ಬೆಂಗಳೂರು: ಸೋಮವಾರ ಸಿದ್ದರಾಮಯ್ಯನವರ (Siddaramaiah) ಪ್ರಮಾಣ ವಚನ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ (Kanteerava Stadium) ಗುರುವಾರ ಮಧ್ಯಾಹ್ನ 3:30ಕ್ಕೆ ಸಿದ್ದರಾಮಯ್ಯ ಮತ್ತು ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ಸಿಎಂ ಪಟ್ಟಕ್ಕೆ ಸಿದ್ದರಾಮಯ್ಯ ಆಯ್ಕೆ – ಗ್ಯಾರಂಟಿ ಘೋಷಣೆ ಕೂಗಿ ಸಂಭ್ರಮಿಸಿದ ಅಭಿಮಾನಿಗಳು
Advertisement
Advertisement
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಿಗದಿಯಾದ ಬೆನ್ನಲ್ಲೇ ಅಧಿಕಾರಿಗಳು ಸಿದ್ಧತೆಗಾಗಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದಾರೆ. ಸುಮಾರು 1 ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳ ಮುಂದೆ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮತ್ತು ಕಾಂಗ್ರೆಸ್‌ನ ಬೆಂಬಲಿತ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಆಗಮಿಸುವ ಸಾಧ್ಯತೆಯಿದೆ.
Advertisement
2013 ರಲ್ಲೂ ಸಿದ್ದರಾಮಯ್ಯ ಕಂಠೀರವ ಸ್ಟೇಡಿಯಂನಲ್ಲೇ ಪ್ರಮಾಣವಚನ ಸ್ವೀಕರಿಸಿ 5 ವರ್ಷ ಅಧಿಕಾರ ನಡೆಸಿದ್ದರು. ಈ ಕಾರಣಕ್ಕೆ ಎರಡನೇ ಬಾರಿ ಸಿದ್ದರಾಮಯ್ಯ ಕಂಠೀರವ ಸ್ಟೇಡಿಯಂನಲ್ಲೇ ಪ್ರಮಾಣ ವಚನ ನಡೆಸಲಿದ್ದಾರೆ.
Advertisement
ಪ್ರಮಾಣ ವಚನ ನಡೆಯಲ್ಲ:
ಆರಂಭದಲ್ಲಿ ಸೋಮವಾರ ಪ್ರಮಾಣವಚನ ನಡೆಯಲಿದೆ ಎಂಬ ಸುದ್ದಿ ಬಂದಿತ್ತು. ಇದಾದ ಬಳಿಕ ಗುರುವಾರವೇ ಪ್ರಮಾಣವಚನ ನಡೆಯುವ ಸುದ್ದಿ ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿತ್ತು. ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲು ಅಧಿಕಾರಿಗಳು ಸಹ ಕಂಠೀರವ ಸ್ಟೇಡಿಯಂ ಆಗಮಿಸಿದ್ದರು. ಆದರೆ ಡಿಕೆಶಿ ಪಟ್ಟು ಜೋರಾಗಿ ಹಿಡಿಯುತ್ತಿದ್ದಂತೆ ರಣ್‌ದೀಪ್ ಸುರ್ಜೇವಾಲಾ ಮಾಧ್ಯಮಗಳ ಜೊತೆ ಮಾತನಾಡಿ ವದಂತಿಗಳಿಗೆ ಕಿವಿಕೊಡಬೇಡಿ. ನಾಳೆ ಪ್ರಮಾಣ ವಚನ ನಡೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.