ಚಂಡೀಗಢ: ನವಜೋತ್ ಸಿಂಗ್ ಸಿಧು ಅವರು ತಮ್ಮ ಸಹೋದರನಿದ್ದಂತೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ. ಜೊತೆಗೆ ಕಾಂಗ್ರೆಸ್‍ಗೆ ಪ್ರತಿಯೊಬ್ಬ ಕಾರ್ಯಕರ್ತನೂ ಮುಖ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್‍ನಲ್ಲಿನ ಆಂತರಿಕ ಅಧಿಕಾರದ ಕಲಹದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
Advertisement
ಪಂಜಾಬ್‍ನಲ್ಲಿ ಮಾತನಾಡಿದ ಅವರು, ನವಜೋತ್ ಸಿಂಗ್ ಸಿಧು ನಮ್ಮೊಂದಿಗಿದ್ದಾರೆ. ಸಿಧು ಅವರು ರಾಹುಲ್ ಗಾಂಧಿ ಜೊತೆಯಲ್ಲಿದ್ದಾರೆ. ನಮಲ್ಲಿ ಅನೇಕ ನಾಯಕರಿದ್ದಾರೆ. ಸಿಧು ನನ್ನ ಸಹೋದರ ಮತ್ತು ನಮ್ಮ ಪಕ್ಷದ ಮುಖ್ಯಸ್ಥ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ, ಚೀನಾ ಏಜೆಂಟ್ ಆಗಿದ್ದಾರೆ ತೆಲಂಗಾಣ ಸಿಎಂ: ಬಿಜೆಪಿ
Advertisement
Advertisement
ಈ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷವು ನಡೆಸಿದ ಟೆಲಿ-ವೋಟಿಂಗ್ ಬಳಿಕ ಚರಂಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರು. ಚನ್ನಿ ಅವರು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದರು. ಪಂಜಾಬ್‍ನ ಜನಸಂಖ್ಯೆಯಲ್ಲಿ ಶೇಕಡಾ 32 ಕ್ಕಿಂತಲೂ ಹೆಚ್ಚು ಮಂದಿ ದಲಿತರಿದ್ದಾರೆ. ಪಂಜಾಬ್‍ನ ದಲಿತ ಸಮುದಾಯದಿಂದ ಮೊದಲ ಬಾರಿಗೆ ಚನ್ನಿ ಮುಖ್ಯಮಂತ್ರಿಯಾಗಿದ್ದು, ದಲಿತ ಮತದಾರರನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ರಾಹುಲ್ ವಿರುದ್ಧ ಹಿಮಂತ ಬಿಸ್ವಾ ವಿವಾದಾತ್ಮಕ ಹೇಳಿಕೆ – ತೆಲಂಗಾಣ ಕಾಂಗ್ರೆಸ್ ನಾಯಕರಿಂದ ದೂರು
Advertisement