ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಬಲಗೈ ಬಂಟನ ಮೂಲಕ ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಪಕ್ಷ ನಾಯಕ ಹಾಗೂ ಸಿಎಲ್ ಪಿ ನಾಯಕ ಎರಡು ಸ್ಥಾನಗಳಿಗೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಈಗ ಅದೇ ಎರಡು ಸ್ಥಾನಗಳಲ್ಲಿ ಮುಂದುವರಿಯಬೇಕು ಎಂದು ಬಯಸಿದ್ದಾರೆ. ಆದರೆ ಸಿದ್ದರಾಮಯ್ಯರನ್ನ ಎರಡು ಸ್ಥಾನದಲ್ಲಿ ಮುಂದುವರಿಸಲು ಮೂಲ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇನ್ನೆರಡು ದಿನದಲ್ಲಿ ಹೈ ಕಮಾಂಡ್ ಎಲ್ಲಾ ಸ್ಥಾನಮಾನಗಳಿಗೆ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ.
ಎಐಸಿಸಿ ಅಧ್ಯಕ್ಷೆ ಸೋನಿಯ ಗಾಂಧಿ ಆಪ್ತರಾದ ಸಿದ್ದರಾಮಯ್ಯ ಬಲಗೈ ಬಂಟ ಕೆ.ಜೆ.ಜಾರ್ಜ್ ರನ್ನ ದೆಹಲಿಗೆ ಕಳುಹಿಸಿದ ಹೊಸ ದಾಳ ಉರುಳಿಸಿದ್ದಾರೆ. ನನಗೆ ಕೊಟ್ಟರೆ ವಿಪಕ್ಷ ನಾಯಕನ ಸ್ಥಾನ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಕೊಡಬೇಕು. ಯಾವುದೇ ಒಂದು ಸ್ಥಾನ ಕೊಡುವುದಾದರೆ ನನಗೆ ಎರಡು ಸ್ಥಾನವು ಬೇಡ ಎಂದು ಕೆ.ಜೆ.ಜಾರ್ಜ್ ಮೂಲಕ ಸೋನಿಯಗಾಂಧಿ ಅವರಿಗೆ ಹೇಳಿಸಿದ್ದಾರೆ.
ಆ ಮೂಲಕ ಕೊಟ್ಟರೆ ಎರಡು ಸ್ಥಾನಮಾನ ಕೊಡಿ ಇಲ್ಲ ಎಂದರೆ ಬೇಡವೇ ಬೇಡ ಎಂದು ನೇರವಾಗಿ ಹೈ ಕಮಾಂಡ್‍ಗೆ ಸಂದೇಶ ರವಾನಿಸಿದ್ದಾರೆ. ಸಿದ್ದರಾಮಯ್ಯ ವರಸೆಗೆ ಹೈಕಮಾಂಡ್ ಮಣೆ ಹಾಕುತ್ತ ಇಲ್ಲಾ ಡೋಂಟ್ ಕೇರ್ ಅನ್ನುತ್ತ ಅನ್ನೋದೆ ಈಗಿನ ಕುತೂಹಲ.