ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರ ಸರ್ಕಾರವೇ ಕುಮ್ಮಕ್ಕು ಕೊಡುತ್ತಿದೆ. ಈ ಪೀಡಕ ಸರ್ಕಾರಕ್ಕೆ ಜನ ಛೀ, ಥೂ ಅಂತ ಉಗಿಯುತ್ತಿದ್ದಾರೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಅರುಣ್ ಸಿಂಗ್ ಕೂಡ ಇದ್ದರು. ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಶಹಬ್ಬಾಸ್ ಗಿರಿ ಕೊಟ್ಟು ಹೋಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರನ್ನು ಜನಸಾಮಾನ್ಯರ ಸಿಎಂ ಎಂದಿದ್ದಾರೆ ಅರುಣ್ ಸಿಂಗ್. 40 ಪರ್ಸೆಂಟ್ ಕಮಿಷನ್ ಸರ್ಕಾರದ ಭ್ರಷ್ಟಾಚಾರಕ್ಕೆ ನರೇಂದ್ರ ಮೋದಿ ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ ಎನ್ನುವುದು ಸ್ಪಷ್ಟ. ಇದು ಭ್ರಷ್ಟ ಸರ್ಕಾರ ಅಂತ ಜನಸಾಮಾನ್ಯರು ಟೀಕಿಸುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಕುಮ್ಮಕ್ಕು ಕೊಡುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ
Advertisement
Advertisement
ಬಹಳಷ್ಟು ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪಿಎಸ್‌ಐ ನೇಮಕಾತಿಗೆ ಮರು ಪರೀಕ್ಷೆ ಮಾಡುವುದಾಗಿ ಸರ್ಕಾರ ಹೇಳಿದೆ. ಅಂದರೆ ಪರೀಕ್ಷೆಯಲ್ಲಿ ಅಕ್ರಮ, ಭ್ರಷ್ಟಾಚಾರ ನಡೆದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ನೇಮಕಾತಿ ಮುಖ್ಯಸ್ಥ ಅಮೃತ್ ಪೌಲ್ ವರ್ಗಾವಣೆ ಮಾಡಿ ಇನ್ನೊಂದು ಮಹತ್ವದ ಹುದ್ದೆ ಕೊಟ್ಟಿದ್ದಾರೆ. ಡಿವೈಎಸ್ಪಿ ಶಾಂತಕುಮಾರ್‌ರನ್ನು ಕೂಡ ವರ್ಗಾವಣೆ ಮಾಡಿದ್ದಾರೆ. ಅಕ್ರಮದಲ್ಲಿ ತೊಡಗಿದ್ದಾರೆ ಅಂದಾಗ ಸಸ್ಪೆಂಡ್ ಮಾಡಿ, ತನಿಖೆ ನಡೆಸಬೇಕಿತ್ತು ಎಂದು ಹೇಳಿದ್ದಾರೆ.
Advertisement
ನೊಂದ ಅಭ್ಯರ್ಥಿಗಳ ಹೆಸರಿನಲ್ಲಿ ಡಿಜಿಪಿಗೆ ನೊಂದ ಅಭ್ಯರ್ಥಿಗಳು ಪತ್ರ ಬರೆದಾಗಲೂ ಕ್ರಮ ಕೈಗೊಂಡಿಲ್ಲ. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಫೆಬ್ರವರಿ 3ರಂದು ಪ್ರಭು ಚವ್ಹಾಣ್ ಸಿಎಂಗೆ ಪತ್ರ ಬರೆದಿದ್ದಾರೆ. ಬಿಜೆಪಿ ಪರಿಷತ್ ಸದಸ್ಯ ಸಂಕನೂರು ಕೂಡ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಶಶೀಲ್ ನಮೋಷಿ ಕೂಡ ಪರಿಷತ್‌ನಲ್ಲಿ ಅಕ್ರಮದ ಬಗ್ಗೆ ಪ್ರಶ್ನೆ ಕೇಳಿದಾಗ, ಲಿಖಿತ ಪರೀಕ್ಷೆ ಸುಗಮವಾಗಿ ನಡೆದಿದೆ ಅಂತೇಳಿ ಗೃಹ ಸಚಿವರು ಉತ್ತರ ಕೊಟ್ಟಿದ್ದರು. ಅವರು ಗೃಹ ಮಂತ್ರಿಯಾಗಿ ಮುಂದುವರಿಯಲು ಲಾಯಕ್ ಅಲ್ಲ, ಕೂಡಲೇ ಮಂತ್ರಿ ಸ್ಥಾನದಿಂದ ಡಿಸ್ಮಿಸ್ ಮಾಡಬೇಕು. ಸುಮ್ಮನೆ ಅಮಿತ್ ಶಾ ಬೆನ್ನು ತಟ್ಟಿ ಹೋಗುವುದಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಗಾಂಧಿನಗರ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಲಕ್ಷ್ಮೀಕಾಂತ್ ನೇಮಕ
Advertisement
ಅಕ್ರಮದಲ್ಲಿ ಅಶ್ವಥ್ ನಾರಾಯಣ ಕೈವಾಡ ಇರೋದು ಸ್ಪಷ್ಟ. ದರ್ಶನ್ ಗೌಡ, ನಾಗೇಶ್ ಗೌಡ ಇಬ್ಬರೂ ಅಶ್ವಥ್ ನಾರಾಯಣ ಸಂಬಂಧಿಕರು. ಸಚಿವರ ಸಹಾಯ ಇಲ್ಲದೆ ಹೀಗೆ ಮಾಡಲು ಆಗುತ್ತಾ? ದರ್ಶನ್ ಗೌಡ, ನಾಗೇಶ್ ಗೌಡ ಇಬ್ಬರನ್ನೂ ವಿಚಾರಣೆಗೆ ಕರೆದು, ಬಿಟ್ಟು ಕಳುಹಿಸಿದ್ದಾರೆ. ಏಕೆ ಇವರನ್ನ ಅರೆಸ್ಟ್ ಮಾಡಿಲ್ಲ? ಸಾಕ್ಷಿ ಇಲ್ಲದೆ ಹೇಗೆ ನೋಟಿಸ್ ಕೊಟ್ಟರು ಎಂದು ಪ್ರಶ್ನಿಸಿದ್ದಾರೆ.
ಅಶ್ವತ್ಥ ನಾರಾಯಣ ಮೇಲೆ ತೂಗುಗತ್ತಿ ಇದೆ. ಅಶ್ವಥ್ ನಾರಾಯಣ ಕೂಡಲೇ ರಾಜೀನಾಮೆ ಕೊಡಬೇಕು. ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಕ್ರಮದಲ್ಲಿ 300 ಕೋಟಿಗೂ ಹೆಚ್ಚು ಹಣದ ಅಕ್ರಮ ಆಗಿದೆ. ಇದನ್ನ ಸಿಐಡಿ ತನಿಖೆ ಮಾಡಿಸುತ್ತಿದೆ. ಸರ್ಕಾರ, ಮಂತ್ರಿಗಳು, ಪೊಲೀಸ್ ಅಧಿಕಾರಿಗಳೇ ಶಾಮೀಲಾಗಿರುವುದರಿಂದ ಸಿಐಡಿಯಿಂದ ತನಿಖೆ ಸಾಧ್ಯವಿಲ್ಲ. ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಿವೇಶನ ಇಲ್ಲದಿದ್ರೆ ಗ್ರಾಮ ಪಂಚಾಯತ್ ಮುಂದೆ ಹೋಗಿ ಮಲಗು ಎಂದ ಅಧ್ಯಕ್ಷ – ವಿಕಲಚೇತನನಿಂದ ವಿನೂತನ ಪ್ರತಿಭಟನೆ
ಜನ ಸಾಮಾನ್ಯರ ಪೀಡಕ ಸರ್ಕಾರ, ಜನ ಸಾಮಾನ್ಯರ ಸುಲಿಗೆ ಸರ್ಕಾರ ಇದು. ನರೇಂದ್ರ ಮೋದಿ ಅವರು ನಾಟಕ ಬಿಟ್ಟು ಇನ್ನಾದರೂ ತನಿಖೆ ಮಾಡಿಸಲಿ. ಜನರು ಛೀ, ಥೂ ಅಂತಾ ಉಗಿಯುತ್ತಿದ್ದಾರೆ. ಮೋದಿ ಇನ್ನು ಮುಂದೆ ನಾಟಕ ಮಾಡಬಾರದು. ಕೂಡಲೆ ಈ ಪ್ರಕರಣದ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಮೋದಿಗೆ ಸಿದ್ದರಾಮಯ್ಯ ಒತ್ತಾಯ
ಸಾಕ್ಷಿ ಇದೆಯೋ, ಇಲ್ಲವೋ ನಿಮಗ್ಯಾಕೆ? ಮಾಹಿತಿ ಬೇಕಿದ್ರೆ ತೆಗೆದುಕೊಳ್ಳಲಿ. ಅದು ಬಿಟ್ಟು ನೋಟೀಸ್ ಕೊಡಲು ಅವರು ಯಾರು? ಯಾವ ಕಾನೂನು ಹೇಳುತ್ತೆ? ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಟ್ಟಿರುವುದು ಸರಿಯಲ್ಲ ಎಂದು ಸಿಐಡಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಬೇರೆ ಬೇರೆ ಇಲಾಖೆಗಳ ನೇಮಕಾತಿ ಅಕ್ರಮವೂ ಇದೆ. ಮತ್ತೊಮ್ಮೆ ಎಲ್ಲವನ್ನೂ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಉಪಸ್ಥಿತರಿದ್ದರು.