ಬೆಂಗಳೂರು: ನನ್ನ ಕ್ಷೇತ್ರದಲ್ಲಿ ಜವಳಿ ಪಾರ್ಕ್ ಮಾಡಿ, ನನ್ನ ಕ್ಷೇತ್ರದ ಜನ ಗುಳೆ ಹೋಗುವುದನ್ನು ತಡೆಯಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ಶಾಸಕರೂ ಆಗಿರುವ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಲು ಸಹಕಾರ ಕೋರಿ 5 ದಿನಗಳ ಅವಧಿಯಲ್ಲಿ ಎರಡು ಪತ್ರ ಬರೆದಿದ್ದಾರೆ. ಮೊದಲ ಪಾತ್ರ ಜೂನ್ 20 ರಂದು ಬರೆದಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪರ್ವತಿಕೆರೆ, ಗಂಜಿಕೆರೆ, ಹಿರೆಕೆರೆಗಳಿಗೆ ಮಲಪ್ರಭ ನದಿ (ಅಸಂಗಿ) ಬ್ಯಾರೇಜ್ ನಿಂದ ನೀರು ತುಂಬಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಪತ್ರದೊಂದಿಗೆ ಮೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ 12 ಕೋಟಿ ರೂ. ಅಂದಾಜು ಪಟ್ಟಿಯನ್ನು ಲಗತ್ತಿಸಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
Advertisement
ಮತ್ತೊಂದು ಪತ್ರ ಜೂನ್ 25 ರಂದು ಬರೆಯಲಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುವ ನೇಕಾರರ ವಲಸೆಯನ್ನು ತಪ್ಪಿಸಲು ಜವಳಿ ಪಾರ್ಕ್, ಪವರ್ ಲೂಮ್ ಪಾರ್ಕ್, ಗಾರ್ಮೆಂಟ್ ಕಂಪೆನಿ ನಿರ್ಮಾಣ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ.