– ರಾಜಮನೆತನದಿಂದ ಮಂಗಳವಾರ ಮುರ್ಮುಗೆ ಆತಿಥ್ಯ
ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) 2 ದಿನಗಳ ಪ್ರವಾಸಕ್ಕೆ ಮೈಸೂರಿಗೆ ಆಗಮಿಸಿದ್ದಾರೆ. ಏರ್‌ಪೋರ್ಟ್‌ನಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವದಲ್ಲಿ ಭಾಗಿಯಾಗಿದ್ದರು.
ಮೊದಲು ಭಾಷಣ ಆರಂಭಿಸಿದ ಸಿಎಂ ಸಿದ್ದರಾಮಯ್ಯ (Siddaramaiah), ನಿಮಗೆ ಕನ್ನಡ ಬರುತ್ತಾ ಎಂದು ಪ್ರಶ್ನಿಸಿ, ಐ ಸ್ಪೀಕ್ ಕನ್ನಡ ಅಂದ್ರು. ಕೊನೆಯಲ್ಲಿ ಸಿಎಂ ಪ್ರಶ್ನೆಗೆ ಉತ್ತರ ಕೊಟ್ಟ ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತದಲ್ಲಿ ಎಷ್ಟು ಭಾಷೆಗಳಿವೆ? ಎಷ್ಟು ಸಂಸ್ಕೃತಿಗಳಿವೆ? ಎಷ್ಟು ಪರಂಪರೆಗಳಿವೆ, ಅವೆಲ್ಲವೂ ನನಗಿಷ್ಟ. ಕನ್ನಡವು (Kannada Language) ಸ್ವಲ್ಪ ಸ್ವಲ್ಪ ಅರ್ಥ ಆಗುತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿದ್ರು. ಇದನ್ನೂ ಓದಿ: ಕಾಮಿಡಿ ಸ್ಟಾರ್‌ಗೆ ಕಂಕಣ ಭಾಗ್ಯ – ಚಿಕ್ಕಣ್ಣನ ಬದುಕಿಗೆ ಮನಮೆಚ್ಚಿದ ಹುಡುಗಿ
ಮಂಗಳವಾರವಾದ ನಾಳೆ ಮೈಸೂರು ಅರಮನೆಗೆ ಭೇಟಿ ಕೊಟ್ಟು, ರಾಜಮನೆತನ ಆತಿಥ್ಯ ಸ್ವೀಕರಿಸಲಿದ್ದಾರೆ. ಮಧ್ಯಾಹ್ನದ ನಂತರ ದೆಹಲಿಗೆ ವಾಪಸ್ ಆಗಲಿದ್ದಾರೆ. ಇದನ್ನೂ ಓದಿ: ಭಾರತ ಈಗ ಸುಂಕ ಕಡಿಮೆ ಮಾಡೋಕೆ ಮುಂದಾಗಿದೆ – ಭಾರತದ ಜೊತೆಗಿನ ಸಂಬಂಧವನ್ನ ವಿಪತ್ತು ಎಂದ ಟ್ರಂಪ್
ಹುಟ್ಟೂರಲ್ಲಿ ಶಾಲೆ ಉದ್ಘಾಟಿಸಿದ ಸಿಎಂ
ಇನ್ನೂ ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಇವತ್ತು ಹುಟ್ಟೂರು ಸಿದ್ದರಾಮನ ಹುಂಡಿಗೆ ಭೇಟಿ ಕೊಟ್ಟು ʻಪಬ್ಲಿಕ್ ಶಾಲೆʼ ಉದ್ಘಾಟಿಸಿದ್ರು. ಸಿಎಂಗೆ ಶಾಲಾ ಆಡಳಿತ ಮಂಡಳಿ ಪೂರ್ಣಕುಂಭ ಸ್ವಾಗತ ನೀಡಿದ್ರು. ಬಳಿಕ ಮಾತನಾಡಿದ ಸಿಎಂ ಊರಿನ ಶಾಲೆಗೂ ನನಗೂ ಮುಗಿಯದ ಋಣ ಅಂತ ಗುಣಗಾನ ಮಾಡಿದ್ರು. ಇದಕ್ಕೂ ಮುನ್ನ, ಶಾರದಾದೇವಿ ನಗರದಲ್ಲಿನ ತಮ್ಮ ನಿವಾಸದ ಬಳಿ ಸಾರ್ವಜನಿಕರ ಅಹವಾಲು ಕೂಡ ಸ್ವೀಕರಿಸಿದ್ರು. ಮೈಸೂರಿನ ಅಗ್ರಹಾರದಲ್ಲಿರೋ ಮೈಲಾರಿ ಹೋಟೆಲ್‌ಗೂ ಭೇಟಿ ಕೊಟ್ಟು ಇಷ್ಟವಾದ ಇಡ್ಲಿ ಕೂಡ ಸವಿದ್ರು. ಇದನ್ನೂ ಓದಿ: ಪಿಜಿ ಅಲೈಡ್ ಹೆಲ್ತ್ ಸೈನ್ಸ್, ಎಂ.ಫಾರ್ಮ, ಫಾರ್ಮ-ಡಿಗೆ ಪ್ರವೇಶ ಪರೀಕ್ಷೆ: ಕೆಇಎ