ಮಡಿಕೇರಿ: ಲೋಕಸಭಾ ಚುನಾವಣೆಯ ಬಳಿಕ ಸಿಎಂ ಉಡುಪಿಯಲ್ಲಿ ವಿಶ್ರಾಂತಿ ಪಡೆದಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಡಿಕೇರಿ ಸಮೀಪದ ರೆಸಾರ್ಟಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಮಡಿಕೇರಿ ನಗರದಿಂದ ಸ್ವಲ್ಪ ದೂರದಲ್ಲಿ ಮೈಸೂರು ರಸ್ತೆಯಲ್ಲಿರುವ ಇಬ್ಬನಿ ರೆಸಾರ್ಟಿಗೆ ಭಾನುವಾರ ಸಂಜೆ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಜೊತೆ ಆಗಮಿಸಿದ್ದಾರೆ.
Advertisement
Advertisement
ಭಾನುವಾರ ಸಂಜೆ ಸಂಜೆ 5:30ಕ್ಕೆ ರೆಸಾರ್ಟಿಗೆ ಎಂಟ್ರಿ ಕೊಟ್ಟ ಸಿದ್ದರಾಮಯ್ಯ ಮಂಗಳವಾರದ ಬೆಳಗ್ಗೆಯವರೆಗೂ ರೆಸಾರ್ಟಿನಲ್ಲಿ ಇರಲಿದ್ದಾರೆ. ಇಬ್ಬನಿ ರೆಸಾರ್ಟಿಗೆ ಸಂಬಂಧಿಸಿದವರ ಹೆಸರಿನಲ್ಲಿ ಇಬ್ಬರು ಮಾತ್ರ ಎಂಟ್ರಿ ಎಂದು ದಾಖಲಾಗಿದ್ದರೂ ಎರಡಕ್ಕಿಂತ ಹೆಚ್ಚು ಜನ ಇರುವುದು ತಿಳಿದು ಬಂದಿದೆ.
Advertisement
ಗೌಪ್ಯವಾಗಿ ಸಿದ್ದರಾಮಯ್ಯ ಹಾಗೂ ಅವರ ಸಂಗಡಿಗರು ರೂಮ್ ಬುಕ್ ಮಾಡಿದ್ದು, ಎಂಟ್ರಿ ಆಗಿರುವ ಮಾಹಿತಿ ಹೊರತು ಪಡಿಸಿದರೆ ಮತ್ತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಿದ್ದರಾಮಯ್ಯನವರ ತಂಡ ಚೆಕ್ ಔಟ್ ಆಗಲಿದೆ.