ರಾಜ್ಯದ ತೋತಾಪುರಿ ಮಾವು ಬೆಲೆ ಕುಸಿತ – ಆಂಧ್ರ ಸಿಎಂಗೆ ಸಿದ್ದರಾಮಯ್ಯ ಪತ್ರ

Public TV
1 Min Read
Siddaramaiah and Chandrababu Naidu

– ಚಿತ್ತೂರು ಜಿಲ್ಲಾಡಳಿತ ಮಾವು ಸಾಗಾಣಿಕೆ ನಿರ್ಬಂಧ ವಾಪಸ್ ಪಡೆಯುವಂತೆ ಮನವಿ

ಬೆಂಗಳೂರು: ತೋತಾಪುರಿ ಮಾವು ಬೆಲೆ ಕುಸಿತವಾಗಿರುವ ಹಿನ್ನೆಲೆ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪತ್ರ ಬರೆದಿದ್ದಾರೆ.

CM Letter

ಚಿತ್ತೂರು ಜಿಲ್ಲಾಡಳಿತವು ರಾಜ್ಯದ ಮಾವು ಸಾಗಾಣಿಕೆಗೆ ನಿರ್ಬಂಧ ವಿಧಿಸಿತ್ತು. ಹೀಗಾಗಿ ರಾಜ್ಯದ ತೋತಾಪುರಿ ಮಾವಿನ (Thothapuri Mango) ಬೆಲೆ ಕುಸಿದಿತ್ತು. ಈ ಹಿನ್ನೆಲೆ ಆಂಧ್ರದ ಚಿತ್ತೂರು ಜಿಲ್ಲೆಯ ಮಾರುಕಟ್ಟೆಗೆ ರಾಜ್ಯದ ಮಾವು ಸಾಗಾಣಿಕೆಗೆ ನಿರ್ಬಂಧ ತೆರವಿಗೆ ಸಿಎಂ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ | ಭಾರೀ ಮಳೆ ಗಾಳಿಗೆ ಪ್ರವೇಶ ದ್ವಾರ ಕುಸಿದು ಮೂವರು ಬಲಿ

ಈ ಪತ್ರದಲ್ಲಿ, ಕೂಡಲೇ ಆಂಧ್ರ ಸಿಎಂ ಮಧ್ಯಪ್ರವೇಶ ಮಾಡಬೇಕು. ಚಿತ್ತೂರು (Chitthur) ಜಿಲ್ಲಾಡಳಿತ ನಿರ್ಬಂಧವನ್ನ ವಾಪಸ್ ಪಡೆಯಬೇಕು. ಪೂರ್ವ ಸಮಾಲೋಚನೆ ಇಲ್ಲದೆ ನಿರ್ಬಂಧ ಸರಿ ಇಲ್ಲ. ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ಜೂ.15 ರವರೆಗೆ ಭಾರೀ ಮಳೆ ಮುನ್ಸೂಚನೆ

CM Letter 2

ಇದು ಪ್ರತೀಕಾರದ ಕ್ರಮಗಳಿಗೆ ಕಾರಣವಾಗಬಹುದು ಎಂದು ನಾನು ಕಳವಳ ವ್ಯಕ್ತಪಡಿಸುತ್ತೇನೆ. ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತರ-ರಾಜ್ಯ ಸಾಗಣೆಯನ್ನು ಅಡ್ಡಿಪಡಿಸಬಹುದು. ಹಾಗಾಗಿ ನೀವು ಮಧ್ಯಪ್ರವೇಶಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಪತ್ರದ ಮೂಲಕ ವಿನಂತಿಸಿಕೊಂಡಿದ್ದಾರೆ.

Share This Article