ಕಟ್ಟಡ ದುರಂತ ಸ್ಥಳಕ್ಕೆ ಭೇಟಿ ಕೊಟ್ಟ ಸಿಎಂ- ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

Public TV
1 Min Read
bengaluru building collapse siddaramaiah visit

ಬೆಂಗಳೂರು: ಬಾಬುಸಾಬ್‌ಪಾಳ್ಯ (Babusabpalya) ಕಟ್ಟಡ ದುರಂತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಕಟ್ಟಡ ಕುಸಿದ ಘಟನಾ ಸ್ಥಳಕ್ಕೆ ಸಿಎಂ ಭೇಡಿ ನೀಡಿದ್ದು, ಸಚಿವ ಬೈರತಿ ಸುರೇಶ್ ಕೂಡ ಸಾಥ್ ನೀಡಿದ್ದಾರೆ. ಅನುಮತಿ ಪಡೆಯದೆ ಕಟ್ಟುತ್ತಿರುವ ಕಟ್ಟಡವನ್ನ ಕೂಡಲೇ ನಿಲ್ಲಿಸಲು ಸಿಎಂ ಸೂಚನೆ ನೀಡಿದ್ದಾರೆ. ಮೃತರ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ತಲಾ 2 ಲಕ್ಷ ರೂ. ಹಾಗೂ ಪಾಲಿಕೆಯಿಂದ ಮೂರು ತಲಾ ಲಕ್ಷ ರೂ. ಪರಿಹಾರ ಕೂಡಲೇ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ| ಕಾರ್ಮಿಕನ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಿನ್ನೆ ಇರಲಿಲ್ಲ, ವಯನಾಡಿಗೆ ಹೋಗಿದ್ದೆ. ಗಾಯಗೊಂಡಿರುವವರಿಗೆ ಸರ್ಕಾರ ಆಸ್ಪತ್ರೆಯ ಖರ್ಚು ಭರಿಸುತ್ತದೆ. ಮೃತರ ಶವಗಳನ್ನು ಕಳಿಸಿಕೊಡುವ ಕೆಲಸ ಕೂಡ ಮಾಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಪಕ್ಷದ ಉಳಿವಿಗಾಗಿ ನಿಖಿಲ್ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕು: ಸಾ.ರಾ ಮಹೇಶ್

ಅನುಮತಿ ಪಡೆಯದೆ ಕಟ್ಟಿರುವ ಕಟ್ಟಡ ಇದು. ನೋಟಿಸ್ ನೀಡಿದರೂ ಕಟ್ಟಡ ಕಟ್ಟಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಜೋನಲ್ ಐಎಎಸ್ ಅಧಿಕಾರಿ ಹಾಗೂ ಎಕ್ಸ್ಯೂಟಿವ್ ಎಂಜಿನಿಯರ್‌ಗೆ ನೋಟಿಸ್ ಕೊಡಲು ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ಮುಡಾದಲ್ಲಿ ಜಿಲ್ಲಾಧಿಕಾರಿ ಪಾತ್ರವಿಲ್ಲ, ಲೋಕಾಯುಕ್ತರಿಗೆ ಸ್ಪಷ್ಟನೆ ನೀಡಿದ್ದೇನೆ: ಜಿ.ಕುಮಾರ ನಾಯಕ್

ಕಟ್ಟಡ ನಿರ್ಮಿಸುವವರು ಅನುಮತಿ ಪಡೆದು ಕಟ್ಟಬೇಕು. ಅನುಮತಿ ಪಡೆಯದೇ ಕಟ್ಟಡ ಕಟ್ಟಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳೇ ಜವಾಬ್ದಾರಿ ಹೊರಬೇಕಾಗುತ್ತದೆ. ನೋಟಿಸ್ ಕೊಟ್ಟರೂ ಕಟ್ಟಡ ಕಟ್ಟಿದ್ದಕ್ಕೆ ಈ ಘಟನೆ ಸಂಭವಿಸಿದೆ. ಇದು ಮಳೆಯಿಂದ ಬಿದ್ದಿರುವ ಕಟ್ಟಡ ಅಲ್ಲ. ಕಳಪೆ ಕಾಮಗಾರಿಯಿಂದ ಬಿದ್ದಿರುವ ಕಟ್ಟಡ ಎಂದು ಹರಿಹಾಯ್ದರು. ಇದನ್ನೂ ಓದಿ: ಎಂಇಎಸ್ ಭಯೋತ್ಪಾದನಾ ಸಂಘಟನೆ: ಬೆಳಗಾವಿಯಲ್ಲಿ ಕರವೇ ಆಕ್ರೋಶ

Share This Article