ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರ ಹಾಗೂ ವರುಣಾ ಎರಡೂ ಕ್ಷೇತ್ರದಿಂದ ಸ್ವರ್ಧಿಸಲು ನಿರ್ಧರಿಸಿದ್ದಾರೆ ಎಂದು ಶಾಸಕರೂ ಆಗಿರುವ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಖಚಿತಪಡಿಸಿದ್ದಾರೆ.
Advertisement
ಮೈಸೂರಿನಲ್ಲಿ (Mysuru) `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಕೋಲಾರ (Kolar) ಬೇಡ ವರುಣಾದಲ್ಲಿ (Varuna) ಸ್ಪರ್ಧಿಸಿ ಅಂತಾ ಹೇಳಿತ್ತು. ಈ ಸಮಯದಲ್ಲಿ ಕೋಲಾರ ಕ್ಷೇತ್ರದಿಂದ ಹಿಂದೆ ಸರಿದರೆ ಕಾಂಗ್ರೆಸ್‌ಗೆ (Congress) ಹಿನ್ನಡೆಯಾಗುತ್ತೆ ಅಂತಾ ಅಲ್ಲಿನ ನಾಯಕರು ಹೇಳಿದ್ದಾರೆ. ಇವತ್ತಿನ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ಕೋಲಾರ ಬಿಡುವಂತಿಲ್ಲ. ಹೈಕಮಾಂಡ್ ಸೂಚನೆಯಂತೆ ವರುಣಾ ಕ್ಷೇತ್ರ (Varuna Constituency) ಬಿಡಲೂ ಆಗಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಕೋಲಾರ – ವರುಣಾ ಎರಡೂ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾನು ಕ್ಷೇತ್ರ ಹುಡುಕಾಡ್ತಿಲ್ಲ, ನನ್ನನ್ನ ಕ್ಷೇತ್ರಕ್ಕೆ ಕರೆಯುವವರ ಸಂಖ್ಯೆ ಹೆಚ್ಚಾಗಿದೆ – ಸಿದ್ದರಾಮಯ್ಯ
Advertisement
Advertisement
ವರುಣಾ ಒಂದರಲ್ಲಿ ನಿಂತುಕೊಳ್ಳಿ ಅಂತಾ ನಾನು ಮೊದಲು ಸಲಹೆ ಕೊಟ್ಟಿದ್ದೆ. ಸಿದ್ದರಾಮಯ್ಯ ಅವರು ಯಾವುದೇ ಕ್ಷೇತ್ರದಲ್ಲಿ ನಿಂತರೂ ಅವರ ವೈರಿಗಳು ಒಂದಾಗಿ ಸೋಲಿಸಲು ಯತ್ನಿಸುತ್ತಾರೆ. ಸಿದ್ದರಾಮಯ್ಯ ವಿರುದ್ಧ ಅವರ ಶತ್ರುಗಳು ಹಣದ ಹೊಳೆ ಹರಿಸುತ್ತಾರೆ. ಎಲ್ಲಿ ನಿಂತರೂ ಶತ್ರುಗಳು ಒಂದಾಗುತ್ತಾರೆ. ಇದಕ್ಕೆಲ್ಲ ಹೆದರೋಕೆ ಆಗಲ್ಲ. ಸಿದ್ದರಾಮಯ್ಯ ಮಾಸ್ ಲೀಡರ್. ಆಕಸ್ಮಾತ್ ಅಧಿಕಾರಕ್ಕೆ ಬಂದರೆ ಸಾಮಾಜಿಕ ನ್ಯಾಯದ ಪರ ಕೆಲಸ ಮಾಡುತ್ತಾರೆ. ಇದನ್ನು ಸಹಿಸಲು ಬಲಪಂಥೀಯರಿಗೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸದರಾಗಲು ಹೊರಟಿದ್ದ ಸಿದ್ದರಾಮಯ್ಯ ಸಿಎಂ ಆಗಿದ್ದು ಹೇಗೆ?