ಪೊಲೀಸ್ ಸೂಚನೆ ನಡುವೆಯೂ ಮೌಲ್ವಿ ಮನೆಗೆ ಸಿಎಂ ಭೇಟಿ – ಯತ್ನಾಳ್ ತೀವ್ರ ಖಂಡನೆ

Public TV
2 Min Read
Siddaramaiah 7

– ಆ ಭಯೋತ್ಪಾಕನೊಂದಿಗೆ ನನಗೆ ಸಂಬಂಧವಿಲ್ಲ ಎಂದ ಯತ್ನಾಳ್
– ಮುಸ್ಲಿಮರ ಮತಕ್ಕಾಗಿ ಸಿದ್ದರಾಮಯ್ಯರೇ ಮೌಲ್ವಿ ಮನೆಗೆ ಹೋಗಿದ್ದಾರೆ ಎಂದ ಶಾಸಕ

ಬೆಂಗಳೂರು: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ತನ್ವೀರ್ ಪೀರ್ (Tanveer Peera) ಅವರ ನಿವಾಸಕ್ಕೆ ಯಾರೂ ಭೇಟಿ ನೀಡಿದಂತೆ ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಇದರ ನಡುವೆಯೂ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಯತ್ನಾಳ್, ಮೌಲ್ವಿ ಕುಟುಂಬದ ಜೊತೆಗೆ ವ್ಯವಹಾರ ಹೊಂದಿದ್ರಾ? ತನ್ವೀರ್ ಹಾಶ್ಮಿ ಮತ್ತು ಯತ್ನಾಳ್ ಉದ್ಯಮ ಪಾಲುದಾರರಾಗಿದ್ರಾ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ವಿಜಯಪುರ ಶೂಟೌಟ್‌ ಕೇಸ್‌ನಲ್ಲಿ 3ನೇ ಆರೋಪಿ – ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದ ತನ್ವೀರ್‌ ಪೀರಾ ಯಾರು?

Siddaramaiah Tanveer Peera 2

ಆ ಮೌಲ್ವಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವನೊಬ್ಬ ಭಯೋತ್ಪಾದಕ, ನಾನು ಅದರಲ್ಲಿ ಪಾಲುದಾರನಲ್ಲ. 50-60 ವರ್ಷದ ಹಿಂದಿನ ಲೀಸ್ ಪ್ರಾಪರ್ಟಿ ಅದು. ಪಾಲಿಕೆ ಆಸ್ತಿ, ನನ್ನ ಆಸ್ತಿ ಅಲ್ಲ. ಅದರ ಮೂಲ ಮಾಲಿಕ ನಮ್ಮ ತಂದೆ. 55 ವರ್ಷಗಳ ಹಿಂದೆ ನಮ್ಮ ತಂದೆ ಜೊತೆಗೆ ನಾಲ್ಕೈದು ಜನ ಇದ್ದರು. ಅದರಲ್ಲಿ ಇಬ್ಬರು ಮುಸ್ಲಿಂ, ಇಬ್ಬರು ಹಿಂದೂಗಳಿದ್ದರು. ಒಬ್ಬ ಮುಸ್ಲಿಂ ಮಾರಿ ಹೋದ. ಆದ್ರೆ ಆಸ್ತಿ ಮಾರಿದ ಲೀಸ್ ಹೋಲ್ಡರ್‌ಗೂ ಈ ಭಯೋತ್ಪಾದಕನಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

Siddaramaiah 2 1

ಈಗ ಸಿದ್ದರಾಮಯ್ಯ ಅವರು ಮೌಲ್ವಿ ಮನೆಗೆ ಹೋಗಿರುವ ವೀಡಿಯೋ ಬಿಟ್ಟಿದ್ದೇನೆ. ಪೊಲೀಸ್ ಇಲಾಖೆಯವರು ಮೌಲ್ವಿ ಮನೆಗೆ ಹೋಗಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಗಂಭೀರ ಆರೋಪವಿದೆ ಹಾಗಾಗಿ ಅವರ ಮನೆಗೆ ಹೋಗಬಾರದು ಎಂದಿದ್ದಾರೆ. ಆದಾಗ್ಯೂ ಮುಸ್ಲಿಮರ ಮತಕ್ಕಾಗಿ ಸಿದ್ದರಾಮಯ್ಯರೇ ಅವರ ಮನೆಗೆ ಹೋಗಿದ್ದಾರೆ. ಎಂ.ಬಿ ಪಾಟೀಲರು ಒತ್ತಡ ಹಾಕಿ ಕರೆದುಕೊಂಡು ಹೋಗಿದ್ದಾರೆ. ನಾನು ಅವರ ಜೊತೆ ಪಾಲುದಾರನಾಗಿ ವ್ಯವಹಾರ ಮಾಡಿದ್ದೇನೆ ಅನ್ನೋರ ವಿರುದ್ಧ ಮಾನನಷ್ಟ ಕೇಸ್ ಹಾಕ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಸಿಸ್‌ ಜೊತೆ ನಂಟು ಸಾಬೀತು ಪಡಿಸಿದ್ರೆ ದೇಶ ತೊರೆಯುತ್ತೇನೆ: ಯತ್ನಾಳ್‌ಗೆ ತನ್ವೀರ್‌ ಪೀರಾ ಸವಾಲ್‌

50 ವರ್ಷಗಳ ಹಿಂದೆ ಆಸ್ತಿಯನ್ನು ಲೀಸ್‌ಗೆ ಪಡೆದುಕೊಂಡಾಗ ನಾನು ಆಗ ಅಪ್ರಾಪ್ತನಾಗಿದ್ದೆ. ನಾನು ಮೊದಲು ಆಸ್ತಿ ತಗೊಂಡೆ, ಅಕ್ಕ-ಪಕ್ಕ ಇದ್ದಿದ್ದು ನಿಜ. ನಾನು ಮೊದಲು ಅಲ್ಲಿದ್ದೆ. ಅವನು ಅದೇ ಸ್ಥಳದ ಹಿಂಭಾಗದಲ್ಲಿ ಆಸ್ತಿ ತಗೊಂಡು ಮಸೀದಿ ಕಟ್ಟಿಸಿದಾನೆ. ಆದ್ರೆ ನಾನು ತನ್ವೀರ್ ಪೀರ್ ಜೊತೆ ಉದ್ಯಮ ಪಾಲುದಾರ ಅಲ್ಲ. ನಮ್ಮದೇ ಟೂರಿಸ್ಟ್ ಹೊಟೇಲ್ ಇದೆ. ಹಾಶ್ಮಿ ಮುರ್ಷೀದ್ ಪೀರ ಸೂಫಿಯ ಗದ್ದುಗೆ ಒಳಗಿದೆ, ಅದನ್ನು 60 ವರ್ಷಗಳ ಹಿಂದೆ ಲೀಸ್ ಆಗಿದ್ದು. ನನಗೂ ತನ್ವೀರ್‌ಗೂ ಸಂಬಂಧ ಇಲ್ಲ. ಆ ಭಯೋತ್ಪಾದಕನ ಜತೆ ನನಗೆ ಯಾವುದೇ ಸಂಬಂಧ ಇಲ್ಲ. ದೇಶದ್ರೋಹಿ, ಐಎಸ್‌ಐ ಏಜೆಂಟ್ ಜೊತೆ ನನಗೆ ಸಂಬಂಧವಿಲ್ಲ. ಈ ಎಲ್ಲ ಬೆಳವಣಿಗೆ ಬಗ್ಗೆ ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

Share This Article