ಅಸಮರ್ಥ ಗೃಹ ಸಚಿವರು ಇರುವುದರಿಂದ ಇದೆಲ್ಲಾ ಬೆಳವಣಿಗೆಗಳು ಆಗುತ್ತಿವೆ: ಸಿದ್ದರಾಮಯ್ಯ

Public TV
2 Min Read
Siddaramaiah

ಬೆಂಗಳೂರು: ಅಸಮರ್ಥ ಗೃಹ ಸಚಿವರು ಇರುವುದರಿಂದ ಇದೆಲ್ಲಾ ಬೆಳವಣಿಗೆಗಳು ಆಗುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ಮಾಡಿದ್ದಾರೆ.

ತಮ್ಮ ನಿವಾಸದಲ್ಲಿ ಮಾತನಾಡಿದ ಸಿದ್ದರಾಮಯ್ಯ ಚಾಮರಾಜ ಪೇಟೆ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸಿ.ಟಿ.ರವಿ, ರವಿಕುಮಾರ್, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ನಗರ ಪೊಲೀಸ್ ಆಯುಕ್ತರ ಹೇಳಿಕೆಗಳು ವಿಭಿನ್ನವಾಗಿವೆ. ಪ್ರಚೋದನೆ ಮಾಡುವುದು ಬಿಜೆಪಿ ನಾಯಕರ ಉದ್ದೇಶ. ಇದು ಗೃಹ ಸಚಿವರ ವೈಫಲ್ಯ ಎತ್ತಿ ತೋರಿಸುತ್ತದೆ. ಹಿಂದೂಗಳನ್ನು ಪ್ರಚೋದಿಸುವುದು ಇವರ ಉದ್ದೇಶ. ಕಾನೂನು ಸುವ್ಯವಸ್ಥೆ ಕಾಪಾಡುವುದು ಇವರಿಂದ ಸಾಧ್ಯವಿಲ್ಲ. ಕಾನೂನು ಸುವ್ಯವಸ್ಥೆ ಸರಿ ಇಲ್ಲದಿದ್ದರೆ ದೇಶ, ರಾಜ್ಯ ಅಭಿವೃದ್ಧಿ ಆಗುವುದಿಲ್ಲ. ಬಿಜೆಪಿಯವರು ತಮ್ಮ ಸ್ವಾರ್ಥಕ್ಕಾಗಿ, ವೋಟಿಗಾಗಿ‌ ಭಾಷೆ, ಧರ್ಮ, ದ್ವೇಷದ ವಿಚಾರವನ್ನು ಮುಂದೆ ತಂದು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಇದನ್ನೂ ಓದಿ: BJP ಹೆಣದ ರಾಶಿ ಮೇಲೆ ರಾಜಕೀಯ ಮಾಡಿ ಲಾಭ ಪಡೆದುಕೊಳ್ಳುವ ಸಂಚು ಮಾಡ್ತಿದೆ: ಈಶ್ವರ್ ಖಂಡ್ರೆ

ಶಿವಮೊಗ್ಗದ ಹರ್ಷ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಗೆ ವಹಿಸಲಾಗಿದೆ. ಯಾರಾದರೂ ತನಿಖೆ ನಡೆಸಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಸರ್ಕಾರ ಇದೇ ನಿಲುವನ್ನು ದಿನೇಶ್ ಮತ್ತು ಸುಭಾನ್ ಹತ್ಯೆ ವಿಚಾರದಲ್ಲಿಯೂ ಅನುಸರಿಸಲಿ. ದಿನೇಶ್ ಕೊಲೆಗೆ ಭಜರಂಗ ದಳ, ಸುಭಾನ್ ಹತ್ಯೆಗೆ ಶ್ರೀರಾಮಸೇನೆ ಕಾರಣ. ಹರ್ಷ ಕುಟುಂಬದವರಿಗೆ 25 ಲಕ್ಷ ಪರಿಹಾರ ನೀಡಿದಂತೆ ದಿನೇಶ್ ಮತ್ತು ಸುಭಾನ್ ಕುಟುಂಬದವರಿಗೂ ಕೊಡಲಿ. ಕಾನೂನು ಎಲ್ಲರಿಗೂ ಒಂದೆ. ಇದರಲ್ಲಿ ತಾರತಮ್ಯ ಬೇಡ. ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣ- ಜಮೀರ್ ಹೇಳಿಕೆ ಬೆನ್ನಲ್ಲೇ ಸೈಮನ್ ರಾಜ್ ಕಣ್ಮರೆ

SIDDARAMAIAH
ಬಿಜೆಪಿಯವರು ದ್ವೇಷ ರಾಜಕಾರಣದ ಮೂಲಕ ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವೂ ರಾಜ್ಯದ ಜನರಿಗೆ ಅರ್ಥವಾಗುತ್ತದೆ. ಹಿಜಾಬ್ ಗದ್ದಲದಿಂದ ಇಲ್ಲಿಯವರೆಗೆ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಈಗ ಜನ ಬಿಜೆಪಿಯವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಯಾವುದೇ ಪ್ರಕರಣದಲ್ಲಿ ನಾವು ತಪ್ಪಿತಸ್ಥರು, ಕಾನೂನಿಗೆ ವಿರುದ್ಧವಾಗಿ ವರ್ತಿಸುವವರ ಪರ ನಿಲ್ಲುವುದಿಲ್ಲ. ಯಾರೇ ತಪ್ಪು ಮಾಡಿದರೂ, ಕಾನೂನು ಉಲ್ಲಂಘಿಸಿದರೂ ಶಿಕ್ಷೆಯಾಗಲಿ. ಕಾನೂನು ಸುವ್ಯವಸ್ಥೆ ಸರಿ ಇಲ್ಲ, ದ್ವೇಷದ ವಾತಾವರಣ ಇದೆ. ಸಮಾಜದಲ್ಲಿ ಅಶಾಂತಿ ಉಂಟಾಗಿದೆ ಎಂಬ ಕಾರಣಕ್ಕೆ ಕೈಗಾರಿಕೆಗಳು ರಾಜ್ಯದಿಂದ ಹೊರಗೆ ಹೋಗುತ್ತಿವೆ. ಬಂಡವಾಳ ಬರಬೇಕಾದರೆ ರಾಜ್ಯದಲ್ಲಿ ಉತ್ತಮ ವಾತಾವರಣ ಇರಬೇಕು. ಇದ್ದಂತಹ ಅಂತಹ ವಾತಾವರಣವನ್ನು ಬಿಜೆಪಿಯವರು ಹಾಳು ಮಾಡುತ್ತಿದ್ದಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *