ಬೆಂಗಳೂರು: ಸಿದ್ದರಾಮಯ್ಯನವರೇ (Siddaramaiah) ನಿಮ್ಮನೆಗೆ ಜಾತಿಗಣತಿ (Caste Census) ಸಮೀಕ್ಷೆ ಮಾಡಲು ಯಾರು ಬಂದಿದ್ರು? ಬೆಂಗಳೂರಿನ (Bengaluru) ಎಸಿ ಕಚೇರಿಯಲ್ಲಿ ಕುಳಿತು ಕೇವಲ ನಮ್ಮನ್ನು ಒಡಕು ಮೂಡಿಸುವ ಷಡ್ಯಂತ್ರ‍್ಯ ಸಿದ್ದರಾಮಯ್ಯ ಅವರದ್ದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಾತಿಗಣತಿಯನ್ನ ನಾವು ಒಪ್ಪೋದಿಲ್ಲ, ಪ್ರಬಲವಾಗಿ ವಿರೋಧ ಮಾಡುತ್ತೇವೆ ಎಂದರು. ಇದನ್ನೂ ಓದಿ: CJI ಹುದ್ದೆಗೆ ನ್ಯಾ. ಬಿ.ಆರ್ ಗವಾಯಿ ಹೆಸರು ಶಿಫಾರಸು
ಜಾತಿ ಜನಗಣತಿ ನಮ್ಮೆಲ್ಲರನ್ನು ಒಡೆದು ಆಳುವ ನೀತಿ. ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವಂತಹ ಷಡ್ಯಂತ್ರ‍್ಯವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಜಾತಿ ಜನಗಣತಿ ಮಾಡೋಕೆ ರಾಜ್ಯ ಸರ್ಕಾರಕ್ಕೆ ಅಧಿಕಾರನೇ ಇಲ್ಲ. ಅದನ್ನು ಕೇಂದ್ರ ಸರ್ಕಾರ ಮಾಡಬೇಕು. ಇದರ ಹೊರತಾಗಿಯೂ ಜಾತಿ ಸಮೀಕ್ಷೆ ಮಾಡಿ ಕೆಲ ಜಾತಿಗಳನ್ನು ಕಡಿಮೆ ತೋರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಆನೇಕಲ್‌ನಲ್ಲಿ ಅದ್ಧೂರಿಯಾಗಿ ನಡೆದ ಒಣ ಕರಗ ಮಹೋತ್ಸವ
ಲಿಂಗಾಯತರು, ಒಕ್ಕಲಿಗರು ಸೇರಿ ಬೇರೆಬೇರೆ ಜಾತಿಯವರು ವಿರೋಧ ಮಾಡುತ್ತಿದ್ದಾರೆ. ನಾವು ಅತ್ಯಂತ ಉಗ್ರವಾಗಿ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ. ಸಿದ್ದರಾಮಯ್ಯ ಅವರು ತಕ್ಷಣವೇ ಈ ಜಾತಿ ವರದಿಯನ್ನು ಬರ್ಕಾಸ್ತ್ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಯುಎಸ್-ಚೀನಾ ಟಾರಿಫ್ ವಾರ್ ಮತ್ತಷ್ಟು ಜೋರು – ಚೀನಾ ಉತ್ಪನ್ನಗಳಿಗೆ 245% ಸುಂಕ ವಿಧಿಸಿದ ಅಮೆರಿಕ