ಐದು ವರ್ಷವೂ ಸಿದ್ದರಾಮಯ್ಯ ಸಿಎಂ: ಜಮೀರ್

Public TV
1 Min Read
Zameer Ahmed Khan 3 1

ಕೊಪ್ಪಳ: ಐದು ವರ್ಷವೂ ಸಿದ್ದರಾಮಯ್ಯ (Siddaramaiah) ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಹೇಳಿದರು.

ಕೊಪ್ಪಳದಲ್ಲಿ (Koppal) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ಸಿಎಂ ಖುರ್ಚಿ ಖಾಲಿ ಇಲ್ಲ. ಈ ಬಗ್ಗೆ ಚರ್ಚೆಯೂ ಅಗತ್ಯ ಇಲ್ಲ. ಅದರಂತೆ ಕೆಪಿಸಿಸಿ ಅಧ್ಯಕ್ಷರ ಖುರ್ಚಿಯೂ ಖಾಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಗ್ಗೆ ಸತೀಶ್ ಜಾರಕಿಹೊಳಿ ಮಾತನಾಡಿರಬಹುದು. ಅದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ ಕೆಪಿಸಿಸಿ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ ಎಂದರು. ಇದನ್ನೂ ಓದಿ: ಕಳೆದ 1 ತಿಂಗಳಿಂದ ಸಿಕ್ತಿಲ್ಲ ಹೊಸ ಡಿಎಲ್‌, ಆರ್‌ಸಿ‌ ಸ್ಮಾರ್ಟ್ ಕಾರ್ಡ್; 15 ದಿನದಲ್ಲಿ ಸಮಸ್ಯೆ ಬಗೆಹರಿಯುತ್ತೆ: ರಾಮಲಿಂಗಾರೆಡ್ಡಿ

ಮುಡಾ ಹಗರಣದಲ್ಲಿ (MUDA Scam) ಸಿದ್ದರಾಮಯ್ಯ ಪಾತ್ರ ಸ್ವಲ್ಪವೂ ಇಲ್ಲ. ಸಿದ್ದರಾಮಯ್ಯ ಅವರನ್ನು ಅಲುಗಾಡಿಸಿದರೆ ಕಾಂಗ್ರೆಸ್‌ಗೆ ತೊಂದರೆ ಆಗುತ್ತದೆ ಎಂದು ಬಿಜೆಪಿಗರು ಕಿರಿಕಿರಿ ಮಾಡುತ್ತಿದ್ದಾರೆ. ಇದೆಲ್ಲ ನಡೆಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: Kolar| ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಟ್ಯಾಂಕರ್ ಪಲ್ಟಿ

ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ನಡುವಿನ ಜಗಳ ಬಿಜೆಪಿ ಆಂತರಿಕ ವಿಚಾರ. ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಯಾರೂ ಆಹ್ವಾನಿಸಿಲ್ಲ. ಅಷ್ಟಕ್ಕೂ ಅವರು ಬರುವುದೂ ಇಲ್ಲ. ಇದೆಲ್ಲ ಅವರಿಬ್ಬರ ನಾಟಕ. ಬಿಜೆಪಿಯಲ್ಲಿ ಬೇಳೆ ಬೇಯಿಸಿಕೊಳ್ಳಲು, ಕಾಂಗ್ರೆಸ್‌ನಿಂದ ಆಹ್ವಾನ ಇದೆ ಎಂದು ಶ್ರೀರಾಮುಲು ಹೇಳಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಇನ್‌ಸ್ಟಾಗ್ರಾಂ ಪ್ರೇಯಸಿ ಆತ್ಮಹತ್ಯೆ ಕೇಸ್ – ಪ್ರಿಯಕರ ಅರೆಸ್ಟ್

Share This Article