ಗದಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಟಿಪ್ಪು ಸುಲ್ತಾನ್‍ಗೆ ಹೋಲಿಸಿ ಟ್ವೀಟ್ ಮಾಡಿರುವ ಹಿನ್ನೆಲೆ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿಚನ್ನಮ್ಮನನ್ನ ಟಿಪ್ಪು ಸುಲ್ತಾನ್‍ಗೆ ಹೋಲಿಸುವ ದುಸ್ಥಿತಿಗೆ ಸಿದ್ದರಾಮಯ್ಯ ಬಂದಿದ್ದಾರೆ. ಅಧಿಕಾರದ ಕುರ್ಚಿ ಕಳೆದುಕೊಂಡ್ರು ಇವರಿಗೆ ಬುದ್ಧಿ ಬಂದಿಲ್ಲ. ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ ರಾಷ್ಟ್ರ ಭಕ್ತರನ್ನ ಕೊಲೆ ಮಾಡಲಿಲ್ಲ. ಸ್ವಾತಂತ್ರ್ಯಕ್ಕೊಸ್ಕರ ಬ್ರಿಟಿಷರ ವಿರುದ್ಧ ಹೋರಾಡಿ ರಾಷ್ಟ್ರ ದ್ರೋಹಿಗಳನ್ನ ಕೊಂದ್ರು. ಇಂತಹ ಮಹಾನ್ ವ್ಯಕ್ತಿಗಳಿಗೆ ಟಿಪ್ಪುವನ್ನು ಹೋಲಿಸ್ತಾರೆ ಅಂದ್ರೆ ಕಾಂಗ್ರೆಸ್ ದುಸ್ಥಿತಿ ಎಲ್ಲಿಗೆ ಬಂತು? ಎಂದು ಈಶ್ವರಪ್ಪ ಗರಂ ಆದರು.
Advertisement
Advertisement
ಸಿದ್ದರಾಮಯ್ಯ ಭಂಡ ರಾಜಕಾರಣಿ, ಇಂತವರನ್ನು ಕರ್ನಾಟಕದಲ್ಲಿ ನೋಡಿಯೇ ಇಲ್ಲ. ಸುಮಾರು 39 ಮಠಗಳಿಗೆ 95 ಕೋಟಿ ರೂ ಅನುಧಾನ ನೀಡಿರುವ ಕೀರ್ತಿ ಬಿಜೆಪಿ ಸರ್ಕಾರಕ್ಕಿದೆ. ಆದ್ರೆ ಯಾವ ಮಠಕ್ಕೆ ಕಾಂಗ್ರೆಸ್ ಸರ್ಕಾರ ಎಷ್ಟು ಕೊಟ್ಟಿದೆ ಎಂದು ಸಿದ್ದರಾಮಯ್ಯರಿಗೆ ಕೇಳಿ? ಸ್ವಯಂ ಘೋಷಿತ ಹಿಂದುಳಿದ ನಾಯಕ, ದಲಿತ ನಾಯಕ, ಅಹಿಂದ ನಾಯಕ ಅಂತಾ ಅವರೇ ಹೇಳ್ಕೊಂಡು ತಿರುಗುತ್ತಾರೆ. ಈಗಾಗಲೇ ಚಾಮುಂಡಿಯಲ್ಲಿ ಜನ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದ್ರು. ಇನ್ನೂ ಬಾದಾಮಿ ಜನರಿಗೆ ಸಿದ್ದರಾಮಯ್ಯ ಹಣೆಬರಹ ಗೊತ್ತಿಲ್ಲ, ಮುಂದೆ ಗೊತ್ತಾಗುತ್ತೆ ಆಗ ಅಲ್ಲಿಂದನೂ ಓಡಿಸ್ತಾರೆ ಎಂದು ಟೀಕಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews