ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddarmaiah) ಅವರು ಮುಡಾ ಪ್ರಕರಣದಲ್ಲಿ (MUDA) ಸೆಷನ್ ಆರಂಭಕ್ಕೂ ಮುನ್ನ ಆಯೋಗ ರಚನೆ ಮಾಡಿ ತನಿಖೆಗೆ ಕೊಡ್ತಾರೆ. ಅದು ಸಂಡೇ.. ಇದು ಸಂಡೇ ಲಾಯರ್ ಕೆಲಸ, ಮಂಡೇ ಲಾಯರ್ ಕೆಲಸ ಅಲ್ಲ ಎಂದು ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ (Rahul Gandhi)ಭ್ರಷ್ಟಾಚಾರ ಸಹಿಸಲ್ಲ ಅಂತಾ ಹೇಳಿದ್ದರು. ಈಗ ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಆದರೆ ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ. ಅವರಿಗೆ ಇನ್ನೂ ಭ್ರಷ್ಟಾಚಾರ ಗಮನಕ್ಕೆ ಬಂದಿಲ್ಲವಾ? ಅಥವಾ ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಿದ್ದೀರಾ? ಜೊತೆಗೆ ಈ ಕುರಿತು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಮಾತಾಡಿಲ್ಲ, ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಪರಿಷತ್ ಸದಸ್ಯ
ದೆಹಲಿಯ ಎಐಸಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕು ಅಂದುಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ನಿಲುವು, ಸ್ಪಷ್ಟನೆ ಕುರಿತು ಕೇಳಬೇಕು ಅಂದುಕೊಂಡಿದ್ದೇವೆ. ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಅಂತಾ ಹೇಳಿದ್ದಾರೆ.
ಇನ್ನೊಂದೆಡೆ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಕುರಿತು ಮಾತನಾಡಿ, ನೀವು ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದೀರಿ. ನೀವು ಕೇಂದ್ರದ ಕೆಲಸ ಮಾಡಿ, ಎನ್‌ಡಿಎ (NDA) ಪರ ದೇಶ ಸುತ್ತಿ ಕೆಲಸ ಮಾಡಿ. ನೀವು ಮೋದಿ ಜತೆ ಸೇರಿ ಕೆಲಸ ಮಾಡಿ. ಬೆಳಗ್ಗೆ ಒಂದು ಹೇಳಿಕೆ ಕೊಡುತ್ತಾರೆ. ಅದಕ್ಕೆ ನೀವು ರಿಪ್ಲೈ ಕೊಡಬೇಕು ಈ ರೀತಿ ಮಾಡಿ ನಿಮ್ಮನ್ನು ಡೈವರ್ಟ್ ಮಾಡುತ್ತಾರೆ. ನಿಮ್ಮನ್ನು ಟ್ರ್ಯಾಪ್ ಮಾಡಲು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ (D K Shivakumar) ಈ ರೀತಿ ಮಾಡ್ತಿದ್ದಾರೆ. ರಾಜ್ಯದ ಸಮಸ್ಯೆಗಳ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಪಾದಯಾತ್ರೆಯಲ್ಲಿ ಬರೀ ಅವರ ಆಸ್ತಿ ಇವರ ಆಸ್ತಿ ಬಗ್ಗೆ ಅಷ್ಟೇ ಚರ್ಚೆಯಾಯಿತು. ಅವರ ಹೇಳಿಕೆಗಳಿಗೆ ರಿಯಾಕ್ಟ್ ನೀವು ಮಾಡಬೇಡಿ ಅಂತಾ ಸಲಹೆ ಕೊಟ್ಟಿದ್ದಾರೆ.ಇದನ್ನೂ ಓದಿ: ರಾಜ್ಯಪಾಲರು ಸರ್ಕಾರದ ವಿರುದ್ಧ ಇರೋದು ಸ್ಪಷ್ಟ – ಪರಮೇಶ್ವರ್ ಆರೋಪ
ಇದೇ ವೇಳೆ ಡಿಕೆಶಿ ವಿರುದ್ಧ ಮಾತನಾಡಿ, ನೀರಿನ ತೆರಿಗೆ ವಿಚಾರದಲ್ಲಿ ಡಿಕೆಶಿ ಬೆಂಗಳೂರಿಗರ ಮೇಲೆ ಸಿಟ್ಟು ತೋರಿಸಿದ್ದಾರೆ. ನಿಮಗೆ ಯಾಕೆ ಅಷ್ಟೊಂದು ಸಿಟ್ಟು? ಹೆಚ್ಚು ತೆರಿಗೆ ಕಟ್ಟಲು ಬೆಂಗಳೂರು ಆಗ ಬೇಕು.. ಈಗ ಬೇಡ್ವಾ? ಬೆಂಗಳೂರಿಗೆ ನೀವು ಏಕೆ ಬೇಕು? ಬೆಂಗಳೂರಿಗೆ ನಿಮ್ಮ ಕೊಡುಗೆ ಏನು? ಡಿಸಿಎಂ ಅವರು ಬೆಂಗಳೂರಿಗರ ಮೇಲೆ ಗದಾಪ್ರಹಾರ ಮಾಡಿದ್ದಾರೆ. ಇಲ್ಲಿಯವರ ಬಗ್ಗೆ ನೀವು ಮಾತನಾಡಿದ್ದು ಅಪರಾಧ. ಡಿಕೆಶಿ ಅವರೇ ನಮ್ಮ ನಗರದ ಜನರ ಪರವಾಗಿ ನಾವು ರಾಜೀನಾಮೆ ಕೊಡಿ ಎಂದು ಕೇಳ್ತಾ ಇದ್ದೀವಿ. ಯೋಗ್ಯತೆ ಇರೋರು ಬರಲಿ ಎಂದು ಆಗ್ರಹಿಸಿದ್ದಾರೆ.