– ಡಿಕೆಶಿ ಸಿಎಂ ಆಗಬೇಕಾದರೇ ಸಿದ್ದರಾಮಯ್ಯ ಬೆಂಬಲ ಬೇಕು ಎಂದ ಜಿಟಿಡಿ
ಮೈಸೂರು: ಸಿದ್ದರಾಮಯ್ಯ (Siddaramaiah) ಅವರ ಭವಿಷ್ಯ ಮತ್ತು ಅದೃಷ್ಟ ಎರಡೂ ಗಟ್ಟಿಯಾಗಿದೆ. ಸಿದ್ದರಾಮಯ್ಯರಂಥಾ ಅದೃಷ್ಟ ರಾಜಕಾರಣಿ ಇನ್ನೊಬ್ಬರಿಲ್ಲ ಎಂದು ಸಿಎಂ ಪರ ಶಾಸಕ ಜಿ.ಟಿ ದೇವೇಗೌಡ (GT Devegowda) ಬ್ಯಾಟ್ ಬೀಸಿದೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ 1983ರಲ್ಲಿ ಅದೃಷ್ಟದಿಂದ ಶಾಸಕರಾದರು. ಅವರ ಭವಿಷ್ಯ, ಅದೃಷ್ಟ ಗಟ್ಟಿಯಾಗಿಯೇ ಸಾಗಿದೆ. ಸಿದ್ದರಾಮಯ್ಯರಿಗೆ ಇರುವಂತಹ ಅದೃಷ್ಟ ಬೇರೆ ಯಾರಿಗೂ ಇಲ್ಲ. ಡಿಕೆಶಿ ಅವರು ಒಂದು ದಿನ ಸಿಎಂ ಆಗುತ್ತಾರೆ. ಆದರೆ ಅದು ಯಾವಾಗ ಅಂತಾ ಗೊತ್ತಿಲ್ಲ. ಡಿಕೆ ಸಿಎಂ ಆಗಬೇಕಾದರೆ ಸಿದ್ದರಾಮಯ್ಯ ಬೆಂಬಲ ಬೇಕು. 10 ಶಾಸಕರನ್ನು ಇಟ್ಟುಕೊಂಡು ಯಾರೂ ಸಿಎಂ ಆಗಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ, ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದು ಕೇಳಿ ಕೇಳಿ ಜನಕ್ಕೂ ಸಾಕಾಗಿದೆ ಬಿಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳಿದ್ದವರ ಕಾರಿನ ಗಾಜು ಒಡೆದು 4 ಲಕ್ಷದ ಕ್ಯಾಮೆರಾ, ಲೆನ್ಸ್ ದೋಚಿದ ಕಳ್ಳರು
ಮುಡಾ ಹಗರಣ ವಿಚಾರದಲ್ಲಿ ಸಿಎಂಗೆ ಕ್ಲೀನ್‌ಚಿಟ್ ವಿಚಾರವಾಗಿ ಮಾತನಾಡಿದ ಅವರು, ಎಫ್‌ಐಆರ್ ಆದ ಕೂಡಲೇ ಸಿದ್ದರಾಮಯ್ಯರ ರಾಜೀನಾಮೆ ಕೇಳುತ್ತಿದ್ದರು. ಈಗ ನೋಡಿ ಈ ಆರೋಪಕ್ಕೆ ಸಾಕ್ಷಿ ಇಲ್ಲ. ಈಗ ಏನು ಹೇಳುತ್ತಾರೆ. ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ಕೇಳುವುದು ತಪ್ಪು ಎಂದು ಹೇಳಿದ್ದೆ. ಅದನ್ನೇ ಮಹಾ ಅಪರಾಧದ ರೀತಿ ಬಿಂಬಿಸಿದ್ದರು. ಈಗ ಸತ್ಯ ಗೊತ್ತಾಗಿದೆ ಎಂದರು. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ AI ಮೊರೆ – ಏನಿದು VAC?