ಬಿಟೌನ್ ಅಡ್ಡಾದಲ್ಲಿ ಬ್ರೇಕಪ್ ಸ್ಟೋರಿಗಳಿಗೇನು ಬರವಿಲ್ಲ. ಅದೆಷ್ಟೋ ಬ್ರೇಕಪ್ ಕಹಾನಿಯನ್ನ ಚಿತ್ರರಂಗ ನೋಡಿದೆ. ಈಗ ಬಾಲಿವುಡ್ ಗಲ್ಲಿಯಲ್ಲಿ ಮತ್ತೊಂದು ಬ್ರೇಕಪ್ ವಿಚಾರ ಭಾರೀ ಸುದ್ದಿ ಮಾಡ್ತಿದೆ. ಬಾಲಿವುಡ್ ಕ್ಯೂಟ್ ಕಪಲ್ ಕಿಯಾರಾ ಮತ್ತು ಸಿದ್ಧಾರ್ಥ್ ಲವ್‌ಸ್ಟೋರಿಗೆ ಮತ್ತು ಇದೀಗ ಬ್ರೇಕ್ ಬಿದ್ದಿದೆ.
ಒಂದೊಳ್ಳೆ ಸ್ನೇಹ ಪರಿಚಯವಾಗಿ, ಆ ಪರಿಚಯ ಪ್ರೀತಿಗೆ ತಿರುಗಿ ನಂತರ ವಿದೇಶದವರೆಗೂ ಕೈ ಕೈ ಹಿಡಿದು ಹೋಗುವ ಮಟ್ಟಿಗೆ ಪ್ರೇಂಡ್‌ಶಿಪ್ ಇತ್ತು. ಈಗ ಇದೆಲ್ಲದಕ್ಕೂ ಬ್ರೇಕ್ ಬಿದ್ದಿದೆ. ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಲವ್ ಕಹಾನಿ ಅಂತ್ಯವಾಗಿದೆ. ಈಗ ʻಶೇರ್ಷಾʼ ಪ್ರೇಮಿಗಳು ನಾನು ಒಂದು ನೀನು ಒಂದು ತೀರಾ ಅಂತಿದ್ದಾರಂತೆ.
ಬಾಲಿವುಡ್‌ನ ಕ್ಯೂಟ್ ಕಪಲ್ ಆಗಿದ್ದ ಸಿದ್ಧಾರ್ಥ್ ಮತ್ತು ಕಿಯಾರಾ ಬಿಟೌನ್ ಹಲವು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿದ್ದರು. ಕ್ಯಾಮೆರಾ ಕಣ್ಣಿಗೂ ಒಟ್ಟಿಗೆ ಕಾಣಿಸಿಕೊಂಡಿದ್ದರು ಬಳಿಕ ಎಲ್ಲಿಯೂ ಕೂಡ ತಮ್ಮ ಪ್ರೀತಿಯ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಈಗ ಈ ಜೋಡಿ ಭೇಟಿಯಾಗೋದಕ್ಕೂ ಫುಲ್ ಸ್ಟಾಪ್ ಇಟ್ಟಿದೆ. ಯಾವುದರ ಸಹವಾಸವೇ ಬೇಡ ಅಂತಾ ಸಿನಿಮಾಗಳತ್ತ ಬ್ಯುಸಿಯಾಗಿದ್ದಾರೆ. ಆದರೆ ಬ್ರೇಕಪ್‌ಗೆ ಅಸಲಿ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಶೂಟಿಂಗ್ ವೇಳೆ ಅವಘಡ, ನಟ ಧನ್ವೀರ್ ಗೌಡ ಕೈಗೆ ಪೆಟ್ಟು
View this post on Instagram
`ಶೇರ್ಷಾ’ ಚಿತ್ರದಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಇವರಿಬ್ಬರ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದರು. ಇವರಿಬ್ಬರು ರಿಯಲ್ ಲೈಫ್‌ನಲ್ಲೂ ಜತೆಯಾದ್ರೆ ಅದೆಷ್ಟು ಚೆನ್ನಾಗಿರುತ್ತೆ ಅಂತಾ ಲೆಕ್ಕಚಾರ ಹಾಕಿದ್ರು. ಇದೀಗ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ. ಒಟ್ಟಾರೆ ನೆಚ್ಚಿನ ಜೋಡಿಯ ಬ್ರೇಕಪ್ ಕಥೆ ಕೇಳಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಜೋಡಿ ಮತ್ತೆ ಒಂದಾಗಲಿ ಅಂತಾ ಹಾರೈಸುತ್ತಿದ್ದಾರೆ.