ರಾಮನಗರ: ಉಪಚುನಾವಣೆ (By Election) ಹಿನ್ನೆಲೆ ಮೂರು ಕ್ಷೇತ್ರಗಳ ಪ್ರಚಾರ ಭರಾಟೆ ಜೋರಾಗಿದೆ. ಲೋಕಾ ವಿಚಾರಣೆ ಬೆನ್ನಲ್ಲೇ ಚನ್ನಪಟ್ಟಣದಲ್ಲಿ ಬುಧವಾರ ಅಬ್ಬರದ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ (Siddaramaiah) ಅವರು, ದೇವೇಗೌಡ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Advertisement
ದೇವೇಗೌಡರೆ ಯಾಕೆ ಇಲ್ಲಿ ಬಂದು ಅಳ್ತೀರಾ? ನಿಮ್ಮ ಮೊಮ್ಮಗ ಹಾಸನದಲ್ಲಿ ನೂರಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ನಲ್ಲ ಅಲ್ಲಿ ಹೋಗಿ ಅಳಿ. ಇಲ್ಲಿ ಮೊಮ್ಮಗ 3ನೇ ಬಾರಿಗೆ ಸೋತುಬಿಡ್ತಾನೆ ಅಂತ ಬಂದು ಇಲ್ಲಿ ಅಳ್ತಾ ಇದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಆಯ್ತು ಈಗ ಅವರ ಮಗ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಅಳೋದು ಕಲ್ತಿದ್ದಾರೆ. ಅಳೋ ಗಂಡಸರನ್ನ ನಂಬಬಾರದಂತೆ. ಯಾಕೆ ಅಳಬೇಕು? ಕೆಲಸ ಮಾಡಿದ್ದರೆ ಯಾಕೆ ಅಳಬೇಕು? ಕರುಳು ಹಿಂಡಿಬಿಡುತ್ತಂತೆ, ಯಾಕೆ ಹಾಸನದಲ್ಲಿ ಅತಿ ದೊಡ್ಡ ಲೈಂಗಿಕ ಹಗರಣ ಆದಾಗ ಯಾಕೆ ಅಳಲಿಲ್ಲಾ? ಅಲ್ಲಿ ದೇವೇಗೌಡರಿಗೆ, ನಿಖಿಲ್ಗೆ ಅಳು ಬರಲಿಲ್ಲ ಈಗ ಚನ್ನಪಟ್ಟಣದಲ್ಲಿ ಅಳು ಬರುತ್ತಾ? ಎಂದು ಲೇವಡಿ ಮಾಡಿದ್ದಾರೆ.
Advertisement
Advertisement
40 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಒಂದೇ ಒಂದು ಕಪ್ಪು ಚುಕ್ಕಿ ನನ್ನ ಮೇಲೆ ಇಲ್ಲ. ಆದ್ರೆ ಈಗ ಬಿಜೆಪಿಯವರು ನನ್ನನ್ನ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನೇ ಮಾಡಿದರೂ ನನ್ನನ್ನ ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
Advertisement
ದೇವೇಗೌಡರು ನಿನ್ನೆ ಮೊಮ್ಮಗನ ಪರವಾಗಿ ವೋಟ್ ಕೇಳೋಕೆ ಬಂದಿದ್ದರು. ಇವತ್ತು ಬಂದಿದಾರಾ? ಆ ಸಿದ್ದರಾಮಯ್ಯನಿಗೆ ಗರ್ವ ಬಂದಿದೆ, ಅವರ ಗರ್ವ ಮುರಿಯಬೇಕು ಅಂದಿದ್ದಾರೆ. 92ನೇ ವಯಸ್ಸಿನಲ್ಲಿ ದೇವೇಗೌಡರು ಸುಳ್ಳು ಹೇಳ್ತಾರಲ್ಲಾ, ನಾನು ಆ ರೀತಿ ನಡೆದುಕೊಂಡಿದ್ದೀನಾ? ಅಧಿಕಾರ ಇದ್ದಾಗ ಇಲ್ಲದಿದ್ದಾಗಲೂ ಒಂದೇ ರೀತಿ ಇರ್ತೀನಿ ಎಂದು ತಿರುಗೇಟು ನೀಡಿದ್ದಾರೆ.