ಏಯ್ ಬಾರಯ್ಯ ಇಲ್ಲಿ… ಯಾವನ್ ಅವ್ನು ಎಸ್ಪಿ ಎನ್ನುತ್ತಲೇ ಪೊಲೀಸ್ (Belagavi Police) ಅಧಿಕಾರಿ ವಿರುದ್ಧ ವೇದಿಕೆ ಮೇಲೆಯೇ ರೇಗಾಡಿದ ಸಿಎಂ ಸಿದ್ದರಾಮಯ್ಯ (Siddaramaiah), ಹೊಡೆಯಲು ಕೈಎತ್ತಿದ ಪ್ರಸಂಗ ನಡೆದಿದೆ..
ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಬೆಳಗಾವಿಯಲ್ಲಿ ಪ್ರತಿಭಟನೆ (Belagavi Protest) ನಡೆಯಿತು. ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಸಹ ಪ್ರೊಟೆಸ್ಟ್ ನಡೆಸಿದ್ರು. ಅಲ್ಲದೇ, ಕಾಂಗ್ರೆಸ್ ಪ್ರತಿಭಟನೆಯ ಸ್ಥಳದತ್ತ ಬಿಜೆಪಿ ಮಹಿಳಾ ಕಾರ್ಯಕತೆರ್ಯರು (BJP Women Worker) ಎಂಟ್ರಿಕೊಟ್ರು. ಈ ವೇಳೆ ಸಿಎಂ ವೇದಿಯಲ್ಲಿ ಮಾತನಾಡುತ್ತಿದ್ದಾಗ ಕಪ್ಪು ಬಟ್ಟಿ ಪ್ರದರ್ಶಿಸಲಾಯ್ತು. ಇದ್ರಿಂದ ಸಿದ್ದರಾಮಯ್ಯ ಸಂಯಮ ಕಳೆದುಕೊಂಡ್ರು. ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಯುದ್ಧ ಪ್ರಾರಂಭ ಮಾಡಲಿ: ಬಸವರಾಜ ರಾಯರೆಡ್ಡಿ
ಧಾರವಾಡ ಎಎಸ್ಪಿ ನಾರಾಯಣ ಬರಮ ಅವರಿಗೆ ಕ್ಲಾಸ್
ಬಿಜೆಪಿ ಕಾರ್ಯಕರ್ತರು ವೇದಿಕೆ ಬರ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರ ಕೋಪತಾಪ ಹೆಚ್ಚಾಗುವಂತೆ ಮಾಡ್ತು. ವೇದಿಕೆಯ ಭದ್ರತೆಗೆ ನಿಯೋಜನೆಗೊಂದಿದ್ದ ಧಾರವಾಡದ ಎಎಸ್‌ಪಿ ನಾರಾಯಣ ಬರಮನಿಗೆ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡ್ರು. ಯಾರೋ ಅವನು ಎಸ್‌ಪಿ ಇಲ್ಲಿ.. ಏನ್ ಮಾಡ್ತಾ ಇದ್ದೀಯಾ…? ಎಂದು ಕೆಂಡಾಮಂಡಲವಾದ್ರು. ಅಲ್ಲದೇ, ಹತ್ತಿರಬಂದ ಎಎಸ್‌ಪಿ ನಾರಾಯಣ ಬರಮನಿಗೆ ಸಿಎಂ ಸಿದ್ದರಾಮಯ್ಯ ಕೈಎತ್ತಿ ಹೊಡೆಯೋದಕ್ಕೆ ಮುಂದಾದ್ರು. ಸಿಎಂ ಕೈಎತ್ತುತ್ತಿದ್ದಂತೆ ಹೆದರಿದ ಎಎಸ್‌ಪಿ, ಒಂದು ಹೆಜ್ಜೆ ಹಿಂದೆ ಸರಿದರು. ಘಟನೆಯಿಂದ ಸಿಎಂ ಒಂದು ಕ್ಷಣ ವಿಚಲಿತರಾದ್ರು. ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿಯವರಿಗೆ ಒಂದೇ ಒಂದು ಸಭೆ ಮಾಡಲು ಬಿಡಲ್ಲ: ಡಿಕೆಶಿ ವಾರ್ನಿಂಗ್
ಪೊಲೀಸರೊಂದಿಗೆ ಸಚಿವೆ ಹೆಬ್ಬಾಳ್ಕರ್ ವಾಗ್ದಾದ..!
ಘಟನೆಯ ನಂತರ ಸಮಾವೇಶದ ಹೊರಗೆ ಬಿಜೆಪಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೀತು. ಸ್ಥಳಕ್ಕೆ ಎಂಟ್ರಿಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಪೊಲೀಸರಿಗೆ ಅವಾಜ್ ಹಾಕಿದ್ರು. ಬಿಜೆಪಿ ಕಾರ್ಯಕರ್ತರನ್ನ ಒಳಗೆ ಹೇಗೆ ಬಿಟ್ರಿ..? ನೀವು ಎಲ್ಲಿಗೆ ಹೋಗಿದ್ರಿ ಎಂದು ಡಿಸಿಪಿ ರೋಹನ್ ಜಗದೀಶ್ ಅವರಿಗೆ ಏರುಧ್ವನಿಯಲ್ಲಿ ಕ್ಲಾಸ್ ತೆಗೆದುಕೊಂಡ್ರು.
ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿ ಪಡಿಸಿದ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು, ನಮ್ಮಲ್ಲೂ ಕಾರ್ಯಕರ್ತರು ಇದ್ದಾರೆ. ಇಂತಹ ಬೆದರಿಕೆ ನಾವು ಹೆದರಲ್ಲ ಅಂದ್ರು, ಇನ್ನೂ, ಬಿಜೆಪಿಯವರಿಗೆ ಒಂದೇ ಒಂದು ಸಭೆ ಮಾಡಲು ಬಿಡಲ್ಲ ಎಂದು ಡಿಸಿಎಂ ಡಿಕೆಶಿ ಎಚ್ಚರಿಕೆ ಕೊಟ್ರು. ಇದನ್ನೂ ಓದಿ: ಇ-ಸ್ವತ್ತು ಉತಾರ ಮಾಡಲು 4 ಲಕ್ಷ ಲಂಚ ಪಡೆಯುತ್ತಿದ್ದಾಗ ಪಿಡಿಓ, ಮೂವರು ಗ್ರಾಪಂ ಸದಸ್ಯ ಅರೆಸ್ಟ್
ಸಿಎಂ ವರ್ತನೆಗೆ ಕೇಸರಿ ನಾಯಕರು ಗರಂ..!
ವೇದಿಕೆ ಮೇಲೆ ಪೊಲೀಸ್ ಅಧಿಕಾರಿ ಮೇಲೆ ಕೈಎತ್ತಲು ಹೋಗಿರೋದನ್ನ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಖಂಡಿಸಿದ್ದಾರೆ. ಪೊಲೀಸರು ಸರ್ಕಾರದ ಗುಲಾಮರಾ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಕಿಡಿಕಾರಿದ್ರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮಾತನಾಡಿ, ಸಿಎಂ ಎಲ್ಲೆ ಹೋದ್ರು ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತೇವೆ. ಹೋರಾಟಕ್ಕೂ ಅವಕಾಶ ನಿಮ್ಮ ಸರ್ಕಾರದಲ್ಲಿ ಇಲ್ವಾ..? ಎಂದು ಪ್ರಶ್ನಿಸಿದ್ರು.. ಇನ್ನೂ ಜೆಡಿಎಸ್ ಕೂಡ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ.