ ಮಾಸ್ಟರ್ ಮೈಂಡ್ (Mastermind) ಗೋಲ್ಡಿ ಬ್ರಾರ್‌ನನ್ನು (Goldy Brar) ಕ್ಯಾಲಿಫೋರ್ನಿಯಾದಲ್ಲಿ (California) ಬಂಧಿಸಲಾಗಿದೆ. ಸಿಧು ಹತ್ಯೆಯ ಜವಾಬ್ದಾರಿ ಹೊತ್ತಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಗಿದೆ ಎಂದು ಭಾರತದ ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ.
ಭಾರತದ ಗುಪ್ತಚರ ಸಂಸ್ಥೆಗಳು ಅಂತಾರಾಷ್ಟ್ರೀಯ ಮೂಲಗಳಿಂದ ಈ ಮಾಹಿತಿಯನ್ನು ಪಡೆದಿವೆ. ಆದರೆ ಗೋಲ್ಡಿ ಬ್ರಾರ್ ಬಂಧನದ ಬಗ್ಗೆ ಕ್ಯಾಲಿಫೋರ್ನಿಯಾ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
Advertisement
Advertisement
ಆದರೆ ಭಾರತದ ಗುಪ್ತಚರ ಇಲಾಖೆಗಳಾದ ಆರ್‌ಎಡಬ್ಲ್ಯೂ, ಐಬಿ, ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಮತ್ತು ಪಂಜಾಬ್ ಗುಪ್ತಚರ ಸಂಸ್ಥೆ ಈ ಮಾಹಿತಿಯನ್ನು ಪಡೆದಿರುವುದಾಗಿ ತಿಳಿಸಿವೆ. ಗೋಲ್ಡಿ ಬ್ರಾರ್‌ನನ್ನು ಕ್ಯಾಲಿಫೋರ್ನಿಯಾದಲ್ಲಿ ಪತ್ತೆಹಚ್ಚಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿವೆ. ಇದನ್ನೂ ಓದಿ: ಪಾರಿವಾಳ ಹಿಡಿಯಲು ಹೋಗಿ ಮಕ್ಕಳಿಬ್ಬರಿಗೆ ಕರೆಂಟ್ ಶಾಕ್ – ಸ್ಥಿತಿ ಚಿಂತಾಜನಕ
Advertisement
ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಕೆನಡಾ ಮೂಲದವನಾಗಿದ್ದಾನೆ. ಸಿಧು ಮೂಸೆವಾಲಾ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಈ ಹತ್ಯೆಯ ಮಾಸ್ಟರ್ ಮೈಂಡ್ ಇದೇ ಬ್ರಾರ್ ಎನ್ನಲಾಗಿದೆ.
Advertisement
ಸಿಧು ಸಾವಿನ ಕೆಲ ದಿನಗಳ ಬಳಿಕ ಬ್ರಾರ್ ಸಿಧು ಹತ್ಯೆಗೆ ತಾನೇ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ್ದ. ಸಿಧು ಬ್ರಾರ್‌ನ ವಿರೋಧಿ ಗ್ಯಾಂಗ್‌ನೊಂದಿಗೆ ಭಾಗಿಯಾಗಿದ್ದರು ಎನ್ನಲಾಗಿದ್ದು, ಈ ಕಾರಣಕ್ಕೆ ಮೂಸೆವಾಲಾ ವಿರುದ್ಧ ಸೇಡು ತೀರಿಸಿಕೊಳ್ಳಲು ಕೊಲೆಯ ಯೋಜನೆ ಹಾಕಿದ್ದಾಗಿ ತಿಳಿಸಿದ್ದ. ಇದನ್ನೂ ಓದಿ: ಪಾಕಿಸ್ತಾನಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಕೊಡಲ್ಲ – ರಷ್ಯಾ