ಮೈಸೂರು: ಹರ್ ಘರ್ ತಿರಂಗಾದ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಡುತ್ತಾ ಯಡವಟ್ಟು ಮಾಡಿದ್ದಾರೆ. ಬಾವುಟದ ಬಣ್ಣ ಕೇಸರಿ, ಬಿಳಿ, ಹಸಿರು ಎನ್ನುವ ಬದಲಿಗೆ ಕೆಂಪು, ಬಿಳಿ, ಹಸಿರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವು ಕಾಂಗ್ರೆಸ್‌ನಿಂದಲೇ ಆಗಿದೆ. ಇಡೀ ದೇಶವೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಗಾಂಧೀಜಿ, ತಿಲಕರು ಸೇರಿದಂತೆ ಇನ್ನಿತರ ನಾಯಕರು ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಬಂದಿದೆ. ತ್ಯಾಗ, ಶಾಂತಿ, ಸಮೃದ್ಧಿ ಈ ಬಾವುಟದ ಸಂಕೇತವಾಗಿದ್ದು, ಇದೇ ಧ್ವಜವನ್ನು ಸಾವರ್ಕರ್ ವಿರೋಧ ಮಾಡಿದ್ದರು ಎಂದ ಅವರು, ರಾಷ್ಟ್ರ ಧ್ವಜ ಬಣ್ಣ ಕೆಂಪು, ಬಿಳಿ, ಹಸಿರು ಎಂದು ತಪ್ಪಾಗಿ ಹೇಳಿದರು.
Advertisement
Advertisement
ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಎಲ್ಲರೂ ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಆದರೆ ಬಿಜೆಪಿ, ಜೆಡಿಎಸ್‍ನವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. 1925ರಲ್ಲಿ ಆರ್‌ಎಸ್‍ಎಸ್ ಪ್ರಾರಂಭವಾಯಿತು. ಹೆಡ್ಗೇವಾರ್ ಇದರ ಅಧ್ಯಕ್ಷರಾಗಿದ್ದರು. 1951ರಲ್ಲಿ ಜನಸಂಘ ಆರಂಭವಾಗಿದ್ದು. ಸ್ವಾತಂತ್ರ್ಯ ಬಂದ 4 ವರ್ಷದ ನಂತರ ಜನಸಂಘವಾಗಿದೆ. 1980ರಲ್ಲಿ ಬಿಜೆಪಿ ಪಕ್ಷವಾಗಿದೆ. ಇವಾಗ ಹರ್ ಘರ್ ತಿರಂಗಾ ಅಂತಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವ ಆರ್‌ಎಸ್‍ಎಸ್‍ನ ಮುಖವಾಡ ಎಂದು ಟೀಕಿಸಿದರು.
Advertisement
Advertisement
ಬಿಜೆಪಿಯಂತಹ ಭ್ರಷ್ಟ, ಕೋಮುವಾದಿ ಪಕ್ಷ ಮತ್ತೊಂದಿಲ್ಲ. ಬಿಜೆಪಿ, ಜೆಡಿಎಸ್‍ನವರು ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿಲ್ಲ. ಯಾರಾದರೂ ಒಬ್ಬ ಬಿಜೆಪಿಯವನು ದೇಶಕ್ಕಾಗಿ ಸತ್ತಿದ್ದಾರಾ..? ದೇಶ ಭಕ್ತಿ ಆರಂಭವಾಗಿದ್ದೇ ಕಾಂಗ್ರೆಸ್ ಪಕ್ಷದಿಂದ. ಬಿಜೆಪಿಗೆ ಹೋಗುತ್ತೇನೆ ಅನ್ನುವವರು ಬಿ ಕೇರ್ ಫುಲ್ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 9 ವರ್ಷಗಳ ಹಿಂದೆ ಕಿಡ್ನ್ಯಾಪ್ ಆಗಿದ್ದ ಬಾಲಕಿ ಪೋಸ್ಟರ್ ಸಹಾಯದಿಂದ ಹೆತ್ತವರ ಮಡಿಲಿಗೆ
ಜೆಡಿಎಸ್, ಕುಮಾರಸ್ವಾಮಿ ವಿರುದ್ಧವೂ ಲೇವಡಿ ಮಾಡಿದ ಅವರು, ಜೆಡಿಎಸ್ ಯಾವತ್ತೂ ಹೋರಾಟ ಮಾಡಿಲ್ಲ. ಬೇರೆಯವರ ಬೆಂಕಿಯಲ್ಲಿ ಕೈಕಾಯಿಸಿಕೊಳ್ಳುವುದು ಜೆಡಿಎಸ್ ಆಗಿದೆ. ಅವರಿಗೆ ಅವಮಾನ ಮಾಡಲು ಮಾತನಾಡುತ್ತಿಲ್ಲ. ಅವರು ಯಾವಾಗಲೂ ಮಧ್ಯದಲ್ಲಿ ನುಗ್ಗಿ ಬಿಡೋಣ ಅಂದುಕೊಂಡಿರುತ್ತಾರೆ. ನಾವು ಸಿಎಂ ಮಾಡಿದ್ದನ್ನು ಅವರು ಉಳಿಸಿಕೊಂಡರಾ ಮಿಸ್ಟರ್ ಕುಮಾರಸ್ವಾಮಿ ಎಂದು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಹಳಿ ತಪ್ಪಿದ 8 ಬೋಗಿಗಳು- ರೈಲು ಸಂಚಾರಕ್ಕೆ ಅಡ್ಡಿ