ಬೆಳಗಾವಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪನ (Madal Virupakshappa) ಮಗ ಗುತ್ತಿಗೆದಾರರಿಂದ ಲಂಚ ಪಡೆಯುವಾಗ ನೇರವಾಗಿ ಸಿಕ್ಕಿ ಬಿದ್ದಿದ್ದಾರೆ. ಗುತ್ತಿಗೆದಾರ ಸಂತೋಷ ಪಾಟೀಲ್ ಕಮಿಷನ್ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಭ್ರಷ್ಟಾಚಾರದ ಬಗ್ಗೆ ದಾಖಲಾತಿ ಕೊಡಿ ಅಂತಿದ್ದಾರೆ. ಇವು ದಾಖಲೆಗಳಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಚಾಟಿ ಬೀಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಆರೋಪ ಬಂದ ಕೂಡಲೇ ಸಿಬಿಐಗೆ ವಹಿಸಿದ್ದೇನೆ. ಆ ಕೇಸ್‍ಗಳಲ್ಲಿ ಎನೂ ಸತ್ಯ ಇಲ್ಲವೆಂದು ಬಿ ರಿಪೋರ್ಟ್ (B report) ಬಂದಿವೆ. ಬಿಜೆಪಿಯವರು ಒಂದು ದಿನಾ ಆದ್ರೂ ವಿಚಾರಣೆ ನಡೆಸಿದ್ದಾರಾ? ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆ..!
Advertisement
ಡಿಕೆ ರವಿ ಕೇಸ್ (D.K.Ravi) ದಾಖಲೆ ಕೊಟ್ಟಿದ್ರಾ? ಗಣಪತಿ ಕೇಸ್ ದಾಖಲಾತಿ ಕೊಟ್ಟಿದ್ರಾ? ಸೌಜನ್ಯ ಕೇಸ್, ಪರೇಶ್ ಮೇಸ್ತಾ (Paresh Mesta) ಪ್ರಕರಣಕ್ಕೆ ದಾಖಲಾತಿ ಕೊಟ್ಟಿದ್ರಾ? ಆರೋಪ ಮಾಡಿದ ಕೂಡಲೇ ನಾನು ಸಿಬಿಐಗೆ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ಕೇಂದ್ರದಲ್ಲಿ ಬಿಜೆಪಿ (BJP) ಸರ್ಕಾರ ಇತ್ತು ಸಿಬಿಐ ಅವರ ಅಧೀನದಲ್ಲಿತ್ತು. ಸಿದ್ದರಾಮಯ್ಯ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಅಂತಾ ಹೇಳಿದ್ರು. ನೀವು ಐದು ವರ್ಷ ವಿರೋಧ ಪಕ್ಷದಲ್ಲಿದ್ರಿ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಎತ್ತಿದ್ರಾ? ನೀವು ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಆಯ್ತು ಯಾಕೆ ವಿಚಾರಣೆ ಮಾಡಿಸಲಿಲ್ಲ? ಈಗ ಅವರ ಭ್ರಷ್ಟಾಚಾರ ಮುಚ್ಚಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement
ಮಂತ್ರಿಗಳು, ಅಧ್ಯಕ್ಷರು ಕಲೆಕ್ಟ್ ಮಾಡಿಕೊಡಬೇಕು. ಇದೇ ವಿಚಾರಕ್ಕೆ ಮಾಡಾಳ್ ವಿರೂಪಾಕ್ಷಪ್ಪನ ಮಗ ಸಿಕ್ಕಿ ಹಾಕಿಕೊಂಡಿದ್ದಾನೆ. ಮನೆಯಲ್ಲಿ ಆರು ಕೋಟಿ ಸಿಕ್ಕಿತು ಎಲ್ಲಿಂದ ಬಂತೂ ದುಡ್ಡು? ಅದು ಲೆಕ್ಕ ಇಲ್ಲದ ಭ್ರಷ್ಟಾಚಾರದ ಹಣ ಎಂದಿದ್ದಾರೆ.
ಸಚಿವರಿಗೆ, ನಿಗಮ ಮಂಡಳಿ ಅಧ್ಯಕ್ಷರಿಗೆ ಹಣ ಫಿಕ್ಸ್ ಮಾಡಿದ್ದಾರೆ. ಚುನಾವಣೆಯನ್ನು (Election) ಕೋಮು ಗಲಭೆಯಲ್ಲಿ ಗೆಲ್ಲಲು ಆಗಲ್ಲ ಹಣದಲ್ಲಿ ಗೆಲ್ಲಬೇಕೆಂದು ಹೊರಟ್ಟಿದ್ದಾರೆ. ನಾವು ಮಾಡಿದ ಕೆಲಸಗಳನ್ನ ಪ್ರಧಾನಿ ಕರೆಸಿ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಲೋಕಾಯುಕ್ತ ಭರ್ಜರಿ ಬೇಟೆ- 8.12 ಕೋಟಿ ಹಣ ಸೀಜ್