– ಸಿಎಂ ಮೇಲೆ ಆರೋಪ ಬಂದಾಗಲೆಲ್ಲಾ ಜಾತಿಗಣತಿ ತರ್ತಾರೆ
ವಿಜಯಪುರ: ಜಾತಿ ಜನಗಣತಿ (Caste Census Report) ಮಂಡನೆ ಹಿಂದೆ ಸಿದ್ದರಾಮಯ್ಯ (Siddaramaiah) ಷಡ್ಯಂತ್ರ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಗಂಭೀರ ಆರೋಪ ಮಾಡಿದ್ದಾರೆ.
ಜಾತಿಗಣತಿ ವರದಿ ಕುರಿತು ವಿಜಯಪುರದಲ್ಲಿ ಮಾತನಾಡಿದ ಅವರು, ಷಡ್ಯಂತ್ರ, ಹುನ್ನಾರ ಹಿನ್ನೆಲೆ ಸಿದ್ದರಾಮಯ್ಯ ಜಾತಿ ಜನಗಣತಿ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ಮೇಲೆ ಆರೋಪ ಬಂದಾಗಲೆಲ್ಲಾ ಜಾತಿ ಜನಗಣತಿ ತರುತ್ತಾರೆ. ಅಧಿಕಾರದಿಂದ ಇಳಿಯುವ ಸಮಯ ಬಂದಾಗಲೆಲ್ಲ ಹೀಗೆ ಮಾಡುತ್ತಾರೆ ಎಂದರು. ಇದನ್ನೂ ಓದಿ: 3 ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರ ಅಂತ್ಯ
ಲಿಂಗಾಯತ, ಒಕ್ಕಲಿಗರು, ದಲಿತರನ್ನು ಒಡೆಯುವ ಹುನ್ನಾರ ಇದು. ಮುಸ್ಲಿಮರನ್ನು ಪ್ರೊಜೆಕ್ಟ್ ಮಾಡಲು ಜಾತಿ ಗಣತಿ ಮಂಡನೆ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಆಂತರಿಕ ಯುದ್ಧ ನಡೆಯುತ್ತದೆ. ಸಿದ್ದರಾಮಯ್ಯ ಬಳಿಕ ಡಿಕೆಶಿ ಪಟ್ಟ ಏರಲು ಕಾಯುತ್ತಿದ್ದಾರೆ. ನವೆಂಬರ್, ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ನಲ್ಲಿ ಮಹಾ ಸ್ಫೋಟವಾಗಲಿದೆ. ಟೈಂ ಬಾಂಬ್ ಸ್ಫೋಟವಾಗಲಿದೆ. ಅಧಿಕಾರದಲ್ಲಿ ಮುಂದುವರೆಯಲು ಗೊಂದಲ ಸೃಷ್ಟಿಸಿದ್ದಾರೆ. ಡಿಕೆಶಿ ನವೆಂಬರ್, ಡಿಸೆಂಬರ್‌ಗೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಅದು ಸ್ಫೋಟವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: Waqf Act| ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು – ಸುಪ್ರೀಂ ವಿಚಾರಣೆಗೆ ಮಾನದಂಡ ಏನು?- ವಕೀಲ ವಿಷ್ಣು ಶಂಕರ್ ಜೈನ್
ಈ ಹಿಂದೆಯೆ ಜಾತಿ ಜನಗಣತಿ ಮಂಡನೆ ಮಾಡಬೇಕಿತ್ತು. ಅಂದಿನಿಂದಲೂ ವಿವಾದಾಸ್ಪದ ವರದಿ ಇದು. ಆಯೋಗ ಮಾಡಿದ್ದೇ ಸಿದ್ದರಾಮಯ್ಯ. ಅಂದು ಯಾಕೆ ಸ್ವೀಕಾರ ಮಾಡಲಿಲ್ಲ? ಅಂದೆ ಕ್ಯಾಬಿನೆಟ್‌ನಲ್ಲಿ ಇಡಬೇಕಿತ್ತು ಎಂದು ಹೇಳಿದರು. ಇದನ್ನೂ ಓದಿ: ವಕ್ಫ್ ಮಂಡಳಿಗೆ ಸದಸ್ಯರ ನೇಮಕ ಮಾಡುವಂತಿಲ್ಲ, ಆಸ್ತಿಗಳ ವಿಚಾರದಲ್ಲೂ ಯಥಾಸ್ಥಿತಿ ಕಾಪಾಡಿ: ಸುಪ್ರೀಂ