ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಸಚಿವ ಸಂಪುಟದ ವಿಸ್ತಾರಣೆ ಕಾರ್ಯ ಇಂದು ನಡೆಯಿತು. ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಶಾಸಕರ ಪೈಕಿ 10 ಜನರಿಗೆ ಮಂತ್ರಿಗಿರಿ ಸಿಕ್ಕಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮದೇ ದಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮೊದಲ ಟ್ವೀಟ್‍ನಲ್ಲಿ ಸಿದ್ದರಾಮಯ್ಯ ಅವರು, ಸಂಪುಟ ವಿಸ್ತರಣೆ ಬಗ್ಗೆ ಸಂತೋಷ ಪಡುವುದೇನಿಲ್ಲ. ತಾಂತ್ರಿಕವಾಗಿ ಚುನಾವಣೆಯಲ್ಲಿ ಗೆದ್ದು ಶಾಸಕರಾದರೂ ನೈತಿಕವಾಗಿ ಸೋತಿರುವ ಅವರು ಈಗಲೂ ಅನರ್ಹರೇ ಆಗಿದ್ದಾರೆ. ನೂತನ ಸಚಿವರಿಗೆ ಒಳ್ಳೆಯದಾಗಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ಸಂತೋಷ ಪಡುವುದೇನಿಲ್ಲ. ತಾಂತ್ರಿಕವಾಗಿ ಚುನಾವಣೆಯಲ್ಲಿ ಗೆದ್ದು ಶಾಸಕರಾದರೂ ನೈತಿಕವಾಗಿ ಸೋತಿರುವ ಅವರು ಈಗಲೂ ಅನರ್ಹರೇ ಆಗಿದ್ದಾರೆ. ನೂತನ ಸಚಿವರಿಗೆ ಒಳ್ಳೆಯದಾಗಲಿ. 1/2 #Mysuru
— Siddaramaiah (@siddaramaiah) February 6, 2020
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈಕಾಲನ್ನು ಹೈಕಮಾಂಡ್ ಕಟ್ಟಿಹಾಕಿ ತಲೆಗೆ ಮಾತ್ರ ಕಿರೀಟ ಇಟ್ಟು ಕೂರಿಸಿದೆ. ಅವರ ಅಸಹಾಯಕತೆಯನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ. ಮಾಡಿದುಣ್ಣೋ ಮಹರಾಯ ಎಂದು ಟ್ವೀಟ್ ಮೂಲಕ ಕಟುಕಿದ್ದಾರೆ.
ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಚಿಕ್ಕಬಳ್ಳಾಪುರ ಭಾಗದ ನೀರಿನ ಸಮಸ್ಯೆ ಪರಿಹರಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ 44 ಕೆರೆಗಳಿಗೆ ನೀರು ತುಂಬಿಸುವ 900 ಕೋಟಿ ರೂ. ವೆಚ್ಚದ ಎನ್‍ಎಚ್ ವ್ಯಾಲಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿದ್ದೆ. ಯೋಜನೆಯ ಕಾಮಗಾರಿ ಪೂರ್ಣಗೊಂಡು ಇಂದು ಕಂದವಾರ ಕೆರೆಗೆ ನೀರು ಹರಿಯುತ್ತಿರುವುದು ನನ್ನಲ್ಲಿ ಸಂತಸ ಮೂಡಿಸಿದೆ ಎಂದು ತಿಳಿಸಿದ್ದರು.
ಮುಖ್ಯಮಂತ್ರಿಯವರ ಕೈಕಾಲನ್ನು ಹೈಕಮಾಂಡ್ ಕಟ್ಟಿಹಾಕಿ ತಲೆಗೆ ಮಾತ್ರ ಕಿರೀಟ ಇಟ್ಟು ಕೂರಿಸಿದ್ದಾರೆ. ಅವರ ಅಸಹಾಯಕತೆಯನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ.
ಮಾಡಿದುಣ್ಣೋ ಮಹರಾಯ. 2/2 #Mysuru
— Siddaramaiah (@siddaramaiah) February 6, 2020