ಬೆಂಗಳೂರು: ಇದು ರಾಜ್ಯ ಕಾಂಗ್ರೆಸ್ಸಿನ ಯಂಗ್ ಟೀಂ ಎಂಬಂತೆ ಬಿಂಬಸಿಕೊಳ್ಳಲು ಮುಂದಾಗಿದ್ದ ಯುವ ನಾಯಕರುಗಳು ಡಿಕೆಶಿ ಪಟ್ಟಾಭಿಷೇಕದ ನಂತರ ಫುಲ್ ಸೈಲೆಂಟಾಗಿದ್ದಾರೆ. ಮುಂದೆ ಏನು ಮಾಡಬೇಕು ಯಾವ ಹೆಜ್ಜೆ ಇಡಬೇಕು ನಡೆ ಏನು ಎನ್ನುವ ಆತಂಕದಲ್ಲಿದ್ದಾರೆ.
ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ರಿಜ್ವಾನ್ ಅರ್ಷದ್, ಜಮೀರ್ ಅಹಮ್ಮದ್, ಎಂ.ಬಿ.ಪಾಟೀಲ್ ಮುಂದಿನ ನಡೆ ಏನು ಎನ್ನುವ ಹೊಸ ಮಾತು ಕೈ ಪಾಳಯದಲ್ಲಿ ಆರಂಭವಾಗಿದೆ.
Advertisement
Advertisement
ಡಿಕೆಶಿಗೆ ಪಟ್ಟ ತಪ್ಪಿಸಿ ಕೃಷ್ಣಬೈರೇಗೌಡರಿಗೆ ಪಟ್ಟ ಕಟ್ಟಲು ಈ ಟೀಮ್ ಇನ್ನಿಲ್ಲದ ಪ್ರಯತ್ನ ನಡೆಸಿತ್ತು ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು. ಜಾತಿ ಲೆಕ್ಕಾಚಾರದಲ್ಲಿ ಡಿಕೆಶಿಗೆ ಡಿಚ್ಚಿ ಕೊಡಲು ಎಂಬಿ ಪಾಟೀಲ್ ಇನ್ನಿಲ್ಲದ ಪ್ರಯತ್ನ ಮಾಡಿದ್ದರು.
Advertisement
ಈ ಎಲ್ಲಾ ಪ್ರಯತ್ನದ ಹಿಂದೆ ಸಿದ್ದರಾಮಯ್ಯ ಇದ್ದರು ಎನ್ನುವ ಮಾತು ಕೇಳಿಬಂದಿತ್ತು. ಆದರೆ ಡಿ.ಕೆ ಶಿವಕುಮಾರ್ ಪಟ್ಟಾಭಿಷೇಕದ ನಂತರ ಇವರುಗಳ ರಾಜಕೀಯ ನಡೆ ಏನು? ಡಿಕೆಶಿ ಜೊತೆ ಹೊಂದಾಣಿಕೆ ಮಾಡಿಕೊಂಡು ಜೈ ಅಂತಾರಾ? ಡಿಕೆಶಿಗೆ ತೊಡೆ ತಟ್ಟಿ ಸವಾಲು ಹಾಕ್ತಾರಾ ಎನ್ನುವುದೇ ಸದ್ಯದ ಕುತೂಹಲ.