ಬೆಂಗಳೂರು: ಡಿಕೆಶಿಗೆ ಕೆಪಿಸಿಸಿ ಪಟ್ಟ ತಪ್ಪಿಸಲು ಸಿದ್ದರಾಮಯ್ಯ ಪಡೆ ದೆಹಲಿಗೆ ಎಂಟ್ರಿ ಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಬರುವುದು ಖಚಿತವಾಗುತ್ತಿದ್ದಂತೆ ಅದನ್ನ ತಪ್ಪಿಸಲು ಸಿದ್ದರಾಮಯ್ಯ ಬಣ ದೆಹಲಿಯಲ್ಲಿ ಲಾಬಿ ಆರಂಭಿಸಿದೆ ಎನ್ನಲಾಗುತ್ತಿದೆ.
ಎರಡು ದಿನದಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ಕೃಷ್ಣ ಬೈರೇಗೌಡ ಹಾಗೂ ರಿಜ್ವಾನ್ ಅರ್ಷದ್ ಅವರು ಶತಾಯಗತಾಯ ಎಂ.ಬಿ.ಪಾಟೀಲ್ ರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ವರಿಷ್ಠರ ಮನವೊಲಿಕೆ ಮಾಡತೊಡಗಿದ್ದಾರೆ. ಒಕ್ಕಲಿಗರಿಗೆ ಕೊಡುವುದಾದರೆ ಕ್ಲೀನ್ ಇಮೇಜ್ ಇರುವ ಕೃಷ್ಣ ಬೈರೇಗೌಡರಿಗೆ ಕೊಡುವಂತೆ ಸಿದ್ದರಾಮಯ್ಯ ಒತ್ತಡ ಹೇರತೊಡಗಿದ್ದಾರೆ.
Advertisement
Advertisement
ರಾಹುಲ್ ಗಾಂಧಿ ಆಪ್ತರ ಮೂಲಕ ಎಂ.ಬಿ.ಪಾಟೀಲ್ ಪರವಾಗಿ ಕೃಷ್ಣ ಬೈರೇಗೌಡ ಹಾಗೂ ರಿಜ್ವಾನ್ ಲಾಬಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬಣಕ್ಕೆ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಹ ಸಾಥ್ ನೀಡಿದ್ದಾರೆ. ಎಂ.ಬಿ.ಪಾಟೀಲ್ ಅಥವಾ ಕೃಷ್ಣ ಬೈರೇಗೌಡರಿಗೆ ಅವಕಾಶ ಕೊಡುವಂತೆ ಕಡೆಗಳಿಗೆಯಲ್ಲಿ ಲಾಬಿ ಜೋರಾಗಿದೆ. ಇದನ್ನೂ ಓದಿ: ‘ಕೆಪಿಸಿಸಿ ಪಟ್ಟ ಅಲಂಕರಿಸಲು ಸಿದ್ಧ, ಆದ್ರೆ 8 ಷರತ್ತು ಒಪ್ಪಬೇಕು’ – ಡಿಕೆ ಶಿವಕುಮಾರ್