ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆಯ ಸಮಸ್ಯೆ ಇದ್ದು ಅಂತರಿಕವಾಗಿ ಜಗಳ ನಡೆಯುತಿತ್ತು. ಆದರೆ ಈಗ ಬಹಿರಂಗವಾಗಿಯೇ ಕಾಂಗ್ರೆಸ್ ಶಾಸಕರು ಸರ್ಕಾರದ ಬಗ್ಗೆ ಹೇಳಿಕೆ ನೀಡಿದ್ದು ಕುಮಾರಸ್ವಾಮಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಈ ಮಧ್ಯೆ ಪ್ರತಿ ಪಕ್ಷ ಬಿಜೆಪಿ ನಾಯಕರು ಮಾನ, ಮರ್ಯಾದೆ ಇದ್ದರೆ ಕುಮಾರಸ್ವಾಮಿ ರಾಜೀನಾಮೆ ನೀಡಲಿ ಎಂದು ಸವಾಲು ಎಸೆದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಶಿಷ್ಯರಾದ ಎಸ್.ಟಿ ಸೋಮಶೇಖರ್, ಎಂ.ಟಿ.ಬಿ ನಾಗರಾಜ್, ಡಾ.ಸುಧಾಕರ್, ಪುಟ್ಟರಂಗಶೆಟ್ಟಿ, ಎಚ್.ಎಂ ರೇವಣ್ಣ ನೀಡಿದ ಹೇಳಿಕೆಗಳನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ:ಸಿದ್ದರಾಮಯ್ಯನವ್ರ ಬಗ್ಗೆ 4 ಒಳ್ಳೆ ಮಾತಾಡಿದ್ದೆ ಅಷ್ಟೇ, ಜೆಡಿಎಸ್‍ನವ್ರು ಏನ್ ಬೇಕಿದ್ರೂ ಕಾಮೆಂಟ್ಸ್ ಮಾಡ್ಕೊಳ್ಳಲಿ-ಸೋಮಶೇಖರ್
Advertisement
Advertisement
ಎಸ್.ಟಿ ಸೋಮಶೇಖರ್:
ಬೆಂಗಳೂರು ಬಗ್ಗೆ ಇಲ್ಲಿನ ಇತಿಹಾಸದ ಬಗ್ಗೆ, ಅಭಿವೃದ್ಧಿ ಬಗ್ಗೆ ಸಿಎಂ ಅವರು ಮಾತನಾಡುತ್ತಾರೆ. ಆದರೆ ಯಾವುದನ್ನು ಸಿಎಂ ಕುಮಾರಸ್ವಾಮಿ ಮಾಡಿಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರೂ ಯಾವುದೇ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಅವನ್ನೆಲ್ಲ ನಾವು ಹೇಳಲು ಹೋದರೆ ಬೇರೆ ಬೇರೆ ಅರ್ಥ ಪಡೆದುಕೊಳ್ಳುತ್ತದೆ. ಯಾವ ವ್ಯವಸ್ಥೆಯನ್ನು ಜನರಿಗೆ ನೀಡಲು ಸಿಎಂ ಅವರಿಗೆ ಸಾಧ್ಯವಾಗಿಲ್ಲ. ಇದನ್ನೂ ಓದಿ: ನಾನು ರಾಜೀನಾಮೆಗೆ ಸಿದ್ಧ: ಸಿಎಂ ಹೆಚ್‍ಡಿಕೆ ಹೊಸ ಬಾಂಬ್
Advertisement
ಎಂ.ಟಿ.ಬಿ ನಾಗರಾಜ್:
ಆಂಜನೇಯನ ಎದೆ ಬಗಿದರೆ ಹೇಗೆ ರಾಮ ಕಾಣುತ್ತಾನೋ ಹಾಗೆಯೇ ನನ್ನ ಎದೆ ಬಗಿದರೆ ಸಿದ್ದರಾಮಯ್ಯನವರೇ ಕಾಣುತ್ತಾರೆ. ನಾನು ಯಾವತ್ತೂ ಸಿದ್ದರಾಮಯ್ಯನವರ ಜಪ ಮಾಡುತ್ತೇನೆ.
Advertisement
ಸುಧಾಕರ್:
ಸಿದ್ದರಾಮಯ್ಯ ಅವರು ನಮ್ಮ ಪಾಲಿಗೆ ಮಾಜಿ ಸಿಎಂ ಅಲ್ಲ ಇವತ್ತಿಗೂ ಮುಖ್ಯಮಂತ್ರಿ ಆಗಿಯೇ ಇದ್ದಾರೆ. ಒಬ್ಬರ ಮೇಲೆ ಇನ್ನೊಬ್ಬರು ದೂರುವುದು, ಅಪಪ್ರಚಾರ ಮಾಡುವುದು ರಾಜಕೀಯದಲ್ಲಿ ಸಹಜ. ಮಹಾಭಾರತದಲ್ಲಿ ಶಕುನಿ ಧರ್ಮರಾಯನನ್ನು ಮೋಸದಿಂದ ಸೋಲಿಸಿದ ಹಾಗೆ ಸಿದ್ದರಾಮಯ್ಯ ಅವರನ್ನು ದೂರಿ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಆದರೆ ಮತ್ತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲು ಯಾರಿಗೂ ತಪ್ಪಿಸಲು ಆಗುವುದಿಲ್ಲ. ಇದು ನನ್ನ ಮಾತಲ್ಲ ಕರ್ನಾಟಕದ ಜನರು ಹೇಳುವ ಮಾತು. ಇದನ್ನೂ ಓದಿ: ನನ್ನ ಎದೆ ಬಗೆದ್ರೆ ಸಿದ್ದರಾಮಯ್ಯ ಇರ್ತಾರೆ- ಎಂಟಿಬಿ ನಾಗರಾಜ್
ಪುಟ್ಟರಂಗಶೆಟ್ಟಿ:
ನಮ್ಮೊಂದಿಗೆ ಹಿಂದುಳಿದ ವರ್ಗದ ನಾಯಕರಿದ್ದಾರೆ. ಕಾರಣಾತರಗಳಿಂದ ಅವರು ಸಿಎಂ ಆಗದಿರಬಹುದು. ಆದರೆ ನಮ್ಮಲ್ಲಿ ಆಗುವ ಸಮಸ್ಯೆಯನ್ನು ನಾವು ಸಿದ್ದರಾಮಯ್ಯನವರ ಮುಂದೆ ಹೇಳಿಕೊಳ್ಳುತ್ತೇವೆ ವಿನಾ: ಬೇರೆಯವರ ಬಳಿ ಹೇಳಲು ಸಾಧ್ಯವಿಲ್ಲ.
ಎಚ್.ಎಂ ರೇವಣ್ಣ :
ಬಸವಣ್ಣ ಅವರ ತತ್ವವನ್ನು ಪಾಲಿಸುವಂತೆ ಮಾಡಿದವರು ಯಾರೋ ನಿನ್ನೆ ಆದ ಮುಖ್ಯಮಂತ್ರಿಗಳಲ್ಲ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದು. ಅವರು ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಇವತ್ತು ಬೆಂಗಳೂರು ಕಟ್ಟಿದಂತಹ ಕೆಂಪೇಗೌಡರ ಹೆಸರಲ್ಲಿ ಪ್ರಾಧಿಕಾರ ಹಾಗೂ ಜಯಂತಿ ಮಾಡಿದ್ದು ಸಿದ್ದರಾಮಯ್ಯನವರೇ ಹೊರತು ಯಾವ ಮಣ್ಣಿನ ಮಕ್ಕಳು ಮಾಡಿಲ್ಲ. ಇದನ್ನೂ ಓದಿ: ನಮ್ಮ ಶಾಸಕರನ್ನು ನಾವೇ ಕಂಟ್ರೋಲ್ ಮಾಡ್ತೀವಿ, ಎಚ್‍ಡಿಕೆಯನ್ನು ಮಾತಾಡಿಸ್ತೇನೆ- ಮಾಜಿ ಸಿಎಂ
ಸಿಎಂ ಹೇಳಿದ್ದೇನು?
ಕಾಂಗ್ರೆಸ್ ಶಾಸಕರು ಬಹಿರಂಗ ಸಮಾವೇಶಗಳಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಎಲ್ಲಾ ನಾಯಕರು ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವೆ. ನಾನು ಮತ್ತು ಡಿಸಿಎಂ ಸೇರಿದಂತೆ ಸಂಪುಟದ ಸಚಿವರು ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ನನ್ನ ಕಾರ್ಯವೈಖರಿ ಇಷ್ಟ ಆಗುತ್ತಿಲ್ಲ ಅಂದ್ರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
https://www.youtube.com/watch?v=6ngWqDA84-c
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv