ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀ (Siddeshwara Sri) ಗಳ ಅಂತ್ಯಸಂಸ್ಕಾರ ಮುಗಿದು ಮೂರು ದಿನ ಕಳೆದಿದೆ. ಶ್ರೀಗಳ ಅಸ್ಥಿ ಭಸ್ಮವನ್ನಿಂದು ತೆಗೆದು ಸಂಗ್ರಹಿಸಿ ಇಡಲಾಯಿತು. ವೀಶೇಷ ಪೂಜೆ ಪುನಸ್ಕಾರ ಮಾಡಿ ಅಸ್ಥಿ ಸಂಗ್ರಹ ಕಾರ್ಯಕ್ರಮ ಜರುಗಿತು.
Advertisement
ಗುರುವಾರ ಬೆಳಗ್ಗೆ 4 ಗಂಟೆಗೆ ಶ್ರೀಗಳ ಅಸ್ಥಿ (Ash) ಜಾಗದಲ್ಲಿ ಅಸ್ಥಿ ಸಂಗ್ರಹಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಯಿತು. ನಂತರ 6 ಗಂಟೆಗೆ ರಾಮಕೃಷ್ಣ ಆಶ್ರಮದ ಗುರುಗಳು ಸೇರಿದಂತೆ ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮಿಜಿ ನೇತೃತ್ವದಲ್ಲಿ ಚಿತೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಇದನ್ನೂ ಓದಿ: ನಮ್ಮನೆಯಲ್ಲಿ ಕುರಾನ್ ಜೊತೆಗೆ ಶ್ರೀಗಳ ಆಶೀರ್ವಚನ ಕೇಳುತ್ತಿದ್ದೆವು: ಮುಸ್ಲಿಂ ಭಕ್ತರು
Advertisement
Advertisement
ಮೊದಲು ಅಸ್ಥಿ ಇರುವ ಜಾಗಕ್ಕೆ ನೀರು ಸಿಂಪಡಿಸಲಾಯಿತು. ನಂತರ ಚಿತೆಗೆ ನೀರು, ತುಪ್ಪಾ, ಹಾಲು ಹಾಕಲಾಯಿತು. ತದನಂತರ ಊದಿನ ಕಡ್ಡಿ ಬೆಳಗಿ ಕರ್ಪೂರದ ಆರತಿ ಮಾಡಲಾಯಿತು. ಚಿತೆಯ ಸುತ್ತ ಕರ್ಪೂರ ಹಚ್ಚಿ ಮಂತ್ರಘೋಷ, ಭಜನೆ, ಪ್ರಾರ್ಥನೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಜನವರಿ 8 ಭಾನುವಾರದಂದು ಶ್ರೀಗಳು ನಮ್ಮನ್ನಗಲಿ 7ನೇ ದಿನವಾಗುತ್ತೆ. ಅಂದು ಅಸ್ಥಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ನಂತರ ಗೋಕರ್ಣದ ಸಾಗರದಲ್ಲಿ ಅಸ್ಥಿ ವಿಸರ್ಜನೆ ಮಾಡೋದಾಗಿ ತಿಳಿಸಿದರು.
Advertisement
ಸಿದ್ದೇಶ್ವರ ಶ್ರೀಗಳ ಅಸ್ಥಿ ಪೂಜೆಯಲ್ಲಿ ಭಕ್ತರು ಭಾಗಿಯಾಗಿ ಕೈ ಮುಗಿದು ಪುನೀತರಾದ್ರು. ಓಂ ನಮ: ಶಿವಾಯ ಅಂತಾ ಜಪಿಸುತ್ತಾ ಭಕ್ತರು ಶ್ರೀಗಳನ್ನ ನೆನದು ಕಣ್ಣೀರಿಟ್ಟರು. ಇದನ್ನೂ ಓದಿ: ಉತ್ತರ ಕರ್ನಾಟಕದ ನಡೆದಾಡುವ ದೇವರು ಸಿದ್ದೇಶ್ವರ ಶ್ರೀ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k