‘ನನ್ನ ಸಿಪಾಯಿ’ ಮತ್ತು ‘ಗರುಡ’ (Garudha) ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಾಯಕ ನಟ ಸಿದ್ದಾರ್ಥ್ ಮಹೇಶ್ (Siddarth Mahesh) ಇಂದು (ಜುಲೈ 16)ರಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಸಂತಸದ ದಿನದಿಂದಲೇ ಸಿದ್ದಾರ್ಥ್ ಹೊಸ ಸಿನಿಮಾ ಘೋಷಣೆಯಾಗಿದೆ. ಹೊಸ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿರುವ ಸಿದ್ದಾರ್ಥ್ ಮಹೇಶ್ ನಿರ್ದೇಶಕರಾಗಿಯೂ ಹೊಸ ಹೆಜ್ಜೆ ಇಡುತ್ತಿದ್ದಾರೆ. ಇದನ್ನೂ ಓದಿ:ಮೊದಲ ಸಂಭಾವನೆಯನ್ನ ಚಾರಿಟಿಗೆ ನೀಡಿದ ಮಹೇಶ್ ಬಾಬು ಪುತ್ರಿ
ಬಹಳ ವರ್ಷದಿಂದಲೂ ಸಿದ್ದಾರ್ಥ್ ಅವರಿಗೆ ಡೈರೆಕ್ಟರ್ (Director) ಕ್ಯಾಪ್ ತೊಡಬೇಕೆಂಬ ಕನಸು ಇತ್ತು. ಆದರೆ ಅದಕ್ಕೆ ಘಳಿಗೆ ಕೂಡಿ ಬಂದಿರಲಿಲ್ಲ. ಈಗ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಹಿಂದೆ ‘ನನ್ನ ಸಿಪಾಯಿ’ ಸಿನಿಮಾದ ಕಥೆಯಲ್ಲಿ ಸಿದ್ಧಾರ್ಥ್ ಕೂಡ ಕೆಲಸ ಮಾಡಿದ್ದರು. ಅದೇ ಅನುಭವದ ಮೇಲೆ ಗರುಡ ಸಿನಿಮಾದ ಕಥೆಯನ್ನು ಬರೆದಿದ್ದರು. ಈಗ ಅವರ ನಿರ್ದೇಶನದ ಚಿತ್ರಕ್ಕೂ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಅತಶ್ರೀ ಮೀಡಿಯಾ ಕ್ರಿಯೇಶನ್ಸ್ ಮತ್ತು ಆರೇಂಜ್ ಪಿಕ್ಸೆಲ್ಸ್ ನಡಿ ಸಿದ್ದಾರ್ಥ್ ಮಹೇಶ್ ಸ್ನೇಹಿತರಾಗಿರುವ ಎಸ್.ಚಂದನ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ತಮಿಳು ಸಿನಿಮಾ ನಿರ್ಮಿಸಿದ್ದ ಚಂದನ್ ಅವರಿಗೆ ಇದು ಚೊಚ್ಚಲ ನಿರ್ಮಾಣದ ಕನ್ನಡ ಚಿತ್ರ. ತಾನೇ ನಿರ್ದೇಶನ ಮಾಡಬೇಕೆಂದು ಸಿದ್ದಾರ್ಥ್ಗೆ ಪ್ರೋತ್ಸಾಹ ಕೊಟ್ಟು ಹಣ ಹಾಕುತ್ತಿದ್ದಾರೆ. ಕಥೆ ಕೊನೆ ಹಂತದಲ್ಲಿದ್ದು, ಶೀಘ್ರದಲ್ಲೇ ಮತ್ತಷ್ಟು ಅಪ್ ಡೇಟ್ ನೀಡಲು ಚಿತ್ರತಂಡ ಸಜ್ಜಾಗಿದೆ.
ಅಂದಹಾಗೇ ಸಿದ್ದಾರ್ಥ್ ಮಹೇಶ್ ನಟಿಸಿ ನಿರ್ದೇಶನದ ಸಿನಿಮಾ ಪ್ರೇಮಕಥೆ ಆ್ಯಕ್ಷನ್ ಕಥಾಹಂದರ ಹೊಂದಿದೆ. ಮಲ್ಟಿಮೀಡಿಯಾ ಬಗ್ಗೆ ಶಿಕ್ಷಣ ಜ್ಞಾನ ಹೊಂದಿರುವ ಅವರು ನಿರ್ದೇಶನಕ್ಕೆ ಸಹಾಯಕಾರಿ ಎನ್ನುತ್ತಾರೆ. ಬಹಳ ವರ್ಷಗಳಿಂದ ನಿರ್ದೇಶಕನ ಆಗಬೇಕು ಎಂಬ ಸಿದ್ದಾರ್ಥ್ ಮಹೇಶ್ ಕನಸು ಈಗ ಸಹಕಾರವಾಗುತ್ತಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]