– ಡಿಕೆಶಿ ಕನಸಿಗೆ ಕಂಟಕ, ಹೈಕಮಾಂಡ್ ಧರ್ಮ ಸಂಕಟ!
ನವದೆಹಲಿ: ಡೆಲ್ಲಿಯಲ್ಲಿ ಕುಳಿತು ಡೆಲ್ಲಿ ಗೇಮ್ ಚಾಲೂ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ. ಸಿದ್ದರಾಮಯ್ಯ (Siddaramaiah) ಮತ್ತೆ ಫುಲ್ ಟರ್ಮ್ ಸಿಎಂ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ. ಡಿಕೆಶಿ (DK Shivakumar) ಪರ ಕೆಲ ಶಾಸಕರು ಮಾತಾಡ್ತಾರೆ, ಆದ್ರೆ ನಾಟ್ ಟೂ ಮಚ್ ಎನ್ನುವ ಮೂಲಕ ಸಿಎಂ ಚೇಂಜ್ ಚರ್ಚೆಗೆ ಎಂಡ್ ಎಂಬ ಸಂದೇಶ ರವಾನಿಸಿದ್ದಾರೆ. ಇದು ಡಿಕೆಶಿ, ಕಾಂಗ್ರೆಸ್ ಹೈಕಮಾಂಡ್‌ಗೆ ಒಟ್ಟೊಟ್ಟಿಗೆ ಚೆಕ್ ಮೇಟ್ ಇಟ್ಟಂತಿದೆ. ಹಾಗಾದ್ರೆ ಸಿದ್ದರಾಮಯ್ಯ ಸಿಎಂ ಚಾಂಪಿಯನ್ ಪಟ್ಟ ಉಳಿಸಿಕೊಳ್ತಾರಾ ಎಂಬ ಕುತೂಹಲ ಮನೆ ಮಾಡಿದೆ.
ಸಿಎಂ ಕುರ್ಚಿ ಚಾಂಪಿಯನ್ಸ್ ಪಟ್ಟ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಭರ್ಜರಿ ಆಲ್ ರೌಂಡರ್ ಆಟ ಆಡ್ತಿದ್ದಾರೆ. ಪೊಲಿಟಿಕಲ್ ಗೇಮ್‌ನಲ್ಲಿ ಬೌಲಿಂಗ್ ಮಾಡುವಾಗ ಗೂಗ್ಲಿ, ಬ್ಯಾಟಿಂಗ್ ಮಾಡುವಾಗ ರಿವರ್ಸ್ ಸ್ವೀಪ್, ಆಪ್ತರ ಚೈನ್ ಲಿಂಕ್ ಫೀಲ್ಡಿಂಗ್ ಮೂಲಕ ಎದುರಾಳಿಗಳನ್ನ ಬಗ್ಗು ಬಡಿಯುತ್ತಿದ್ದಾರೆ ಸಿದ್ದರಾಮಯ್ಯ. ಇದನ್ನೂ ಓದಿ: ತಾಯಿಯನ್ನು ಬಿಟ್ಟು ವಸತಿ ನಿಲಯದಲ್ಲಿ ಇರಲಾರೆ ಎಂದ ಬಾಲಕ ನೇಣಿಗೆ ಶರಣು!
ಡೆಲ್ಲಿಯಲ್ಲೇ ಕುಳಿತು ಸಿಎಂ ಸಿದ್ದರಾಮಯ್ಯ ಪೊಲಿಟಿಕಲ್ ಗೂಗ್ಲಿ ಹಾಕಿದ್ದಾರೆ. ಸಿಎಂ ಬದಲಾವಣೆಯನ್ನ ಡಿಕೆಶಿ ಕೇಳಿಯೇ ಇಲ್ಲ, ಹೈಕಮಾಂಡ್ ಹೇಳಿದಂಗೆ ನಾನು, ಡಿಕೆಶಿ ಎಲ್ಲರೂ ಕೇಳಬೇಕು. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಅಂತಾ ಚಾಣಾಕ್ಷ ನಡೆ ತೋರಿದ್ದಾರೆ. ರಾಷ್ಟ್ರೀಯ ವಾಹಿನಿ ಸುದ್ದಿವಾಹಿನಿ ಸಂದರ್ಶನದಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಎರಡೂವರೆ ವರ್ಷ ಪವರ್ ಶೇರ್ ತಳ್ಳಿ ಹಾಕಿದ್ದಾರೆ. ಹೈಕಮಾಂಡ್ ನನ್ನ ಆಡಳಿತಕ್ಕೆ ಮುದ್ರೆ ಒತ್ತಿದೆ ಎಂದು ಪೂರ್ಣಾವಧಿ ಸಿಎಂ ಅಸ್ತ್ರ ಪ್ರಯೋಗಿಸಿದ್ದಾರೆ. ಅಷ್ಟೇ ಅಲ್ಲ ಡಿಕೆಶಿ ಪರ ಕೆಲ ಶಾಸಕರು, ಮಾತಾಡ್ತಾರೆ, ಆದ್ರೆ ನಾಟ್ ಟೂ ಮಚ್, ಜಾಸ್ತಿ ಇಲ್ಲ ಎನ್ನುವ ಮೂಲಕ ಡಿಕೆಶಿಗೆ ಬಿಗಿ ರಾಜಕೀಯ ಹೊಡೆತ ಕೊಟ್ಟಿದ್ದಾರೆ. ಇದನ್ನೂ ಓದಿ: ರೀಲ್ಸ್‌ಗಾಗಿ ಕಂಪ್ಲಿ ಸೇತುವೆಯಿಂದ ಜಿಗಿದು ಹುಚ್ಚಾಟ
ಇನ್ನು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುತ್ತಿರುವ ಸಿಎಂ, ಡಿಸಿಎಂ ಇಬ್ಬರಿಗೂ ಒಂದಷ್ಟು ಆಯ್ಕೆಗಳಿವೆ. ಯಾರೂ ಏನೇ ಹೇಳಿದ್ರೂ ಹೈಕಮಾಂಡ್ ಮನದಲ್ಲಿ ಏನಿದೆ ಎಂಬುದನ್ನ ಯಾರೂ ಊಹಿಸಲು ಆಗ್ತಿಲ್ಲ. ಇದನ್ನೂ ಓದಿ: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ವೈದ್ಯಕೀಯ ಅಧೀಕ್ಷಕ
ಸಿದ್ದರಾಮಯ್ಯಗೆ ಇರುವ ಆಯ್ಕೆಗಳೇನು?
*ಸದ್ಯಕ್ಕೆ ಬಿಹಾರ ಚುನಾವಣೆ ಅಸ್ತ್ರ ಪ್ರಯೋಗಿಸುವುದು, ಅಹಿಂದ ಕಾರ್ಡ್ ಪ್ಲೇ
*ಮುಂದೆ ಹೈಕಮಾಂಡ್ ಹೇಳಿದಂಗೆ ಕೇಳ್ತೀನಿ ಎಂಬ ಸಂದೇಶ ರವಾನಿಸೋದು
*ಪವರ್ ಶೇರ್ ನಿಜವೇ ಆಗಿದ್ರೆ ಲಾಸ್ಟ್ ಛಾನ್ಸ್ ಗೆ ರಾಹುಲ್ ಸೇರಿ ಹೈಕಮಾಂಡ್ ಮನವೊಲಿಸಬಹುದು
*ಪವರ್ ಶೇರ್ ವಿಚಾರ ಬಂದಾಗ ಶಾಸಕರ ಬೆಂಬಲ ನೋಡಿ ತೀರ್ಮಾನಿಸಿ ಎನ್ನಬಹುದು
*ಹೈಕಮಾಂಡ್ ತೀರ್ಮಾನ ಮಾಡಿದ್ರೆ ನೀವು ಹೇಳಿದಂತೆ ನಾನು ಕೇಳ್ತೀನಿ ಅಂತಾ ಎಕ್ಸಿಟ್ ಪಡೆಯಬಹುದು
ಡಿಕೆಶಿಗೆ ಇರುವ ಆಯ್ಕೆಗಳು ಏನು?
*ಬಿಹಾರ ಚುನಾವಣೆ ಮುಗಿಯುವ ತನಕ ಮೌನವಾಗಿ ಇರೋದು
*ನವೆಂಬರ್ ಅಂತ್ಯ, ಡಿಸೆಂಬರ್ ಮೊದಲ ವಾರದಲ್ಲಿ ಪವರ್ ಶೇರ್ ಪ್ರಸ್ತಾಪಿಸುವುದು
*ಅಲ್ಲಿ ತನಕ ಸಿದ್ದರಾಮಯ್ಯ ಹೇಳಿಕೆ ಬೆಂಬಲಿಸಿ, ನೋ ಅದರ್ ಆಪ್ಶನ್ ಅಂತಾ ಸುಮ್ಮನಿರೋದು
*ಸೋನಿಯಾ, ಪ್ರಿಯಾಂಕಾ ಗಾಂಧಿ ಮೊರೆ ಹೋಗುವುದು
*ಶಾಸಕರ ಆಯ್ಕೆ ಏಕೆ? ಹೈಕಮಾಂಡ್ ತೀರ್ಮಾನ ಓಕೆ ಎಂದು ಪಟ್ಟು ಹಿಡಿಯುವುದು
ಒಟ್ನಲ್ಲಿ ಪವರ್ ಶೇರ್‌ಗೆ ಸಿದ್ದರಾಮಯ್ಯ ರಿವರ್ಸ್ ಸ್ವೀಪ್ ಮಾಡಿದ್ದು, ಡಿಕೆಶಿಗೆ ಒಳಶುಂಠಿ ಕೊಡುವ ಜೊತೆಗೆ ಟಚ್ ಮಾಡಿ ನೋಡುವ ಆಟಕ್ಕೆ ಪ್ಲ್ಯಾನ್ ಮಾಡಿದಂತಿದೆ. ಸಿದ್ದರಾಮಯ್ಯ ಚೆಕ್ ಹೈಕಮಾಂಡ್‌ಗೆ ಧರ್ಮಸಂಕಟವಾದ್ರೆ, ಡಿಕೆಶಿಗೆ ನುಂಗಲಾರದ ತುತ್ತಾಗಿತ್ತು, ಡಿಸೆಂಬರ್ ಬಿರುಗಾಳಿ ಯಾರನ್ನ ಎಲ್ಲಿ ಎತ್ತಿ ಬಿಸಾಡುತ್ತೋ ಕಾದು ನೋಡಬೇಕಿದೆ. ಇದನ್ನೂ ಓದಿ: 6ರ ಬಾಲಕಿಗೆ 45 ವರ್ಷದ ಅಫ್ಘಾನ್ ವ್ಯಕ್ತಿ ಜೊತೆ ಮದುವೆ – 9 ವರ್ಷದವರೆಗೆ ಮದುವೆಯಾದವನ ಮನೆಗೆ ಕಳಿಸದಂತೆ ತಾಲಿಬಾನ್ ಸೂಚನೆ