ಹುಬ್ಬಳ್ಳಿ: ಲೋಕಸಭಾ ಚುನಾವಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಧಿಕಾರದಿಂದ ಇಳಿಯೋದು ಖಚಿತ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ನಲ್ಲಿ ಬಹುಮತ ಗೆದ್ದಿದ್ದೇವೆ. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿ (BJP) 28 ಸ್ಥಾನ ಗೆಲ್ಲುತ್ತೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯಬೇಕಾಗುತ್ತದೆ. ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿ (Congress Party) ಆಂತರಿಕ ಕಚ್ಚಾಟ ಹೆಚ್ಚಾಗಿದೆ. ಸಿದ್ದರಾಮಯ್ಯಗೆ ಬೇರೆ ಯಾರಿಂದಲೂ ಸಮಸ್ಯೆಯಿಲ್ಲ, ಅವರ ಪಕ್ಷದವರಿಂದಲೇ ಸಮಸ್ಯೆ ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಈಶ್ವರಪ್ಪ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ನಿಧಾನವಾಗಿ ಈಶ್ವರಪ್ಪ ಸಮಾಧಾನ ಆಗ್ತಾರೆ. ಚುನಾವಣೆಗೆ ಬಹಳ ಸಮಯ ಇರುವ ಕಾರಣಕ್ಕೆ ಕೆಲವೆಡೆ ಗೊಂದಲ ಇದೆ. ಲೋಕಸಭೆ ಚುನಾವಣೆ ಬೇರೆ, ವಿಧಾನಸಭೆ ಚುನಾವಣೆ ಬೇರೆ. ಲೋಕಸಭೆಯಲ್ಲಿ ಮೋದಿ ನೋಡಿ ಮತ ಹಾಕ್ತಾರೆ ಎಂದು ಜೋಶಿ ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದಿದ್ರೆ ಸಿಎಂ ರಾಜೀನಾಮೆ ಕೊಡ್ಬೇಕಾಗುತ್ತೆ: ಎಸ್.ಆರ್. ಶ್ರೀನಿವಾಸ್
Advertisement
ಬಿಜೆಪಿ ಪ್ರಮುಖರೊಂದಿಗೆ ಜೋಶಿ ಸಭೆ
ಸಚಿವ ಪ್ರಹ್ಲಾದ್ ಜೋಶಿ ಲೋಕಸಭಾ ಚುನಾವಣಾ ಪ್ರಚಾರಕಾರ್ಯ ಭರ್ಜರಿಯಾಗಿ ನಡೆಸುತ್ತಿದ್ದು, ಹುಬ್ಬಳ್ಳಿ ಅರವಿಂದ್ ನಗರದ ಬಿಜೆಪಿ ಕಚೇರಿಯಲ್ಲಿಂದು ಕುಂದಗೋಳ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಆರ್ ಪಾಟೀಲ್ ಮತ್ತು ಬಿಜೆಪಿ ಪ್ರಮುಖರ ಜೊತೆಗೆ ನಡೆಸಿದ್ದಾರೆ.
Advertisement
ಬಳಿಕ ಮಹಿಳಾ ಮೋರ್ಚಾ ಜೊತೆಗೆ ಸಂವಾದ ನಡೆಸಿದ ಜೋಶಿ, ವಿಕಸಿತ ಭಾರತದ ರಕ್ಷಣೆಗಾಗಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಬೂತ್ ಮಟ್ಟದ ಕಾರ್ಯಕರ್ತರು ಜನರಿಗೆ ನಮ್ಮ ಸರ್ಕಾರದ ಸಾಧನೆಗಳನ್ನು ಜಾಗೃತಿ ಮೂಡಿಸಿ, ಬಿಜೆಪಿ ಬೆಂಬಲಿಸಬೇಕೆಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಒನ್ ವೇನಲ್ಲಿ ಲಾರಿ ಚಾಲಕನ ಎಡವಟ್ಟು- ಮಹಿಳೆ ಸಾವು, ಎಎಸ್‍ಪಿ ಗನ್‍ಮ್ಯಾನ್ ಗಂಭೀರ