Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾನು ಖುಷಿಯಾಗಿದ್ದೇನೆ, ಅವರಿಗೆ ದೇವರು ಒಳ್ಳೆಯದು ಮಾಡಲಿ: ಸೈನಾ ನೆಹ್ವಾಲ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ನಾನು ಖುಷಿಯಾಗಿದ್ದೇನೆ, ಅವರಿಗೆ ದೇವರು ಒಳ್ಳೆಯದು ಮಾಡಲಿ: ಸೈನಾ ನೆಹ್ವಾಲ್

Cinema

ನಾನು ಖುಷಿಯಾಗಿದ್ದೇನೆ, ಅವರಿಗೆ ದೇವರು ಒಳ್ಳೆಯದು ಮಾಡಲಿ: ಸೈನಾ ನೆಹ್ವಾಲ್

Public TV
Last updated: January 12, 2022 11:11 pm
Public TV
Share
3 Min Read
saina nehwal
SHARE

ಹೈದರಾಬಾದ್: ನಟ ಸಿದ್ದಾರ್ಥ್ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿರುದ್ಧ ಲೈಂಗಿಕ ಅವಹೇಳನಕಾರಿ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಸಿಲುಕಿಕೊಂಡಿದ್ದರು. ನಂತರ ತನ್ನ ವರ್ತನೆಗೆ ನೆಹ್ವಾಲ್ ಅವರಿಗೆ ಪತ್ರ ಬರೆದು ಸೋಶಿಯಲ್ ಮೀಡಿಯಾದಲ್ಲೇ ಕ್ಷಮೆಯಾಚಿಸಿದ್ದಾರೆ. ಸೈನಾ ನೆಹ್ವಾಲ್ ಕೂಡಾ ಟ್ವೀಟ್‌ ಮಾಡಿ ಪ್ರತಿಕ್ರಿಯೆ ಕೊಟ್ಟಿದ್ದರು. ಆದರೆ ಅವಹೇಳನಕಾರಿ ಹೇಳಿಕೆಗೆ ನಟನ ವಿರುದ್ಧ ಹೈದರಾಬಾದ್‌ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Siddharth

ಹೈದರಾಬಾದ್‍ನಲ್ಲಿ ಮಹಿಳೆಯೋರ್ವರು ಸಿದ್ಧಾರ್ಥ್ ಹೇಳಿಕೆಯ ವಿರುದ್ಧ ದೂರು ನೀಡಿದ್ದರು. ಮಹಿಳೆಯರ ಗೌರವಕ್ಕೆ ಹಾನಿ ಮಾಡುವ ಉದ್ದೇಶದಿಂದ ಹೀಗೆ ಹೇಳಿದ್ದಾರೆ ಎಂಬ ಹಿನ್ನೆಲೆಯಲ್ಲಿ ಇದೀಗ ಸಿದ್ಧಾರ್ಥ್ ವಿರುದ್ಧ ಐಪಿಸಿ ಸೆಕ್ಷನ್ 509ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೇ ಐಟಿ ಆಕ್ಟ್ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್

Saina Nehwal

ನಡೆದಿದ್ದೇನು?
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪ ಕುರಿತಂತೆ ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. ಯಾವುದೇ ರಾಷ್ಟ್ರದಲ್ಲಿ ಪ್ರಧಾನ ಮಂತ್ರಿಗೆ ಭದ್ರತೆ ಸಿಗದೇ ಇದ್ದರೆ, ಆ ದೇಶದಲ್ಲಿ ನಾವೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಜರೂಕತೆಯನ್ನು ನಾನು ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.

No nation can claim itself to be safe if the security of its own PM gets compromised. I condemn, in the strongest words possible, the cowardly attack on PM Modi by anarchists.#BharatStandsWithModi #PMModi

— Saina Nehwal (@NSaina) January 5, 2022

ಸೈನಾ ನೆಹ್ವಾಲ್ ಅವರ ಈ ಟ್ವೀಟ್ ಗೆ ಸಿದ್ದಾರ್ಥ್, ವಿಶ್ವದ ಸಟಲ್ ಕಾಕ್ ಚಾಂಪಿಯನ್. ದೇವರಿಗೆ ಧನ್ಯವಾದಗಳು ನಾವು ಭಾರತದ ರಕ್ಷಕರನ್ನು ಹೊಂದಿದ್ದೇವೆ. ರೆಹಾನ್ನಾ ನಿಮಗೆ ನಾಚಿಕೆಯಾಗಬೇಕು ಎಂದು ಟ್ವೀಟ್ ಮಾಡಿದ್ದರು.

Siddharth Saina Nehwal 1

ಪುರುಷನ ಮರ್ಮಾಂಗವನ್ನು ಗ್ರಾಮ್ಯವಾಗಿ ‘ಕಾಕ್’ ಎಂದು ಕರೆಯಲಾಗುತ್ತದೆ. ಈ ಟ್ವೀಟ್ ಮೂಲಕ ಸಿದ್ದಾರ್ಥ್ ಸೈನಾ ಅವರನ್ನು ಲೈಂಗಿಕವಾಗಿ ಅವಮಾನಿಸಿದ್ದಾರೆ  ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ಮಹಿಳಾ ಆಯೋಗ ಗರಂ ಆಗಿದ್ದು, ಸಿದ್ದಾರ್ಥ್ ಖಾತೆಯನ್ನೇ ಬ್ಲಾಕ್ ಮಾಡುವಂತೆ ಟ್ವಿಟ್ಟರ್‌ಗೆ ಪತ್ರ ಬರೆದಿದ್ದರು. ಸೋಶಿಯಲ್‌ ಮೀಡಿಯಾದಲ್ಲಿ ಈ ಕುರಿತಾಗಿ ಆಕ್ರೋಶವ್ಯಕ್ತವಾಗಿತ್ತು.

Dear @NSaina pic.twitter.com/plkqxVKVxY

— Siddharth (@Actor_Siddharth) January 11, 2022

ಆತ್ಮೀಯ ಸೈನಾ, ಕೆಲವು ದಿನಗಳ ಹಿಂದೆ ನಿಮ್ಮ ಟ್ವೀಟ್‍ಗೆ ಪ್ರತಿಕ್ರಿಯೆಯಾಗಿ ನಾನು ಬರೆದ ನನ್ನ ಅಸಭ್ಯ ಹಾಸ್ಯಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ನಿಮ್ಮೊಂದಿಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ಅಂದು ನಿಮ್ಮ ಟ್ವೀಟ್ ಅನ್ನು ನಾನು ಓದಿದಾಗ ನನಗೆ ಕೋಪವನ್ನು ತಡೆದುಕೊಳ್ಳಲಾಗಲಿಲ್ಲ. ಅದಕ್ಕೆ ಆ ರೀತಿ ಪ್ರತಿಕ್ರಿಯೆ ನೀಡಿದೆ. ಯಾವುದೇ ದುರುದ್ದೇಶದಿಂದ ನಾನು ಆ ರೀತಿ ಪ್ರತಿಕ್ರಿಯೆಯನ್ನು ನೀಡಲಿಲ್ಲ. ನಾನು ಸ್ತ್ರೀವಾದಿ ಮಿತ್ರ. ನನ್ನ ಟ್ವೀಟ್‍ನಲ್ಲಿ ಯಾವುದೇ ಲಿಂಗವನ್ನು ಸೂಚಿಸಿಲ್ಲ. ನಿಮ್ಮ ಮೇಲೆ ಯಾವುದೇ ದುರುದ್ದೇಶದಿಂದ ಆ ಪದಗಳನ್ನು ಬಳಸಲಿಲ್ಲ ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ. ಈ ಪತ್ರವನ್ನು ನೀವು ಸಮ್ಮತಿಸುತ್ತೀರಾ ಎಂದು ನಾನು ಭಾವಿಸುತ್ತೇನೆ. ನೀವು ಯಾವಾಗಲೂ ನನ್ನ ಚಾಂಪಿಯನ್ ಆಗಿರುತ್ತೀರಿ ಎಂದು ಬರೆದು ಕ್ಷಮೆಯನ್ನು ಕೇಳಿದ್ದಾರೆ.

saina nehwal 1

ಇದು ಮಹಿಳೆಯರ ಘನತೆಗೆ ಸಂಬಂಧಿಸಿದ ವಿಚಾರ. ಓರ್ವ ಮಹಿಳೆಯನ್ನು ಅವರು ಈ ರೀತಿ ಟಾರ್ಗೆಟ್​​ ಮಾಡಬಾರದು. ಆದರೆ ಇಂಥ ವಿಚಾರಗಳಿಂದ ನಾನು ವಿಚಲಿತ ಆಗಿಲ್ಲ. ನನ್ನ ಕ್ಷೇತ್ರದಲ್ಲಿ ನಾನು ಖುಷಿಯಾಗಿದ್ದೇನೆ. ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಸೈನಾ ನೆಹ್ವಾಲ್​ ಸಿದ್ಧಾರ್ಥ್ ಕ್ಷಮೆಗೆ ಪ್ರತಿಕ್ರಿಯಿಸಿದ್ದರು. ಆದರೆ ಇದೀಗ  ನಟ ಸಿದ್ದಾರ್ಥ್ ವಿರುದ್ಧವಾಗಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್‍ಗೆ ಕೋವಿಡ್ ಪಾಸಿಟಿವ್

TAGGED:controversial tweetSaina NehwalSiddharthಪೊಲೀಸ್ಪ್ರಕರಣಹೈದರಾಬಾದ್
Share This Article
Facebook Whatsapp Whatsapp Telegram

Cinema news

Bharti Singh Haarsh Limbachiyaa
ಹಾಸ್ಯನಟಿ ಭಾರ್ತಿ ಸಿಂಗ್‌, ಹರ್ಷ್‌ ಲಿಂಬಾಚಿಯಾ ದಂಪತಿಗೆ 2ನೇ ಮಗು ಜನನ
Bollywood Cinema Latest Top Stories
Koragajja Kannada Film 1
ಕೊರಗಜ್ಜ ಚಿತ್ರಕ್ಕಿದೆ ಮೆಸ್ಸಿ ಹಾಡು ಕ್ರಿಯೇಟ್ ಮಾಡಿದ ತಂಡದ ಲಿಂಕ್
Cinema Latest TV Shows
Ranya Rao 1
ಕಾಫಿಪೋಸಾ ಆದೇಶ ಪ್ರಶ್ನಿಸಿದ್ದ ರನ್ಯಾಗೆ ಮತ್ತೆ ಶಾಕ್ – ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru City Cinema Court Districts Karnataka Latest Top Stories
Vijay Deverakonda
ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರದ ಅಪ್‌ಡೇಟ್‌
Cinema Latest South cinema

You Might Also Like

RANJAN
Bengaluru City

ಮಕ್ಕಳ ಮೇಲೆ ಕ್ರೌರ್ಯ – ಸೈಕೋ ರಂಜನ್ ವಿರುದ್ಧ ದಾಖಲಾಗುತ್ತಾ ಪೋಕ್ಸೋ ಕೇಸ್‌?

Public TV
By Public TV
15 minutes ago
Rajya Sabha
Latest

ಸಂತ್ತಿನ ಮೇಲ್ಮನೆಯಲ್ಲಿ ಮಧ್ಯರಾತ್ರಿ ಜಿ ರಾಮ್‌ ಜಿ ಮಸೂದೆ ಅಂಗೀಕಾರ; ವಿಪಕ್ಷಗಳ ಸಭಾತ್ಯಾಗ

Public TV
By Public TV
1 hour ago
shivamogga jail
Crime

ಶಿವಮೊಗ್ಗ ಜೈಲು ಸಿಬ್ಬಂದಿಯಿಂದ ದಿಢೀರ್‌ ದಾಳಿ – ಮೊಬೈಲ್, ಸಿಮ್, ಇಯರ್ ಫೋನ್ ಪತ್ತೆ

Public TV
By Public TV
1 hour ago
Yadgiri 2
Districts

ಸರ್ಕಾರಿ ಶಾಲೆಯಲ್ಲಿ ಕಳಪೆ ಆಹಾರ ಧಾನ್ಯ ಪೂರೈಕೆ – ಅಕ್ಕಿ, ಗೋಧಿ, ತೊಗರಿಯಲ್ಲಿ ಬರೀ ಹುಳು, ಕಸ ಪತ್ತೆ!

Public TV
By Public TV
2 hours ago
Donald Trump
Latest

ʻಯುದ್ಧವಲ್ಲ, ಪ್ರತೀಕಾರʼ – ಸಿರಿಯಾದಲ್ಲಿ ಐಸಿಸ್‌ ಉಗ್ರರ ವಿರುದ್ಧ ಅಮೆರಿಕ ʻಆಪರೇಷನ್‌ ಹಾಕೈʼ ಶುರು

Public TV
By Public TV
2 hours ago
Beluru Hospital
Crime

ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಷಿನ್, ವೆಂಟಿಲೇಟರ್ ಸೇರಿ 24 ಲಕ್ಷ ಬೆಲೆ ಬಾಳುವ ಯಂತ್ರಗಳು ನಾಪತ್ತೆ!

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?