ಯಾದಗಿರಿ: ಸಿದ್ದರಾಮಯ್ಯ (CM Siddaramaiah) ಅವರ ಸಿಎಂ ಅವಧಿ ಮುಗಿದಿದೆ ಅಧಿಕಾರ ಬಿಟ್ಟು ಕೊಡಿ ಎಂದು ಡಿಕೆ ಶಿವಕುಮಾರ್ ಅವರು ತೊಡೆ ತಟ್ಟಿ ಹೊರಟ್ಟಿದ್ದಾರೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಎಂದು ಹೇಳಿದರು.
ಯಾದಗಿರಿ (Yadagiri) ಜಿಲ್ಲೆಯ ಶಹಾಪುರದಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಪಕ್ಷದಲ್ಲಿ ಬಡಿಗೆ ಹಿಡಿದುಕೊಂಡು ಹೊಡೆದಾಡಿಕೊಳ್ಳುತ್ತಾರೆ. ಹಿರಿಯ ನಾಯಕರು ಒಳಗೊಂಡಂತೆ ಶಾಸಕರುಗಳು ಬಡಿಗೆ ತೆಗೆದುಕೊಂಡು ರಸ್ತೆಯಲ್ಲಿ ಹೊಡೆದಾಟಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿ ಈಗ ನಿರ್ಮಾಣ ಆಗಿದೆ. ಮುಖ್ಯಮಂತ್ರಿ ಅವರು ತಮ್ಮ ಸ್ಥಾನ ತ್ಯಜಿಸಸಬೇಕು. ತಾನು ಮುಖ್ಯಮಂತ್ರಿ ಆಗಬೇಕೆಂದು ಡಿಕೆ ಶಿವಕುಮಾರ್ (DK Shivakumar) ಹೋರಾಟ ಪ್ರಾರಂಭ ಮಾಡಿದ್ದಾರೆ. ಬರುವ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗುತ್ತದೆ ಉಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.ಇದನ್ನೂ ಓದಿ: 20 ಓವರ್‌ಗಳಲ್ಲಿ 37 ಸಿಕ್ಸರ್, 349 ರನ್ – ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ
Advertisement
Advertisement
ಹಾಸನ (Hassan) ಕಾಂಗ್ರೆಸ್ ಸಮಾವೇಶದ (Congress Convention) ಬಗ್ಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಮಾವೇಶ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಬದಿಗಿಟ್ಟು ಶಕ್ತಿ ಪ್ರದರ್ಶನ ಮಾಡಲು ಹೊರಟಿದ್ದಾರೆ. ಡಿಕೆಶಿ ಅವರು ಕೋಟೆಗೆ ನುಗ್ಗಿ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ನೋಡಿ, ಸಿದ್ದರಾಮಯ್ಯ ಸಿಎಂ ಅವಧಿ ಮುಗಿದಿದೆ ಅಧಿಕಾರ ಬಿಟ್ಟು ಕೊಡಿ ಎಂದು ಡಿಕೆಶಿವಕುಮಾರ್ ಅವರು ತೊಡೆ ತಟ್ಟಿಕೊಂಡು ಹೊರಟ್ಟಿದ್ದಾರೆ ಎಂದರು.
Advertisement
ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಪವರ್ ಪಾಲಿಟಿಕ್ಸ್ ಅಸಮಾಧಾನ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಬಹಳ ದೊಡ್ಡ ಮಟ್ಟದ ಅಸಮಾಧಾನ ಸ್ಫೋಟ ಆಗುತ್ತದೆ. ವಿಜಯೇಂದ್ರ ಅವರು ಹೇಳಿದ್ರೆ ಯಾರು ನಂಬುತ್ತಿಲ್ಲ, ಕಾಂಗ್ರೆಸ್‌ನಲ್ಲಿ ಈಗಾಗಲೇ ಕಚ್ಚಾಟ ಶುರುವಾಗಿದೆ. ಯಾವ ರೀತಿ ಬಡಿದಾಡಿಕೊಳ್ಳುತ್ತಾರೆ ನೋಡಬೇಕಿದೆ. ರಾಜ್ಯದ ರೈತರನ್ನು ವಕ್ಫ್ ಮೂಲಕ ಸಿದ್ದರಾಮಯ್ಯ ರೈತರನ್ನು ಬೀದಿಗೆ ತಂದಿದ್ದಾರೆ. ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ್ದಾರೆ. ರೈತರ ತೊಗರಿ ಬೆಳೆ ಹಾನಿಗೆ ಪರಿಹಾರ ಕೊಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ, ಒಂದು ರೂಪಾಯಿ ಪರಿಹಾರವನ್ನು ಈ ಸರ್ಕಾರ ಕೊಟ್ಟಿಲ್ಲ, ರೈತರು ಈಗ ಪರದಾಡುತ್ತಿದ್ದಾರೆ ಎಂದು ತಿಳಿಸಿದರು.
Advertisement
ಬಿಜೆಪಿಯಲ್ಲಿ ಬಣ ಬಡಿದಾಟ ವಿಚಾರವಾಗಿ ಮಾತನಾಡಿ, ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ ಎಲ್ಲವೂ ಸರಿ ಹೋಗುತ್ತದೆಂದು ಪ್ರತಿಕ್ರಿಯಿಸಿದರು.ಇದನ್ನೂ ಓದಿ:ಜನರಿಗೆ ಕಾನೂನಿನ ಬಗ್ಗೆ ಗೌರವವೂ ಇಲ್ಲ, ಭಯವೂ ಇಲ್ಲ: ರಸ್ತೆ ಅಪಘಾತಗಳ ಬಗ್ಗೆ ಗಡ್ಕರಿ ಆತಂಕ