ಬೆಂಗಳೂರು: ಅನ್ನಭಾಗ್ಯದಿಂದ ಹಿಡಿದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈಗ ಫಾರಿನ್ ಮರಳು ಭಾಗ್ಯ ಕಲ್ಪಿಸಲು ಮುಂದಾಗಿದೆ.
Advertisement
ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿದೇಶಗಳಿಂದ ಮರಳು ಆಮದು ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಮಂದಿನ ತಿಂಗಳಿಂದ ಮಯನ್ಮಾರ್, ಮಲೇಷಿಯಾ, ಥೈಲ್ಯಾಂಡ್ ಸೇರಿ ಇನ್ನಿತರೆ ದೇಶಗಳಿಂದ 25 ಕೆಜಿ ತೂಕದ ಬ್ಯಾಗ್‍ಗಳಲ್ಲಿ ಮರಳು ಆಮದು ಮಾಡಿಕೊಳ್ಳಲಾಗುತ್ತದೆ.
Advertisement
Advertisement
ಮರಳು ಆಮದು ಮಾಡಿಕೊಳ್ಳಲು 6 ಕಂಪೆನಿಗಳಿಗೆ ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ನೀಡಿದೆ. ರಾಜ್ಯದ ಜನತೆಗೆ ಕಡಿಮೆ ದರದಲ್ಲಿ ಮರಳು ಪೂರೈಸುವಂತೆ ಕಂಪೆನಿಗಳ ಜೊತೆ ಸರ್ಕಾರ ಮಾತುಕತೆ ನಡೆಸಿದ್ದು, ನೈಸರ್ಗಿಕ ಸಂಪತ್ತು, ಜಲಮೂಲಗಳಿಗೆ ಆಗುತ್ತಿರುವ ಹಾನಿ ತಪ್ಪಿಸಲು ಈ ಪ್ಲಾನ್ ಮಾಡಲಾಗಿದೆ ಎಂದು ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.