ಸಿದ್ದರಾಮಯ್ಯಗಿಂತ ಪತ್ನಿಯೇ ಹೆಚ್ಚು ಶ್ರೀಮಂತೆ – ಆಸ್ತಿ ಎಷ್ಟಿದೆ ಗೊತ್ತಾ?

Public TV
2 Min Read
siddaramaiah 1 1

ಮೈಸೂರು: ವರುಣಾ (Varuna) ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗಿಂತ ಅವರ ಪತ್ನಿ ಪಾರ್ವತಿ ಅವರೇ ಹೆಚ್ಚು ಶ್ರೀಮಂತೆಯಾಗಿದ್ದಾರೆ. ಸಿದ್ದರಾಮಯ್ಯ ಅವರ ಬಳಿ 19 ಕೋಟಿ ರೂ. ಆಸ್ತಿ ಇದ್ದರೆ, ಅವರ ಪತ್ನಿ 32.12 ಕೋಟಿ ರೂ. ಒಡತಿಯಾಗಿದ್ದಾರೆ.

ಸಿದ್ದರಾಮಯ್ಯ ಅವರು 9,58 ಕೋಟಿ ಚರಾಸ್ತಿ, 9.43 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ 11.26 ಕೋಟಿ ರೂ. ಚರಾಸ್ತಿ, 19.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದು, 1.29 ಕೋಟಿ ರೂ. ಪಿತ್ರಾರ್ಜಿತವಾಗಿ ಬಂದಿದೆ. 16.24 ಕೋಟಿ ರೂ. ಸಾಲ ಇದೆ. ಇದನ್ನೂ ಓದಿ: ಕಾಂಗ್ರೆಸ್ 5ನೇ ಪಟ್ಟಿ ರಿಲೀಸ್ – ಸಿಎಂ ಕ್ಷೇತ್ರದಲ್ಲಿ ʻಕೈʼ ಅಭ್ಯರ್ಥಿ ಚೇಂಜ್‌

ಸಿದ್ದರಾಮಯ್ಯ ಅವರು ಕೂಡ 6.84 ಕೋಟಿ ರೂ. ಸಾಲ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು 2018ರ ಚುನಾವಣೆ ಕಾಲಕ್ಕೆ 18.55 ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು.

ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದಿ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಬುಧವಾರ ನಾಮಪತ್ರ ಸಲ್ಲಿಸಿದರು. ಬೃಹತ್‌ ರ‍್ಯಾಲಿಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಮಾಜಿ ಸಚಿವ ಹೆಚ್‌.ಸಿ.ಮಹದೇವಪ್ಪ ಸೇರಿದಂತೆ ಕಾಂಗ್ರೆಸ್‌ನ ಅನೇಕ ಮುಖಂಡರು ಸಿದ್ದುಗೆ ಸಾಥ್‌ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ – ನಟಿ ರಮ್ಯಾ, ಶೆಟ್ಟರ್‌, ಸಾಧು ಕೋಕಿಲಗೆ ಸ್ಥಾನ

Share This Article