ನವದೆಹಲಿ: ಹೈಕಮಾಂಡ್ ಜೊತೆ ಹೈವೋಲ್ಟೇಜ್ ಸಭೆಯ ಹಿನ್ನೆಲೆ ದೆಹಲಿಯಲ್ಲಿ (Delhi) ಬೀಡು ಬಿಟ್ಟಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಇಂದು ಪ್ರಧಾನಿ ಮೋದಿ (PM Modi) ಅವರನ್ನು ಭೇಟಿ ಮಾಡಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಭೇಟಿಗೆ ಪ್ರಧಾನಿ ಮೋದಿ ಸಮಯವನ್ನು ಕೊಟ್ಟಿದ್ದಾರೆ. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ ಪ್ರಧಾನಿ ಅವರನ್ನು ಭೇಟಿ ಮಾಡುತ್ತಿದ್ದಾರೆ. ಈ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ಹೆಚ್ಚುವರಿ ಅಕ್ಕಿ (Rice) ನೀಡುವಂತೆ ಮನವಿ ಮಾಡಬಹುದು ಎಂಬ ಮಾತು ಕೇಳಿ ಬಂದಿದೆ.
ರಾಜ್ಯದಲ್ಲಿನ ಅನ್ನಭಾಗ್ಯದ ಪರಿಸ್ಥಿತಿ ಬಗ್ಗೆ ವಿವರಣೆ ಕೊಡಲಿರುವ ಸಿಎಂ ಸಿದ್ದರಾಮಯ್ಯ, ಅಕ್ಕಿ ಖರೀದಿಗೆ ರಾಜ್ಯದ ಪ್ರಯತ್ನ, ಅಕ್ಕಿ ಅಲಭ್ಯತೆ, ಅಕ್ಕಿ ಬದಲು ಹಣ ಕೊಡುತ್ತಿರುವ ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಕೊಡಿಸುವಂತೆಯೂ ಮನವಿ ಮಾಡಲಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 25 ಲೋಕಸಭೆ ಸ್ಥಾನ ಗೆಲ್ಲಬೇಕು- ಕೈ ನಾಯಕರಿಗೆ ಹೈಕಮಾಂಡ್ ಬಿಗ್ ಟಾಸ್ಕ್
ಇಂದು ಸಿದ್ದರಾಮಯ್ಯ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿಎಂ ಮನವಿಗೆ ಒಪ್ಪಿ ಬರ್ತ್‌ಡೇ ಗಿಫ್ಟ್ ಆಗಿ ಕೇಂದ್ರದಿಂದ ಹೆಚ್ಚುವರಿ ಅಕ್ಕಿಯನ್ನು ಪ್ರಧಾನಿ ಮೋದಿ ಕೊಡುತ್ತಾರಾ? ಅಥವಾ ಅಕ್ಕಿ ಕೊಡಲು ಒಪ್ಪದೇ ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಕೊಟ್ಟಿದ್ದ ಕಾರಣವನ್ನೇ ಕೊಡುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ. ಈ ಭೇಟಿಯಲ್ಲಿ ಅನ್ನಭಾಗ್ಯಕ್ಕೆ ಅಕ್ಕಿ ಸಿಗದಿದ್ದರೆ ಈ ತಿಂಗಳು ಸಹ ಅಕ್ಕಿ ಬದಲಿಗೆ ಹಣ ಖಾತೆಗೆ ಜಮೆ ಆಗಲಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]