ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಆಹಾರ ಪದ್ಧತಿಯೇ ಒಂಥರಾ ಡಿಫರೆಂಟ್. ರಾಜಕಾರಣಕ್ಕೆ ಬಂದ ಮೇಲೂ ಸಿದ್ದರಾಮಯ್ಯನವರು ಅದನ್ನ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಮುದ್ದೆ, ನಾಟಿ ಕೋಳಿ ಸಾರು ಅಂದ್ರೆ ಪಂಚಪ್ರಾಣ. ರಾಜಕಾರಣಿಗಳಿಗೆ ಟೈಮ್ ಇರಲ್ಲ. ಕೆಲವರದಂತೂ ಕಟ್ಟುನಿಟ್ಟಿನ ಜೀವನ ಶೈಲಿ ಆಗಿರುತ್ತೆ. ಆದರೆ ಆಹಾರ ವಿಚಾರದಲ್ಲಿ ಸಿದ್ದರಾಮಯ್ಯ ಶಿಸ್ತಿಗೆ ಬಂದಿದ್ದಾರಂತೆ. ಸಿಎಂ ಆದ ಬಳಿಕವಂತೂ ಪಕ್ಕಾ ಫುಡ್ ಕಲ್ಚರ್ ಗೆ ಹೊಂದಿಕೊಂಡಿದ್ದಾರೆ. ಮುದ್ದೆ ನಾಟಿ ಕೋಳಿ ಸಾರು ಮಾತ್ರ ಬೇಕೇ ಬೇಕು. ವಾರಕ್ಕೆ ಕನಿಷ್ಠ ಎರಡ್ಮೂರು ಬಾರಿಯಾದರೂ ನಾಟಿಕೋಳಿ ಸಾರು ಇಲ್ಲದಿದ್ದರೆ ರುಚಿಯ ಗಮ್ಮತ್ತೇ ಇರಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ ಎಂಬುವುದು ಆಪ್ತರ ಮಾತು.
Advertisement
ಅಂದಹಾಗೆ ಇದನ್ನೆಲ್ಲ ಈಗ ಏಕೆ ಹೇಳ್ತಿದ್ದೀರಾ ನೀವು ಅಂತಾ ಅಶ್ಚರ್ಯ ತರಬಹುದು. ಅದಕ್ಕೆ ಕಾರಣ ಇದೆ. ಸಿದ್ದರಾಮಯ್ಯ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ಬಳಿಕ ಆಸ್ಪತ್ರೆಯಲ್ಲಿದ್ದರು. 5 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಾಗಲೂ ಅವರು ನಾಟಿಕೋಳಿ ಸಾರನ್ನ ಮಾತ್ರ ಮರೆಯಲಿಲ್ಲ. ಆಸ್ಪತ್ರೆಯಲ್ಲಿ ಮೆಡಿಸಿನ್ ತೆಗೆದುಕೊಳ್ಳುತ್ತಾ ಇದ್ದಿದ್ರಿಂದ ಬಾಯಿ ರುಚಿ ಸ್ವಲ್ಪ ಕೆಡುತ್ತೆ. ಈ ನಡುವೆಯೇ ನಾಟಿಕೋಳಿ ಸಾರನ್ನ ತರಿಸಿಕೊಂಡು ಊಟ ಮಾಡುತ್ತಿದ್ದರು ಅಂತಾ ಆಪ್ತರು ಹೇಳುತ್ತಾರೆ.
Advertisement
ಸಿದ್ದರಾಮಯ್ಯನವರ ನಾಟಿಕೋಳಿ ಪ್ರೀತಿ ಹೇಗಿದೆ ಅನ್ನೋದನ್ನ ಅವರ ಒಂದು ಪ್ರಶ್ನೆಯಲ್ಲೇ ಗೊತ್ತಾಗುತ್ತೆ ನೋಡಿ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಡುವ ಮೊದಲು ಏನ್ರೀ ಡಾಕ್ಟರೇ, ಮನೆಗೆ ಹೋದ ಮೇಲೂ ನಾಟಿಕೋಳಿ ಸಾರು ಊಟ ಮಾಡಬಹುದಾ? ಏನು ಪ್ರಾಬ್ಲಂ ಇಲ್ವಾ? ಎಂದು ಸಿದ್ದರಾಮಯ್ಯನವರು ಕೇಳಿದ್ದಾರೆ ಎನ್ನಲಾಗಿದೆ. ಆಗ ಡಾಕ್ಟರ್ ನಾಟಿಕೋಳಿ ಸಾರು ಏನು ಪ್ರಾಬ್ಲಂ ಇಲ್ಲ, ಊಟ ಮಾಡಿ ಆದರೆ ಪ್ರವಾಸ ಹೋಗಬೇಡಿ. ಕನಿಷ್ಠ 10 ದಿನ ನೀವು ವಿಶ್ರಾಂತಿಯಲ್ಲಿರಬೇಕು, ಬೆಳಗ್ಗೆ ಮತ್ತು ಸಂಜೆ ವಾಕಿಂಗ್, ಜಾಗಿಂಗ್ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
Advertisement
Advertisement
ನಿಮ್ಮ ಸಲಹೆಯಂತೆ ವಿಶ್ರಾಂತಿ ಪಡೆದುಕೊಂಡು ಆರೋಗ್ಯವಾಗಿರುತ್ತೇನೆ ಎಂದು ಹೇಳಿ ಸಿದ್ದರಾಮಯ್ಯನವರು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಬರುವಾಗ ತಮ್ಮನ್ನು ನೋಡಿಕೊಂಡ ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿ ಬಂದಿದ್ದಾರೆ.