– 5 ವರ್ಷ ಅವರೇ ಸಿಎಂ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ
ಬೆಂಗಳೂರು: ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ (Siddaramaiah) ಅವರೇ 5 ವರ್ಷಗಳ ಕಾಲ ಮುಂದುವರಿಯಲಿದ್ದಾರೆ. ಅವರ ವಿರುದ್ಧ ಕೋರ್ಟ್‍ನಲ್ಲಿ ಆದೇಶ ಬಂದಾಗಿನಿಂದ ರಾಜ್ಯದಲ್ಲಿ ಸಾಕಷ್ಟು ಅನಾವಶ್ಯಕ ಚರ್ಚೆ ನಡೆಯುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ (R.V Deshpande) ಹೇಳಿದ್ದಾರೆ.
Advertisement
ತಮ್ಮ ನಿವಾಸದಲ್ಲಿ ಅವರು ತುರ್ತು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನನ್ನ ಮತ್ತು ಸಿದ್ದರಾಮಯ್ಯ ನಡುವೆ 40 ವರ್ಷಗಳ ಅನುಬಂಧವಿದೆ. ಸಿದ್ದರಾಮಯ್ಯ ಅವರಾಗಲಿ, ಅವರ ಪತ್ನಿಯಾಗಲಿ ಮುಡಾ ಸೈಟ್ ಕೇಳಿಲ್ಲ. ಈಗ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಇಷ್ಟು ವರ್ಷಗಳಿಂದ ಇಲ್ಲದ ಆರೋಪಗಳು ಈಗ ಯಾಕೆ? ಸಿದ್ದರಾಮಯ್ಯ ಮತ್ತು ಅವರ ಪತ್ನಿ ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ಅವರು ಸಿಎಂ ಆಗಿರುವುದನ್ನು ಸಹಿಸೋದಕ್ಕೆ ಆಗದೇ ಇರುವವರು ಮಾಡಿದ ಕುತಂತ್ರ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ: ದೂರುದಾರ ಸ್ನೇಹಮಯಿ ಕೃಷ್ಣ
Advertisement
ಸಿಎಂ ಆಗಿ ಸಿದ್ದರಾಮಯ್ಯ ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈಗ ಮುಡಾ ಸೈಟ್ ವಿಚಾರವಾಗಿ, ವಿಪಕ್ಷಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಹಾಗೂ ಎಲ್ಲರ ಬೆಂಬಲವಿದೆ. ಅವರೇ 5 ವರ್ಷ ಸಿಎಂ ಆಗಿರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
ಸಿದ್ದರಾಮಯ್ಯ ಕಾನೂನಿನ ಹೋರಾಟ ಮಾಡುತ್ತಾರೆ. ಹೈಕೋರ್ಟ್‍ನಲ್ಲೇ ಮೇಲ್ಮನವಿ ಸಲ್ಲಿಸಬಹದು. ಏಫ್‍ಐಆರ್ ದಾಖಲಾದ ಮೇಲೆ ಏನು ಕಾನೂನಿನ ಕ್ರಮ ತೆಗೆದುಕೊಳ್ಳಬಹುದು ನೋಡಬೇಕಿದೆ ಎಂದಿದ್ದಾರೆ.
Advertisement
ಕಾಂಗ್ರೆಸ್‍ನಲ್ಲಿ (Congress) ಕೆಲವರು ಸಿಎಂ ಸ್ಥಾನದ ಅಕಾಂಕ್ಷೆ ಹೊಂದಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ, ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ನಾನು ಹಿರಿಯನಾಗಿರಬಹುದು, ನಾನು ಸಿಎಂ ಅಕಾಂಕ್ಷಿ ಅಲ್ಲ. ಡಿಕೆಶಿ ಕ್ರೀಯಾಶೀಲ ವ್ಯಕ್ತಿ, ಅವರು ಡಿಸಿಎಂ ಆಗಿ ಉತ್ತಮ ಕೆಲಸ ಮಾಡ್ತಿದ್ದಾರೆ. ಚುನಾವಣಾ ಭಾಷಣದ ವೇಳೆ ಪ್ರಧಾನಿ ಮೋದಿಯವರು (Narendra Modi) ಸಿದ್ದರಾಮಯ್ಯ ಅವರನ್ನ ಪ್ರಸ್ತಾಪಿಸಿದ್ದಾರೆ. ಮೋದಿಯವರಿಗೆ ಸಿದ್ದರಾಮಯ್ಯ ಬೆಳೆಯೋದನ್ನ ಸಹಿಸೋದಕ್ಕೆ ಆಗ್ತಿಲ್ಲ. ಸಿದ್ದರಾಮಯ್ಯ ಪವರಫುಲ್ ಲೀಡರ್, ಅದು ಅವರಿಗೂ ಗೊತ್ತಿದೆ. ಬೆಳವಣಿಕೆ ಸಹಿಸೋದಕ್ಕೆ ಆಗದೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ, ನೈತಿಕತೆ ಆಧಾರದ ಮೇಲೆ ಸಿಎಂ ರಾಜೀನಾಮೆ ನೀಡಬೇಕು ಎನ್ನುತ್ತಾರೆ. ಯಾವ ನೈತಿಕತೆಯಲ್ಲಿ ಕುಮಾರಸ್ವಾಮಿ ಹೀಗೆ ಹೇಳ್ತಾರೆ? ಬಿಜೆಪಿಗೆ ಮತ್ತು ಜೆಡಿಎಸ್‍ಗೆ ಸಿದ್ದರಾಮಯ್ಯ ಸಿಎಂ ಆಗಿರುವುದನ್ನು ಸಹಿಸಲು ಆಗ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ ಸಂಕಷ್ಟ; ಹೈಕಮಾಂಡ್‌ಗೆ ವರದಿ ನೀಡಿದ ಸಿಎಂ ಸಿದ್ದರಾಮಯ್ಯ