ಬೆಳಗಾವಿ: ನಮ್ಮ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಠದ ಶ್ರೀಗಳಂತೆ ಮಾತನಾಡಿದರು. ರಾಜಕಾರಣ ಬಿಟ್ಟು ಸಿದ್ದರಾಮಯ್ಯ ಅವರು ಇಂದು ಮಠದ ಶ್ರೀಗಳಂತೆ ಮಾತನಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಡಿಹೊಗಳಿದರು.
ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಸಿದ್ದರಾಮಯ್ಯ ಅವರು ಮಠದ ಶ್ರೀಗಳಂತೆ ಮಾತನಾಡಿದರು. ರಾಜಕಾರಣ ಬಿಟ್ಟು ಸಿದ್ದರಾಮಯ್ಯ ಅವರು ಇಂದು ಮಠದ ಶ್ರೀಗಳಂತೆ ಮಾತನಾಡಿದ್ದಾರೆ. ನಾನು ಗಂಗಾಧರ್ ಅಜ್ಜನ ಶಿಷ್ಯ.ಬಸವಣ್ಣನವರ ಆಚಾರ ವಿಚಾರ ಇವತ್ತು ನೆನಪಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ತೊರೆದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ
Advertisement
Advertisement
ಬಸವಣ್ಣ, ಕಿತ್ತೂರು ಚನ್ನಮ್ಮ, ಕುವೆಂಪು ಅವರ ಆದರ್ಶದಂತೆ ಕರ್ನಾಟಕವನ್ನ ಉಳಿಸಿಕೊಂಡು, ಬೆಳಸಿಕೊಂಡು ಹೋಗಬೇಕು ಅನ್ನೋದು ನಮ್ಮ ಸಿದ್ಧಾಂ ತವಾಗಿದೆ. ಯಾವ ಜಾತಿಯಲ್ಲಿ ಹುಟ್ಟಬೇಕು ಎಂದು ಯಾರು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ‘ಧರ್ಮ ಬೇಡ ಜಾತಿ ಬೇಡಾ’ ಅಂತ ಹೇಳಿದ್ರೆ ಧರ್ಮ ಬಿಡುವುದಿಲ್ಲ. ಇವತ್ತು ದೇಶ, ಸಮಾಜ ಬಹಳ ಕಷ್ಟದಲ್ಲಿದೆ. ತಾಯಂದಿರು ಮೊದಲು ಗುರು. ನೀವೇ ಈ ಸಮಾಜಕ್ಕೆ ಆಸ್ತಿಯಾಗಿದ್ದೀರಿ. ಈ ಸಮಾಜ ಏನಾದರು ಬದುಕಿದೆ ಎಂದರೆ ತಾಯಂದಿರ ಶ್ರಮ ಮತ್ತು ಹೋರಾಟದಿಂದ ಎಂದು ಹೇಳಿದರು.
Advertisement
Advertisement
ಸಮಾಜಕ್ಕೆ ತೊಂದರೆ ಕಷ್ಟ ಆದಾಗ ಮಠಾಧೀಶರು ಧ್ವನಿ ಎತ್ತಬೇಕು. ರಾಜಕೀಯವಾಗಿ, ಒಂದು ಪಕ್ಷದ ಪರವಾಗಿ ಧ್ವನಿ ಎತ್ತಿ ಎಂದು ನಾನು ಹೇಳುವುದಿಲ್ಲ. ಸಮಾಜಕ್ಕೆ ಅನ್ಯಾಯ ಆದಾಗ ಸ್ವಾಮೀಜಿಗಳು ನೀವು ಕೈಕಟ್ಟಿ ಕುಳಿತುಕೊಳ್ಳಬಾರದು ಎಂದು ಕರೆ ಕೊಟ್ಟರು. ಇದನ್ನೂ ಓದಿ: ಕೇಜ್ರಿವಾಲ್ ಅರಾಜಕತೆ ಸೃಷ್ಟಿ ಮಾಡುವ ನಾಯಕ: ಸಂದೀಪ್
ಧರ್ಮ ಉಳಿಯಬೇಕು ಅಂತ ಸಾವಿರಾರು ಜನ ಸ್ವಾಮೀಜಿಗಳನ್ನು ತಯಾರು ಮಾಡ್ತೀರಿ. ಶಾಂತಿ ನೆಮ್ಮದಿಯಿಂದ ಬದುಕಲು ನೀವೆಲ್ಲಾ ಸಹಕಾರ ಮಾಡಬೇಕು. ಸನ್ಮಾನ ಮಾಡಿಸಿಕೊಳ್ಳಲು ನಾವು ಇಲ್ಲಿಗೆ ಬಂದಿಲ್ಲ. ಮಠಗಳ ಜೊತೆಗೆ ನಾವಿದ್ದೇವೆ ಅನ್ನೋದನ್ನ ಹೇಳಲು ಬಂದಿದ್ದೇವೆ ಎಂದು ಹೇಳಿದರು.