ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನೊಬ್ಬನೆ ದಲಿತರ ಚಾಂಪಿಯನ್ ಅಂತ ತಿಳಿದುಕೊಂಡಿದ್ದಾರೆ. ದಲಿತರ ಏಳಿಗೆಗೆ ನಾನೊಬ್ಬನೆ ಅನುದಾನ ನೀಡಿದ್ದು ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆಂದು ಸಿಎಂ ವಿರುದ್ಧ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸನ್ಮಾನ ಸಮಾರಂಭವೊಂದರಲ್ಲಿ ಖಡ್ಗ ಹಿಡಿದು ಪೋಷಾಕು ತೊಟ್ಟು ಸಂಭ್ರಮಿಸಿದರು. ಅವರ ಮದುವೆಯಲ್ಲೂ ಕೂಡ ಅವರು ಪೋಷಾಕು ತೊಟ್ಟಿರಲಿಲ್ಲವೇನೋ? ಆದ್ರೂ ಅರ್ಧಂಬರ್ಧ ಸಾಧನೆ ಮಾಡಿ ಬಹಳ ಸಂಭ್ರಮಪಟ್ಟಿದ್ದಾರೆ. ಅವರು ಹಿಂದುಳಿದ ವರ್ಗಗಳಿಗೆ ನೀಡಿದ ಅನುದಾನವನ್ನು ಅರ್ಧದಷ್ಟು ಬಳಕೆ ಮಾಡದಿದ್ದರೆ ಖಡ್ಗ ಇಳಿಸಿ ಪೋಷಾಕು ಕಳಚಬೇಕಾಗುತ್ತೆ ಎಂದು ಹೇಳಿದರು.
Advertisement
ನಾನೇ ಹಿಂದುಳಿದವರ ಚಾಂಪಿಯನ್ ಎಂಬ ಭ್ರಮೆಯಲ್ಲಿ ಸಿಎಂ ಇದ್ದಾರೆ. ಸಂವಿಧಾನಕ್ಕೆ, ಸದನಕ್ಕೆ ಸಿಎಂ ಸಿದ್ದರಾಮಯ್ಯ ಬೆಲೆ ಕೊಡುತ್ತಿಲ್ಲ. ಮೀಸಲಾತಿ ಹೆಚ್ಚು ಮಾಡುತ್ತೇನೆ ಅಂತಿದ್ದಾರೆ. ಇದೇ ವೇಳೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿರುದ್ಧ ಕಿಡಿ ಕಾರಿದ ಈಶ್ವರಪ್ಪ ಲೋಕೋಪಯೋಗಿ ಸಚಿವರು ಮರಳು ಲಾಬಿಯಲ್ಲಿ ಸಿಲುಕಿದ್ದಾರೆ. ಸರ್ಕಾರ ಬಂದಾಗಿನಿಂದ ಇಲ್ಲಿ ಮರಳು ಲೂಟಿ ಆಗುತ್ತಿದೆ ಅಂತಾ ಆರೋಪಿಸಿದ್ರು.