ರಾಯಚೂರು: ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ (Invitation) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಹೆಸರು ಕೈಬಿಟ್ಟಿದ್ದಾರೆಂದು ಕಾರ್ಯಕ್ರಮದ ವೇದಿಕೆ ಏರಿ ಬಿಜೆಪಿ (BJP) ಸಚಿವರ ಮುಂದೆಯೇ ಸಿದ್ದು ಅಭಿಮಾನಿಗಳು ಗಲಾಟೆ ನಡೆಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಜಿಲ್ಲಾಡಳಿತದ ವತಿಯಿಂದ ನಗರದ ಗಂಜ್ ವೃತ್ತದ ಬಳಿ ಕನಕದಾಸ ಪುತ್ಥಳಿ ಅನಾವರಣ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರಾದ ಎಂಟಿಬಿ ನಾಗರಾಜ್ (MTB Nagaraj), ಬೈರತಿ ಬಸವರಾಜ್ (BA Basavaraj) ಸೇರಿ ಹಲವು ಗಣ್ಯರ ಮುಂದೆ ಗಲಾಟೆ ನಡೆದಿದೆ. ಪುತ್ಥಳಿ ಅನಾವರಣಕ್ಕೆ ಸಿದ್ದರಾಮಯ್ಯ ಅವರ ಕೊಡುಗೆಯಿದೆ. ಅದನ್ನ ಸ್ಮರಿಸದೇ ಕೇವಲ ಬಿಜೆಪಿ ಸರ್ಕಾರದ (BJP Government) ಅನುದಾನ ಎನ್ನಲಾಗುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಡುಗಡೆಯ ದಿನವೇ 2000 ಪ್ರದರ್ಶನ ಕಂಡ ಗಂಧದ ಗುಡಿ
Advertisement
Advertisement
ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಹಾಲುಮತ ಸಮಾಜದವರಿಂದ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ (Shivaraj Patil) ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ನಾನು ಹುಷಾರಾಗಿದ್ದೀನಿ, ಅಪ್ಪು ಹಳೆಯ ಪೋಸ್ಟ್ ವೈರಲ್
Advertisement
Advertisement
ಸಿದ್ದರಾಮಯ್ಯ ಹೆಸರು ಕೈಬಿಟ್ಟಿದ್ದಕ್ಕೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಭಾಷಣದ ವೇಳೆ ಅಸಮಾಧಾನ ಹೊರಹಾಕಿದ್ದಾರೆ. ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಹೆಸರನ್ನ ಹಾಕಬೇಕಿತ್ತು. ಅದ್ಯಾವ ಪ್ರೋಟೋಕಾಲ್ ಪಾಲಿಸಿದ್ದಾರೋ ಗೊತ್ತಿಲ್ಲ. ವಿಶೇಷ ಆಹ್ವಾನಿತರಾಗಿ ಹೆಸರು ಹಾಕಬಹುದಿತ್ತು. ಏಕೆಂದರೆ ಅವರು ಸಮಾಜಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ.