ಬೆಂಗಳೂರು: ಅತ್ತ ಡೆಲ್ಲಿಯಲ್ಲಿ ಸಿದ್ದರಾಮಯ್ಯ (CM Siddaramaiah) ಕ್ಲಿಯರ್ ಮೆಸೇಜ್‌ಗೆ ಆಪ್ತರು ದಿಲ್ ಖುಷ್ ಆಗಿದ್ದಾರೆ. ಬೆಂಗಳೂರಲ್ಲಿ ಸತೀಶ್ ಜಾರಕಿಹೊಳಿ (Satish Jarkiholi) ಕ್ಲೋಸ್ ಡೋರ್ ಮೀಟಿಂಗ್ ನಡೆಸಿದರು. ಬಳಿಕ ಒಂದೇ ಕಾರಿನಲ್ಲಿ ಒಟ್ಟಿಗೆ ಸದಾಶಿವನಗರ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದರು. ಅಷ್ಟೇ ಅಲ್ಲ ಜಮೀರ್, ದಿನೇಶ್ ಗುಂಡೂರಾವ್, ಪರಮೇಶ್ವರ್, ಈಶ್ವರ್ ಖಂಡ್ರೆ ಕೂಡ ಪ್ರತ್ಯೇಕವಾಗಿ ಖರ್ಗೆ ಭೇಟಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಸತೀಶ್ ಜಾರಕಿಹೊಳಿ, ಸಿಎಂ ಬದಲಾವಣೆ ಮ್ಯಾಚ್ ಕ್ಲೋಸ್ ಆಗಿದೆ. ಸಿದ್ದರಾಮಯ್ಯ ಈಗ ಹೇಳಿಕೆ ಕೊಡುವ ಅವಶ್ಯಕತೆ ಇತ್ತು ಅಂತಾ ಟಕ್ಕರ್ ಕೊಟ್ರೆ, ಸಚಿವ ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಆಗಿ ಆಯ್ಕೆ ಆಗಿದ್ದಾg., ಸಿದ್ದರಾಮಯ್ಯ ಅವರೇ ಕ್ಲಿಯರ್ ಆಗಿ ಹೇಳಿದ್ದಾರೆ, ಅಲ್ಲಿಗೆ ಬದಲಾವಣೆ ಚರ್ಚೆ ಎಂಡ್ ಅಂತಾ ಟಾಂಗ್ ಕೊಟ್ಟರು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಇಂದಲ್ಲ, ನಾಳೆ ಸಿಎಂ ಆಗೇ ಆಗ್ತಾರೆ: ಶಾಸಕ ರಂಗನಾಥ್
ಇನ್ನು ಖರ್ಗೆ ಭೇಟಿ ಬಳಿಕ ಸಚಿವರು ಮಾತನಾಡಲು ಹಿಂದೇಟು ಹಾಕಿದರು. ಸೌಜನ್ಯ ಭೇಟಿ ಅಷ್ಟೇ ಏನಿಲ್ಲ ಎಂದು ಸಚಿವರು ಜಾರಿಕೊಂಡರು. ಇದನ್ನೂ ಓದಿ: ರಾಹುಲ್ ಪತ್ರ – ಸರ್ಕಾರಿ ಪದವಿ ಕಾಲೇಜುಗಳಲ್ಲಿ 35 ವರ್ಷದ ಬಳಿಕ ವಿದ್ಯಾರ್ಥಿ ಚುನಾವಣೆಗೆ ಅನುಮತಿ?