ಬಾಗಲಕೋಟೆ: ಕಾಂಗ್ರೆಸ್ ಉಗ್ರಗಾಮಿಗಳ ಸಂತಾನ ಎಂದು ತೇರದಾಳ ಶಾಸಕ ಸಿದ್ದು ಸವದಿ ಆರೋಪಿಸಿದರು.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಆರ್‌ಎಸ್‍ಎಸ್ ಚಡ್ಡಿ ಟೀಕೆ ಕುರಿತು ಮಾತನಾಡಿದ ಅವರು, ಆನೆ ಹೋಗುತ್ತಿರುತ್ತದೆ, ಶ್ವಾನಗಳು ಬೊಗಳುತ್ತಿರುತ್ತವೆ. ಆನೆ ಯಾವಾಗಲೂ ಉತ್ತರ ಕೊಡುವುದಿಲ್ಲ. ಶ್ವಾನಗಳು ಬೊಗಳುತ್ತಿರುತ್ತವೆ. ಆರ್‌ಎಸ್‍ಎಸ್ ಸಹ ಅದೇ ರೀತಿ ಯಾರಿಗೂ ಉತ್ತರ ಕೊಡೋದಕ್ಕೆ ಹೋಗೋದಿಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಜೆಡಿಎಸ್‍ಗೆ ಕೇಡುಗಾಲ ಬಂದಿತ್ತು: ಕುಮಾರಸ್ವಾಮಿಗೆ ಆಮೆ-ಮೊಲದ ಕಥೆ ಹೇಳಿದ ವಿಜಯೇಂದ್ರ
ರಾಷ್ಟ್ರಾಭಿಮಾನಿಗಳ ಸಂಘ ಆರ್‌ಎಸ್‍ಎಸ್. ಸಂಘದ ಸಂಸ್ಕಾರ ಪಡೆದುಕೊಂಡವರು ಎಲ್ಲ ಕ್ಷೇತ್ರದಲ್ಲಿ ಇದ್ದಾರೆ. ಅದಕ್ಕಾಗಿ ದೇಶ ಇಂದು ಸುಭದ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪನಂತಹ ನಾಯಕರು ಆರ್‌ಎಸ್‍ಎಸ್ ಸಂಸ್ಕಾರ ಪಡೆದುಕೊಂಡವರು ಎಂದು ವಿವರಿಸಿದರು.
ಮೊದಲು ಪೊಲೀಸರು, ಮಿಲಿಟರಿ ಒಳಗೂ ಚಡ್ಡಿಗಳಿವೆ. ಈಗ ನೀವು ಅವರೆಲ್ಲರಿಗೂ ನೀವು ಅವಮಾನ ಮಾಡಿದ ರೀತಿ ಆಯ್ತು. ನೀವು ದೇಶದ ಸಂಸ್ಕೃತಿ ಅವಮಾನ ಮಾಡೋದಕ್ಕೆ ಮಾತ್ರ ಬಾಯಿ ತೆರೆಯುತ್ತೀರಿ. ಭಯೋತ್ಪಾದಕರು, ಉಗ್ರಗಾಮಿಗಳ ಬಗ್ಗೆ ಮಾತಾಡೋದಕ್ಕೆ ನಿಮಗೆ ಧೈರ್ಯ ಆಗೋದಿಲ್ಲ. ಅದಕ್ಕೆ ಕಾಂಗ್ರೆಸ್‍ನವರನ್ನು ನಾನು ಭಯೋತ್ಪಾದಕರ, ಉಗ್ರಗಾಮಿಗಳ ಸಂತಾನ ಅಂತ ಹೇಳಿದ್ದೇನೆ ಎಂದ ಆಕ್ರೋಶ ಹೊರಹಾಕಿದರು.
ರಾಜಕೀಯ ಕ್ಷೇತ್ರದ ಶುದ್ದೀಕರಣಕ್ಕಾಗಿ ಸಂಘ ಅನೇಕ ಮುಖಂಡರನ್ನು ರಾಜಕೀಯ ಕ್ಷೇತ್ರಕ್ಕೆ ಕಳಿಸಿದೆ. ಅಂತವರ ಬಗ್ಗೆ ಮಾತಾಡ್ತಾರೆಂದರೆ ಅವರಿಗೆ ಸಂಘದ ಬಗ್ಗೆ ಏನೂ ಗೊತ್ತಿಲ್ಲ. ಬಹುಶಃ ಅವರು ಮೂಗಿನ ನೇರಕ್ಕೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಗ್ಯಾಂಗ್ ರೇಪ್ ಸಂತ್ರಸ್ತೆಯ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು
ಸಂಘ ಇದೆ ಅಂತ ಅವರು ಸುಭದ್ರವಾಗಿ ದೇಶದಲ್ಲಿದ್ದಾರೆ. ಸಂಘ ಇರದಿದ್ರೆ ಇವರು ಎಲ್ಲಿ ಇರುತ್ತಿದ್ರೊ ಗೊತ್ತಿಲ್ಲ. ಸಂಘದ ಬಗ್ಗೆ ತಿಳಿದುಕೊಂಡು ಮಾತಾಡಿದ್ರೆ ಒಳ್ಳೆಯದು. ಚಡ್ಡಿಯನ್ನು ಕೇವಲ ಸಂಘದವರು ಮಾತ್ರ ಹಾಕಿಕೊಳ್ಳುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.