-ಬಿಜೆಪಿಯವರು ಮನುಷ್ಯರನ್ನೇ ದ್ವೇಷಿಸುವ ಮತಾಂಧರು
ಚಿತ್ರದುರ್ಗ: ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿಗೆ ಲೂಟಿ ಮಾಡು, ಕಳ್ಳತನ ಮಾಡು ಅಂತಾ ನಾವು ಹೇಳಿಕೊಟ್ಟಿದ್ದೇವಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಬೀರಾನಂದ ಶ್ರೀ ಮಠದ ಸಮುದಾಯ ಭವನದ ಉದ್ಘಾಟನೆಗೆ ಆಗಮಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ, ಜನಾರ್ದನ ರೆಡ್ಡಿ ವಿರುದ್ಧ ಸರ್ಕಾರದಿಂದ ಷಡ್ಯಂತ್ರ ನಡೆಯುತ್ತಿಲ್ಲ. ಬಿಜೆಪಿಯವರು ಮನುಷ್ಯರನ್ನೇ ದ್ವೇಷಿಸುವ ಮತಾಂಧರು. ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತಾ ಹೇಳುತ್ತಾರೆ. ಆದರೆ ಅವರೇ ಸಮಾಜ ಛಿದ್ರ ಮಾಡಲು ಯತ್ನಿಸುತ್ತಿದ್ದಾರೆ. ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಕಾಂಗ್ರೆಸ್ ಕರ್ನಾಟಕದಲ್ಲಿ ಮಾತ್ರ ಪ್ರಬಲವಾಗಿದ್ದು, ನಾವು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
Advertisement
Advertisement
ಚರಿತ್ರೆ ಓದಿಕೊಳ್ಳದೆ ಮಾತನಾಡುವವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರಿಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ ಅವರು, ಅವನ್ಯಾವನೋ ಅನಂತಕುಮಾರ್ ಹೆಗ್ಡೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡುವುದಕ್ಕೆ ಅಂತಾನೆ. ಅವನೊಬ್ಬ ಮನುಷ್ಯನೇ, ದೇಶದ ಪ್ರಜೆ ಹೌದೋ ಅಲ್ಲವೋ ಎಂದು ಲೇವಡಿ ಮಾಡಿದರು.
Advertisement
ಸಿಎಂ ಪರ ಸಿದ್ದರಾಮಯ್ಯ ಬ್ಯಾಟಿಂಗ್:
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆರೋಗ್ಯ ಸರಿಯಿಲ್ಲ. ಹೀಗಾಗಿ ಟಿಪ್ಪು ಜಯಂತಿಯಿಂದ ಗೈರು ಆಗಿದ್ದಾರೆ ಎಂದು ಸಮರ್ಥಿಸಿಕೊಂಡ ಮಾಜಿ ಸಿಎಂ, ಟಿಪ್ಪು ಜಯಂತಿಯಿಂದ ಜೆಡಿಎಸ್ ದೂರ ಉಳಿದಿಲ್ಲ. ಕುಮಾರಸ್ವಾಮಿ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews