ಬೆಂಗಳೂರು: ಕೋಲಾರದಲ್ಲಿ (Kolar) ಸಿದ್ದರಾಮಯ್ಯ (Siddaramaiah) ಅವರನ್ನು ನಿಲ್ಲಿಸಿ, ಅವರ ಪಕ್ಷದವರೇ ಹರಕೆಯ ಕುರಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೇಳಿದ್ದಾರೆ.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರೇ, ಕೋಲಾರದಲ್ಲಿ ನಿಮ್ಮನ್ನು ಬಲಿ ಕೊಡೋಕೆ ತರುತ್ತಿದ್ದಾರೆ. ಈಗ ಎಲ್ಲಿ ಇದ್ದೀರೋ ಅಲ್ಲೇ ನಿಲ್ಲಿ. ಸ್ನೇಹಿತನಾಗಿ ನಿಮಗೆ ಸಲಹೆ ಕೊಡುತ್ತೇನೆ. ಸಿದ್ದರಾಮಯ್ಯ ಹರಕೆಯ ಕುರಿ ಆಗುವುದು ಬೇಡ ಎಂದರು.
ಕುಮಾರಸ್ವಾಮಿ ಅವರು ನಿಮ್ಮ ಬಗ್ಗೆ ಹೇಳಿದ್ದಾರೆ. ನಮ್ಮ ಅಭ್ಯರ್ಥಿ ಯಾರು ಆಗಬೇಕು ಅಂತ ತೀರ್ಮಾನ ಆಗಿದೆ. ಕೋಲಾರ ಪರಿಸ್ಥಿತಿ ಏನು ಅಂತ ನನ್ನ ಕಣ್ಣಿಗೆ ಕಾಣಿಸುತ್ತಿದೆ. ಮುಂದೆ ಅವರಿಗೆ ಬಿಟ್ಟಿದ್ದು. ನಾವು ಸತತವಾಗಿ ಕೆಲಸ ಮಾಡುತ್ತೇವೆ. ಕರ್ನಾಟಕದಲ್ಲಿ ಜೆಡಿಎಸ್‌ನಲ್ಲಿ ಉತ್ತಮ ವಾತಾವರಣ ಇದೆ ಎಂದರು. ಇದನ್ನೂ ಓದಿ: ಕೋಲಾರ ಬೇಡ, ಚಾಮುಂಡೇಶ್ವರಿಯಲ್ಲಿ ನಿಂತು ಗೆದ್ದು ಬನ್ನಿ- ಸಿದ್ದರಾಮಯ್ಯಗೆ ಈಶ್ವರಪ್ಪ ಸಲಹೆ
ಮುಸ್ಲಿಂ ಮತ ಒಲೈಕೆಗೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಂ ಮತ ನಮ್ಮ ಜೊತೆಯೇ ಇರುತ್ತದೆ. ಸಿದ್ದರಾಮಯ್ಯ ಇದ್ದ ಕಡೆ ಕುರುಬರು ಇಲ್ಲವಾ? ಹಾಗೆಯೇ ಸಾಬ್ರು ಇರೋ ಕಡೆ ಇಬ್ರಾಹಿಂ ಇರೋಲ್ಲವಾ? ಅದರಲ್ಲಿ ತಪ್ಪೇನಿದೆ? ಅವರಿಗೆ ಅವರು ನಾಯಕರು, ನಮಗೆ ನಾವು ನಾಯಕರು. ಕೋಲಾರದಲ್ಲಿ ವರ್ತೂರ್ ಪ್ರಕಾಶ್ ನೋಡಿಕೊಳ್ಳೋಕೆ ಸಿದ್ದರಾಮಯ್ಯಗೆ ಹೇಳಿ ಸಾಕು ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು. ಇದನ್ನೂ ಓದಿ: ಮಕ್ಕಳ ಕಲ್ಯಾಣ ಕಾರ್ಯ ನಿರ್ವಹಣೆ ನಮ್ಮೆಲ್ಲರ ಹೊಣೆ- ರಾಜ್ಯಪಾಲ