ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಸನಿಹದಲ್ಲಿ ರಾಜ್ಯ ರಾಜಕೀಯದಲ್ಲಿ ಹಲವು ಬೆಳವಣಿಗೆ ನಡೆಯುತ್ತಿವೆ. ಅದರಲ್ಲಿಯೂ ಸಿಎಂ ಹುದ್ದೆ ಮತ್ತು ಅಧಿಕಾರ ಹಂಚಿಕೆ ವಿಚಾರವಾಗಿ ಕೈಪಡೆಯ ಬಣ ಸಂಘರ್ಷ ಪ್ರಮುಖವಾದುದು. ಕಳೆದೊಂದು ವಾರದಿಂದ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಬಣದ ಮುಖಂಡರು ನೀಡುತ್ತಿರುವ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿವೆ. ಪರಿಸ್ಥಿತಿಯ ಗಂಭೀರತೆ ಅರಿತ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಎಂಟ್ರಿ ಕೊಟ್ಟಿದೆ.
ಸಿಎಂ-ಡಿಸಿಎಂ ಸೇರಿ ರಾಜ್ಯದ ಪ್ರಮುಖರನ್ನು ಕೂರಿಸಿಕೊಂಡು ಹೈಕಮಾಂಡ್ ನಾಯಕರಾದ ಕೆಸಿ ವೇಣುಗೋಪಾಲ್ (KC Venugopal) ಮತ್ತು ರಣದೀಪ್ ಸುರ್ಜೆವಾಲ (Randeep Surjewala) ಸಭೆ ನಡೆಸಿದ್ದಾರೆ. ಕಚ್ಚಾಟ ಬಿಡುವಂತೆ ಸಲಹೆ ನೀಡಿದ್ದಾರೆ. ಬಣ ಸಂಘರ್ಷಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.
Advertisement
ಇನ್ಮುಂದೆ ಸಿಎಂ ಬದಲಾವಣೆ ಸೇರಿ ಪಕ್ಷಕ್ಕೆ ಹಾನಿಯಾಗುವಂತಹ ವಿಚಾರಗಳನ್ನು ಯಾರು ಪ್ರಸ್ತಾಪ ಮಾಡಬಾರದು. ಪಕ್ಷದ ಚೌಕಟ್ಟು ಮೀರಿ ಹೇಳಿಕೆ ಕೊಡಬಾರದು. ಇಲ್ಲದಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಲೋಕಸಭೆ ಚುನಾವಣೆ, ಬೆಳಗಾವಿ ಪಾಲಿಟಿಕ್ಸ್, ಪಕ್ಷ ಸಂಘಟನೆ, ನಿಗಮಮಂಡಳಿ ನೇಮಕ ಸೇರಿ ಇನ್ನಿತರೆ ವಿಚಾರಗಳ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ಸಭೆಯ ವಿವರಗಳನ್ನು ಸಿಎಂ-ಡಿಸಿಎಂ ಬಿಟ್ಟುಕೊಡಲಿಲ್ಲ.
Advertisement
ಕೆಪಿಸಿಸಿ ಕಚೇರಿಯಲ್ಲಿ (KPCC Office) ನಡೆದ ಹೈವೋಲ್ಟೇಜ್ ಸಭೆಯಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಘಟಿಸಿವೆ. ಮೂಲಗಳ ಪ್ರಕಾರ, ನಿಗಮ ಮಂಡಳಿಗಳಿಗೆ ನೇಮಕ ವಿಚಾರದಲ್ಲಿ ಸಿಎಂ-ಡಿಸಿಎಂ ನಡುವೆ ಟಾಕ್ ವಾರ್ ನಡೆದಿದೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
Advertisement
ಕಾಂಗ್ರೆಸ್ ಸಭೆಯಲ್ಲಿ ಏನಾಯ್ತು?
ನಿಗಮ ಮಂಡಳಿಗಳಲ್ಲಿ 30-35 ಶಾಸಕರಿಗೆ ಅವಕಾಶ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಡಿಕೆಶಿ, ಈ ಪ್ರಸ್ತಾಪವನ್ನು ಒಪ್ಪಲು ಸಾಧ್ಯವಿಲ್ಲ. 25 ಶಾಸಕರಿಗೆ ಮಾತ್ರ ಕೊಡಿ. ಉಳಿದದ್ದು ಕಾರ್ಯಕರ್ತರಿಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಈ ಬೇಡಿಕೆ ಒಪ್ಪದ ಸಿಎಂ, ಗ್ಯಾರಂಟಿಗಳಿಂದ ಶಾಸಕರಿಗೆ ಹೆಚ್ಚಿನ ಅನುದಾನ ಕೊಡಲು ಸಾಧ್ಯವಾಗಿಲ್ಲ. ಹೀಗಾಗಿ ನಿಗಮ ಮಂಡಳಿಯಲ್ಲಿ ಶಾಸಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸಿದ್ದರಾಮಯ್ಯ ಮಾತನ್ನು ಒಪ್ಪದ ಡಿಸಿಎಂ, ಕಾರ್ಯಕರ್ತರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ಲೋಕಸಭೆ ಚುನಾವಣೆ ಗೆಲ್ಲಬೇಕಾದರೆ ಕಾರ್ಯಕರ್ತರಿಗೆ ಮಣೆ ಹಾಕಬೇಕು ಎಂದು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಸಿಎಂ, ಲೋಕಸಭೆ ಹೆಚ್ಚಿನ ಸೀಟ್ ಗೆಲ್ಲಬೇಕಾದರೆ ಹೆಚ್ಚು ನಿಗಮ ಶಾಸಕರಿಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಾಂತಾರ ಸಿನಿಮಾದ ‘ವರಾಹ ರೂಪಂ’ ಕಾಪಿರೈಟ್ಸ್ ಪ್ರಕರಣ ರದ್ದು
ಈ ವೇಳೆ, ಕಾರ್ಯಕರ್ತರು ಮುಖ್ಯ. ಶಾಸಕರನ್ನು ಪಕ್ಷ ಗೆಲ್ಲಿಸಿದೆ. ಕಾರ್ಯಕರ್ತರಿಗೆ ಏನು ಸಿಕ್ಕಿದೆ ಎಂದು ಡಿಕೆಶಿ ಪ್ರಶ್ನಿಸಿದ್ದಕ್ಕೆ ಸಿಎಂ, ಶಾಸಕರನ್ನು ಸಂಭಾಳಿಸಿ ಸರ್ಕಾರ ನಡೆಸುವುದು ಎಷ್ಟು ಕಷ್ಟ ಗೊತ್ತಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಡಿಕೆಶಿ, ಕಾರ್ಯಕರ್ತರನ್ನು ಕಡೆಗಣಿಸಿದರೆ ಪಕ್ಷ ನಡೆಸುವುದುಎಷ್ಟು ಕಷ್ಟ ಗೊತ್ತಾ ಎಂದು ಮತ್ತೊಂದು ಪ್ರಶ್ನೆ ಕೇಳಿದ್ದಾರೆ.
ಇಬ್ಬರ ಟಾಕ್ ಫೈಟ್ ಗಮನಿಸಿದ ವೇಣುಗೋಪಾಲ್, ಈಗ ನೀವು ಸುಮ್ಮನಿರಿ. ಪಂಚರಾಜ್ಯ ಚುನಾವಣೆಯ ನಂತರ ಘೋಷಣೆ ಮಾಡೋಣ. ಅಷ್ಟರಲ್ಲಿ ಒಮ್ಮತಾಭಿಪ್ರಾಯಕ್ಕೆ ಬನ್ನಿ. ಇಲ್ಲ ಅಂದ್ರೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. 2013ರಲ್ಲಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದವರಿಗೆ ಈ ಬಾರಿ ಅವಕಾಶ ಬೇಡ. ನಿಗಮಕ್ಕೆ ಹಠ ಹಿಡಿದರೆ ಸಂಪುಟ ಪುನಾರಚನೆಯಲ್ಲಿ ಅವಕಾಶವಿಲ್ಲ ಎಂದು ತಿಳಿಸಿ. ಒಂದಷ್ಟು ಕಂಡೀಶನ್ ಹಾಕಿ. ಕಾಂಪಿಟೇಷನ್ ಕಡಿಮೆ ಆಗುವಂತೆ ಮಾಡಿ ಎಂದು ಇಬ್ಬರಿಗೆ ಸಲಹೆ ನೀಡಿದ್ದಾರೆ.
Web Stories