ಮೈಸೂರು: ಮಹಾತ್ಮ ಗಾಂಧಿಯನ್ನು (Mahatma Gandhi) ಕೊಂದ ನಾಥೂರಾಂ ಗೋಡ್ಸೆ (Nathuram Godse) ಉತ್ಸವವರಿಂದ ನಾವು ಗಾಂಧೀಜಿ ಬಗ್ಗೆ ಕೇಳಿ ತಿಳಿದುಕೊಳ್ಳಬೇಕಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಟೀಕ್ರಾಪ್ರಹಾರ ನಡೆಸಿದ್ದಾರೆ.
ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ ವೇಳೆ ರಾಹುಲ್ ಗಾಂಧಿ (Rahul Gandhi) ನಕಲಿ ಗಾಂಧಿ ಎಂದು ಬಸವರಾಜ ಬೊಮ್ಮಾಯಿ ಅವರು ವಾಗ್ದಾಳಿ ನಡೆಸಿದ್ದರು. ಸಿಎಂ ಹೇಳಿಕೆಗೆ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ. ಅವರು ಗಾಂಧಿವಾದಿಗಳಾ? ಅವರು ಗಾಂಧಿ ಕೊಂದವರು. ಗಾಂಧಿ ಕೊಂದ ಗೋಡ್ಸೆ ಉತ್ಸವ ಮಾಡುವವರು. ಬೊಮ್ಮಾಯಿಗೆ ಗಾಂಧಿನೂ ಗೊತ್ತಿಲ್ಲಾ, ಗೋಡ್ಸೆನೂ ಗೊತ್ತಿಲ್ಲ, ಸಾವರ್ಕರ್ ಕೂಡ ಗೊತ್ತಿಲ್ಲ. ನಾಥೂರಾಂ ಗೋಡ್ಸೆ ಮೆರವಣಿಗೆ ಮಾಡಿದವರು ಇವರು. ಇವರಿಂದ ಗಾಂಧಿ ಬಗ್ಗೆ ಕೇಳಬೇಕಾ? ಎಂಥ ವಿಪರ್ಯಾಸ ಇದು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ನಕಲಿ ಗಾಂಧಿ: ಬೊಮ್ಮಾಯಿ
Advertisement
Advertisement
ಅವರು ಬಹಳ ಜನ ಬೇಲ್ ಮೇಲಿಲ್ವಾ? ಆರು ಜನ ಮಂತ್ರಿಗಳು ಆ್ಯಂಟಿಸಿಪೇಟರಿ ಬೇಲ್ ತೆಗೆದುಕೊಂಡರಲ್ಲ ಯಾಕ್ರೀ? ಕೋರ್ಟ್‌ಗೆ ಹೋಗಿ ಸ್ಟೇ ತೆಗೆದುಕೊಂಡು ಬಂದ್ರಲ್ಲ ಯಾಕೆ? ಟಿವಿಯಲ್ಲಿ ಅಶ್ಲೀಲ ಪ್ರಚಾರ ಆಗತ್ತೆ ಅಂತ ಸ್ಟೇ ತಂದರು. ಯಡಿಯೂರಪ್ಪ, ಸೋಮಣ್ಣ, ಅಶೋಕ ಬೇಲ್ ಮೇಲೆ ಇಲ್ವಾ? ಇವರ ಅಮಿತ್ ಶಾ ಅವರೇ ಜೈಲಿಗೆ ಹೋಗಿದ್ರಲ್ಲಪ್ಪ. ಶಾ ಏನಾಗಿದ್ರು, ಈಗ ಏನಾಗಿದ್ದಾರೆ? ಗೃಹ ಸಚಿವರೇ ಜೈಲಿಗೆ ಹೋಗಿದ್ರಲ್ಲಪ್ಪಾ ಎಂದು ಕುಟುಕಿದ್ದಾರೆ.
Advertisement
ಅವರ ತಟ್ಟೆಯಲ್ಲಿ ಹೆಣನೇ ಬಿದ್ದಿದೆ. ನಮ್ಮ ತಟ್ಟೆಯಲ್ಲಿ ನೊಣ ಬಿದ್ದಿದೆ ಅಂತಾರೆ. ಬಿಜೆಪಿಯವರನ್ನು ಅಧಿಕಾರದಿಂದ ತೆಗೆಯಲೇಬೇಕು ಅಂತ ಜನ ತೀರ್ಮಾನ ಮಾಡಿಬಿಟ್ಟಿದ್ದಾರೆ. ಈ ಸಲ ಜನರೇ ಬದಲಾವಣೆ ಮಾಡ್ತಾರೆ. ವರುಣ ಕ್ಷೇತ್ರದಿಂದ ನಿಲ್ಲಬೇಕು ಅಂತ ನಾನು ತೀರ್ಮಾನ ಮಾಡಿಲ್ಲ. ಎಲ್ಲಿ ನಿಲ್ಲಬೇಕು ಅಂತ ತೀರ್ಮಾನ ಮಾಡಿಲ್ಲ. 2 ತಿಂಗಳು ಬಿಟ್ಟು ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಜಯಂತಿ- ದ್ರೌಪದಿ ಮುರ್ಮು, ಸೋನಿಯಾ ಗಾಂಧಿ ಸೇರಿ ಗಣ್ಯರಿಂದ ನಮನ
Advertisement
ಅಡ್ವಾಣಿ ರಥಯತ್ರೆ ಮಾಡಿದ್ರಲ್ಲ, ಅದು ಶೋ ನಾ? ಮುರುಳಿ ಮನೋಹರ ಜೋಷಿ ಮಾಡಿದ ಯಾತ್ರೆ ಅದು ಶೋನಾ? ನಾವು ಮಾಡಿದ್ರೆ ಶೋ, ಅವರು ಮಾಡಿದರೆ ಜನಪರ ಯಾತ್ರೆನಾ? ಜನ ಬೆಂಬಲ ಇಲ್ಲದಿದ್ದರೆ ಬರೀ ಯಾತ್ರೆ ಮಾಡಿದರೆ ಆಗತ್ತಾ? ಬರೀ ಸಭೆ ಮಾಡಿದರೆ ಆಗುತ್ತಾ? ಅಲ್ಟಿಮೇಟ್ ಜನರೇ ಪ್ರಭುಗಳು ಎಂದು ಹೇಳಿದ್ದಾರೆ.