ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಡಿನ್ನರ್ ಪಾಲಿಟಿಕ್ಸ್ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿಕ ಈಗ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರಿಗೆ ಡಿನ್ನರ್ ಪಾರ್ಟಿ (Dinner Party) ಕೊಡುತ್ತಿರುವುದು ಕುತೂಹಲಹಕ್ಕೆ ಕಾರಣವಾಗಿದೆ.
ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟವು ನಿಲ್ಲುತ್ತಿಲ್ಲ. ಡಿನ್ನರ್ ಪಾರ್ಟಿ ಪ್ರಹಸನವೂ ಮುಗಿಯುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಸಂಭ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಡಿನ್ನರ್ ಪಾರ್ಟಿ ಕೊಟ್ಟರೆ, ಅದಕ್ಕೆ ಕೌಂಟರ್ ಎಂಬಂತೆ ಸಿಎಂ ಸಿದ್ದರಾಮಯ್ಯ (Siddaramaiah) ಇಂದು ಆಪ್ತ ಸಚಿವರಿಗೆ ಡಿನ್ನರ್ ಆಯೋಜನೆ ಮಾಡಿದ್ದಾರೆ. ಕಾವೇರಿ ನಿವಾಸದಲ್ಲಿ ರಾತ್ರಿ ಆಪ್ತ ಸಚಿವರಿಗೆ ಡಿನ್ನರ್ ಇಟ್ಟಿಕೊಂಡಿದ್ದು, ಸಿಎಂ ನಡೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಹೋಟೆಲ್‌ಗಳಿಗೆ ಸದ್ಯಕ್ಕೆ ಗ್ಯಾಸ್ ಪೂರೈಕೆ ಇಲ್ಲ – ಹೋಟೆಲ್ ಉದ್ಯಮಕ್ಕೆ ಮತ್ತೆ ಸರ್ಕಾರ ಶಾಕ್
‘ಕೈ’ ಪಾಳಯದಲ್ಲಿ ಕುರ್ಚಿ ವಾರ್ ಜೋರಾಗಿ ನಡೆಯುತ್ತಿದೆ. ಒಂದುಕಡೆ ಡಿ.ಕೆ.ಶಿವಕುಮಾರ್ (D.K.Shivakumar) ಟೀಂ ಸಭೆ ಮಾಡಿ, ಸಿದ್ದು ಟೀಂಗೆ ಸಂದೇಶ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಸಿದ್ದರಾಮಯ್ಯ ಟೀಂ ಕೂಡಾ ತೆರೆಮರೆಯಲ್ಲಿ ಗೇಮ್ ಶುರು ಮಾಡಿದೆ. ಇದರ ಮಧ್ಯೆ ಸಿಎಂ ಡಿನ್ನರ್ ಪಾರ್ಟಿ ಕುತೂಹಲ ಮೂಡಿಸಿದೆ. ಆಪ್ತ ಸಚಿವರ ಜೊತೆ ಸಭೆ ಮಾಡಿ ಕುರ್ಚಿ ಕದನಕ್ಕೆ ಏನಾದ್ರು ಟ್ವಿಸ್ಟ್ ಕೊಡ್ತಾರಾ ಸಿಎಂ ಎಂದು ಕಾದು ನೋಡಬೇಕಿದೆ.
ಪಂಚರಾಜ್ಯ ಚುನಾವಣೆ, ಜಿಬಿಎ ಚುನಾವಣೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಿದ್ದರಾಮಯ್ಯ ಸೇಫ್ ಆಗಬಹುದು. ಅದಾದ ಬಳಿಕ ಏನು ಎಂಬ ಚರ್ಚೆಗಳು ಇವತ್ತಿನ ಡಿನ್ನರ್ ಮೀಟಿಂಗ್‌ನಲ್ಲಿ ಆಗಬಹುದು. ಎಂತಹದ್ದೇ ಸಂದರ್ಭ ಬಂದರೂ ತಮ್ಮ ಜೊತೆ ನಿಲ್ಲಿ ಎಂಬ ಸಂದೇಶವನ್ನು ಸಿಎಂ ಆಪ್ತ ಸಚಿವರಿಗೆ ರವಾನೆ ಮಾಡಬಹುದು. ಸಿಎಂ ಡಿನ್ನರ್ ಮೀಟಿಂಗ್ ಬಳಿಕ ಹೊಸ ರಾಜಕೀಯ ಬೆಳವಣಿಗಳು ಆಗುತ್ತಾ ಎಂಬುದು ಸದ್ಯದ ಕುತೂಹಲ. ಇದನ್ನೂ ಓದಿ: 20% ಗ್ಯಾಸ್ ವಿತರಣೆಗೆ ಕೇಂದ್ರ ಗ್ರೀನ್ ಸಿಗ್ನಲ್ – ಇಂದು ಹೋಟೆಲ್ ಸಂಘದಿಂದ ಸರ್ಕಾರದ ಭೇಟಿ

